twitter
    For Quick Alerts
    ALLOW NOTIFICATIONS  
    For Daily Alerts

    2018ರ ಬಾಲಿವುಡ್ ಟಾಪ್ 10: 100ಪ್ಲಸ್ ಕೋಟಿ ರು ಗಳಿಕೆ ಕ್ಲಬ್

    |

    ಕಳೆದ ಒಂದು ದಶಕದಲ್ಲಿ ಹಿಂದಿ ಚಿತ್ರರಂಗ ತನ್ನ ವಾಣಿಜ್ಯ, ವಹಿವಾಟು ವಿಸ್ತರಿಸಿಕೊಂಡಿದೆ. ಅಮೆರಿಕ, ಆಸ್ಟ್ರೇಲಿಯಾ, ಯುರೋಪ್ ಮಾರುಕಟ್ಟೆಯಲ್ಲದೆ ಚೀನಾಕ್ಕೂ ಲಗ್ಗೆ ಇಟ್ಟು ಸೈ ಎನಿಸಿಕೊಂಡಿದೆ. ಬಾಲಿವುಡ್ ಚಿತ್ರಗಳ 100 ಕೋಟಿ ರು ಕ್ಲಬ್ ಓಪನ್ ಮಾಡಿದ್ದು ಯಾವ ಚಿತ್ರ ಎಂದು ಹುಡುಕಿಕೊಂಡು ಹೊರಟರೆ 1982ರ ಡಿಸ್ಕೋ ಡ್ಯಾನ್ಸರ್, 1994ರ ಹಮ್ ಆಪ್ಕೆ ಹೇ ಕೌನ್, ಧೂಮ್ 2 ಕಾಣ ಸಿಗುತ್ತದೆ.

    ಆದರೆ, 100 ಪ್ಲಸ್ ಕ್ಲಬ್ ಸರಿಯಾಗಿ ಆರಂಭವಾಗಿದ್ದು ಅಮೀರ್ ಖಾನ್ ಅಭಿನಯದ ಘಜನಿ ಚಿತ್ರದ ಮೂಲಕ ಎಂದರೆ ತಪ್ಪಾಗಲಾರದು. ಬಾಹುಬಲಿ 2, ದಂಗಲ್ ಬಂದ ಬಳಿಕ 1000 ಕೋಟಿ ರು ಗಳಿಕೆ ಕ್ಲಬ್ ಓಪನ್ ಆಗಿದೆ.

    2013 : 100 ಕೋಟಿ ರು ಕೊಳ್ಳೆ ಹೊಡೆದ ಚಿತ್ರಗಳು 2013 : 100 ಕೋಟಿ ರು ಕೊಳ್ಳೆ ಹೊಡೆದ ಚಿತ್ರಗಳು

    ತ್ವರಿತಗತಿಯಲ್ಲಿ 100 ಕೋಟಿ ರು ಕ್ಲಬ್ ಸೇರಿದ ಸಾಧನೆ ಸಲ್ಮಾನ್ ಖಾನ್ ಅಭಿನಯದ ದಬ್ಬಾಂಗ್ ಚಿತ್ರ ಕೇವಲ 5 ದಿನಗಳಲ್ಲಿ 100 ಕೋಟಿ ರು ಕ್ಲಬ್ ಸೇರಿತ್ತು. 2013ರಲ್ಲಿ ಈ ದಾಖಲೆಯನ್ನು ಧೂಮ್ 3, ಕ್ರಿಶ್ 3 ಹಾಗೂ ಚೆನ್ನೈ ಎಕ್ಸ್ ಪ್ರೆಸ್ ಮುರಿಯಿತು.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಳಿಕೆ ಹೊರತು ಪಡಿಸಿ ಚಿತ್ರದ ತೆರಿಗೆ ಪಾವತಿ ನಂತರ, ಸ್ಯಾಟಲೈಟ್, ಮ್ಯೂಸಿಕ್ ಹಾಗೂ ಡಿಜಿಟಲ್ ಹಕ್ಕು ಮಾರಾಟ ದರ ಸೇರಿಸಿ ಒಟ್ಟಾರೆ 100 ಕೋಟಿ ರು ಕ್ಲಬ್ ಸೇರಿದ ಹಿಂದಿ ಚಿತ್ರಗಳ ಪಟ್ಟಿ ಇಲ್ಲಿದೆ.

    #1, ಸಂಜು (342.53 ಕೋಟಿ ರು)

    #1, ಸಂಜು (342.53 ಕೋಟಿ ರು)

    ರಣಬೀರ್ ಕಪೂರ್, ಅನುಷ್ಕಾ ಶರ್ಮ, ಪರೇಶ್ ರಾವಲ್ ಅಭಿನಯದ ಸಂಜು ಚಿತ್ರಕ್ಕೆ ರಾಜ್ ಕುಮಾರ್ ಹಿರಾನಿ ಅವರ ನಿರ್ದೇಶನವಿದೆ. ನಟ ಸಂಜಯ್ ದತ್ ಅವರ ಜೀವನದ ಘಟನೆಗಳನ್ನು ಆಧಾರಿಸಿದ ಚಿತ್ರಕ್ಕೆ ಅಭಿಮಾನಿಗಳು ಹಾಗೂ ವಿಮರ್ಶಕರಿಂದ ಒಳ್ಳೆಯ ಮೆಚ್ಚುಗೆ ವ್ಯಕ್ತವಾಯಿತು. ಚಿತ್ರದ ಡೈಲಾಗ್ ಗಳು ವಿವಾದಕ್ಕೂ ಕಾರಣವಾಗಿತ್ತು.

    #2, ಪದ್ಮಾವತ್ (302.15 ಕೋಟಿ ರು)

    #2, ಪದ್ಮಾವತ್ (302.15 ಕೋಟಿ ರು)

    ರಾಣಿ ಪದ್ಮಾವತಿಯ ಕಥೆಯನ್ನು ಹೇಳುವ ರಜಪೂತ ರಾಜಮನೆತನದ ಹೋರಾಟದ ಕಥೆ ಭಾರಿ ವಿವಾದ ಸೃಷ್ಟಿಸಿತ್ತು. ಕಾರ್ನಿ ಸೇನೆಯ ಪ್ರತಿಭಟನೆಯ ನಡುವೆ ಪದ್ಮಾವತ್ ಎಂಬ ಹೆಸರಿನಲ್ಲಿ ಚಿತ್ರ ತೆರೆ ಕಂಡು ಭಾರಿ ಮೆಚ್ಚುಗೆ ಪಡೆಯಿತು. ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅಭಿನಯಕ್ಕೆ ಪ್ರೇಕ್ಷಕರು ಮಾರು ಹೋದರು. ಜನವರಿ 25, 2018ರಂದು ತೆರೆ ಕಂಡ ಚಿತ್ರಕ್ಕೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನವಿದೆ.

    #3, ರೇಸ್ 3 ( 166.40 ಕೋಟಿರು)

    #3, ರೇಸ್ 3 ( 166.40 ಕೋಟಿರು)

    ರೇಸ್ ಚಿತ್ರ ಸರಣಿಯ ಮೂರನೇ ಚಿತ್ರ ರೇಸ್ 3 ಜೂನ್ 15ರಂದು ಬಿಡುಗಡೆಯಾಯಿತು. ಸಲ್ಮಾನ್ ಖಾನ್ ಅಭಿನಯವೇ ಚಿತ್ರದ ಹೈಲೇಟ್ ಆಗಿದ್ದಲ್ಲದೆ, ಗಳಿಕೆಗೂ ಮೂಲ ಕಾರಣವಾಯಿತು. ವಿಮರ್ಶಕರಿಂದ ಅಷ್ಟಾಗಿ ಹೊಗಳಿಸಿಕೊಳ್ಳದ ಚಿತ್ರವನ್ನು ಅಭಿಮಾನಿಗಳು ಕೈ ಹಿಡಿದು ನಡೆಸಿ 100 ಕೋಟಿ ಕ್ಲಬ್ ದಾಟಿಸಿದರು.

    #4, ಭಾಗಿ2, (164.38 ಕೋಟಿ ರು)

    #4, ಭಾಗಿ2, (164.38 ಕೋಟಿ ರು)

    ಪಕ್ಕಾ ಸಾಹಸ ಪ್ರಧಾನ ಚಿತ್ರ ಭಾಗಿ2ನಲ್ಲಿ ಟೈಗರ್ ಶ್ರಾಫ್ ಆಕ್ಷನ್, ದಿಶಾ ಪಟಾನಿ ಮೈಮಾಟ ಯುವ ಪೀಳಿಗೆಗೆ ಇಷ್ಟವಾಯಿತು. ವಿಮರ್ಶಕರಿಂದ ಒಮ್ಮೆ ನೋಡಬಹುದಾದ ಸಿನಿಮಾ ಎಂದೆನಿಸಿಕೊಂಡಿದ್ದರೂ 100 ಕೋಟಿ ರು ಕ್ಲಬ್ ಸುಲಭವಾಗಿ ಸೇರಿತು.

    #5, ಸ್ತ್ರೀ (129.90 ಕೋಟಿ ರು)

    #5, ಸ್ತ್ರೀ (129.90 ಕೋಟಿ ರು)

    ಅಮರ್ ಕೌಶಿಕ್ ನಿರ್ದೇಶನದ ಹಾರರ್ ಚಿತ್ರ ಸ್ತ್ರೀ ಅನಿರೀಕ್ಷಿತವಾಗಿ ಹಿಟ್ ಆದ ಚಿತ್ರ ಎನಿಸಿಕೊಂಡಿದೆ. ವಿಮರ್ಶಕರ ಮೆಚ್ಚುಗೆ ಪಡೆದಿದ್ದ ಈ ಚಿತ್ರದಲ್ಲಿ ರಾಜ್ ಕುಮಾರ್ ರಾವ್, ಶ್ರದ್ಧಾಕಪೂರ್ ಅಭಿನಯವೆ ಜೀವಾಳ.

    #6, ರಾಝಿ(123.84 ಕೋಟಿ ರು)

    #6, ರಾಝಿ(123.84 ಕೋಟಿ ರು)

    ಅಲಿಯಾ ಭಟ್ ನಟನೆಗೆ ಮೆಚ್ಚುಗೆ ಪಡೆದ ರಾಝಿ ಚಿತ್ರದಲ್ಲಿ ವಿಕಿ ಕೌಶಲ್, ಅಮೃತಾ ಖಾನ್ವಿಲಿಕರ್ ಅಭಿನಯಿಸಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶನ ಹಾಗೂ ಚಿತ್ರಕಥೆ ಹಾಗೂ ಕ್ಲೈಮ್ಯಾಕ್ಸ್ ನಲ್ಲಿನ ತಿರುವು ಜನಕ್ಕೆ ಮೆಚ್ಚುಗೆಯಾಯಿತು.

    #7, ಸೋನು ಕೆ ಟಿಟು ಕಿ ಸ್ವೀಟಿ (108.95 ಕೋಟಿ ರು)

    #7, ಸೋನು ಕೆ ಟಿಟು ಕಿ ಸ್ವೀಟಿ (108.95 ಕೋಟಿ ರು)

    ಕಾಮಿಡಿ -ರೋಮ್ಯಾನ್ಸ್ ಚಿತ್ರ ಸೋನು ಕೆ ಟಿಟು ಕಿ ಸ್ವೀಟಿ ಚಿತ್ರದಲ್ಲಿ ಕಾರ್ತಿಕ್ ಆರ್ಯನ್, ನುಶ್ರತ್ ಭರುಚಾ ಹಾಗೂ ಸನ್ನಿ ಸಿಂಗ್ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರದ ಹಾಸ್ಯ ಸನ್ನಿವೇಶಗಳು ಚಿತ್ರವನ್ನು ಗೆಲ್ಲುವಂತೆ ಮಾಡಿದೆ.

    #8, ಗೋಲ್ಡ್ (104.72 ಕೋಟಿ ರು)

    #8, ಗೋಲ್ಡ್ (104.72 ಕೋಟಿ ರು)

    ಕ್ರೀಡಾ ಸಾಧಕರ ಜೀವನ ಚರಿತ್ರೆ ಆಧಾರಿತ ಚಿತ್ರಗಳ ಟ್ರೆಂಡ್ ಕಡಿಮೆಯಾಗುತ್ತಿದೆ ಎಂಬ ಸಮಯದಲ್ಲಿ ಬಂದ ಗೋಲ್ಡ್ ಚಿತ್ರವು ಬಹು ನಿರೀಕ್ಷೆ ಹುಟ್ಟಿಸಿತ್ತು. ಅಕ್ಷಯ್ ಕುಮಾರ್, ಮೌನಿರಾಯ್, ಕುನಾಲ್ ಕಪೂರ್ ಅಭಿನಯದ ಈ ಚಿತ್ರವು ಹಾಕಿ, ಒಲಿಂಪಿಕ್ಸ್ ಥ್ರಿಲ್ಲಿಂಗ್ ಸನ್ನಿವೇಶವನ್ನು ಒಳಗೊಂಡಿದೆ.

    #9 ರೈಡ್ (103.07 ಕೋಟಿ ರು)

    #9 ರೈಡ್ (103.07 ಕೋಟಿ ರು)

    ರಾಜ್ ಕುಮಾರ್ ಗುಪ್ತಾ ನಿರ್ದೇಶನದ ಬಾಲಿವುಡ್ ಕ್ರೈಂ ಕಥಾನಕದಲ್ಲಿ ಅಜಯ್ ದೇವಗನ್, ಇಲಿಯಾನಾ ಡಿ ಕ್ರೂಜ್ ಅಭಿನಯ ಜನಕ್ಕೆ ಮೆಚ್ಚುಗೆ ಗಳಿಸಿತು.

    #10, ಬಾಧಾಯಿ ಹೋ (100 ಕೋಟಿ ರು)

    #10, ಬಾಧಾಯಿ ಹೋ (100 ಕೋಟಿ ರು)

    ಅಮಿತ್ ರವೀಂದ್ರನಾಥ್ ಶರ್ಮ ನಿರ್ದೇಶನದ ಬಾಧಾಯಿ ಹೋ ಚಿತ್ರದಲ್ಲಿ ಅಯುಷ್ಮಾನ್ ಖುರಾನಾ, ಸನ್ಯಾ ಮಲ್ಹೋತ್ರಾ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಹಾಸ್ಯ ಪ್ರಧಾನ ಚಿತ್ರಕ್ಕೆ ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತು.

    English summary
    It is not so easy for the Bollywood movies to collect 100 Crores at the domestic market. Like the previous year, Bollywood is having a bad time this year too. Only a few movies have reached the 100 sCr milestone in 2018. Here's a list of 100 Crore Bollywood movies of 2018.
    Tuesday, November 6, 2018, 17:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X