»   » ಡಿಸೆಂಬರ್‌ನಲ್ಲಿ ಬಿಗ್‌ಬಿ '102 ನಾಟ್ ಔಟ್'ಗೆ ವಿದ್ಯಾಬಾಲನ್ ಚಿತ್ರ ಸವಾಲ್

ಡಿಸೆಂಬರ್‌ನಲ್ಲಿ ಬಿಗ್‌ಬಿ '102 ನಾಟ್ ಔಟ್'ಗೆ ವಿದ್ಯಾಬಾಲನ್ ಚಿತ್ರ ಸವಾಲ್

Posted By:
Subscribe to Filmibeat Kannada

ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಹಿರಿಯ ನಟ ರಿಷಿ ಕಪೂರ್ ಅಭಿನಯದ ಊಮೇಶ್ ಶುಕ್ಲ ನಿರ್ದೇಶನದ '102 ನಾಟ್ ಔಟ್' ಚಿತ್ರ ಡಿಸೆಂಬರ್ 1 ಕ್ಕೆ ತೆರೆಕಾಣಲಿದೆ, ಈ ಚಿತ್ರದ ಎದುರು ವಿದ್ಯಾಬಾಲನ್ ಅಭಿನಯದ 'ತುಮ್ಹಾರಿ ಸುಲು' ಸಿನಿಮಾ ಸಹ ಬಿಡುಗಡೆ ಆಗುತ್ತಿದ್ದು, ಬಿಗ್‌ಬಿ ಚಿತ್ರಕ್ಕೆ ಸವಾಲು ಎದುರಾಗಿದೆ.

'102 ನಾಟ್ ಔಟ್' ಚಿತ್ರದಲ್ಲಿ ಅಮಿತಾಬ್ ಬಚ್ಚನ್ 102 ವರ್ಷದ ಮುದುಕನ ಪಾತ್ರದಲ್ಲಿ ಮತ್ತು ಅವರ ಮಗನಾಗಿ ರಿಷಿ ಕಪೂರ್ 75 ವರ್ಷದ ಮುದುಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣವನ್ನು ಜುಲೈ ವೇಳೆಗೆ ಚಿತ್ರತಂಡ ಆದಷ್ಟು ಮುಗಿಸಬೇಕು ಎಂದು ನಿರ್ಧರಿಸಿದೆ.

102 Not Out To Clash With Tumhari Sulu

ಅಂದಹಾಗೆ ಬಿಗ್‌ಬಿ 102 ವರ್ಷದ ಮುದುಕನಾಗಿ ಅಭಿನಯಿಸುತ್ತಿರುವ ಸಿನಿಮಾ ಲೇಖಕ ಮತ್ತು ನಿರ್ದೇಶಕರು ಆದ ಸೌಮ್ಯ ಜೋಶಿ ರವರ ಯಶಸ್ವಿ ಗುಜರಾತಿ ನಾಟಕ ಆಧರಿತ ಚಿತ್ರವಾಗಿದೆ. ಅಪ್ಪ ಮತ್ತು ಮಗನ ನಡುವಿನ ಅವಿನಾಭವ ಮತ್ತು ಅಪಾರ ಪ್ರೀತಿಯ ಎಳೆಯನ್ನು ಚಿತ್ರದ ಕಥೆ ಹೊಂದಿದೆ. ಚಿತ್ರದಲ್ಲಿ ಇಬ್ಬರು ಸಹ ಗುಜರಾತಿ ಭಾಷೆಯಲ್ಲಿ ಅಲ್ಲಲ್ಲಿ ಮಾತನಾಡಲಿದ್ದಾರಂತೆ.

ಅಮಿತಾಬ್ ಬಚ್ಚನ್ ಮತ್ತು ರಿಷಿ ಕಪೂರ್ 2 ದಶಕಗಳ ನಂತರ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದು, ಈ ಹಿಂದೆ 'ಅಮರ್ ಅಕ್ಬರ್ ಆಂಥೋನಿ' ಮತ್ತು 'ನಸೀಬ್' ಹಾಗೂ 'ಕಭಿ ಕಭೀ' ಚಿತ್ರಗಳಲ್ಲಿ ನಟಿಸಿದ್ದರು. ಈ ಇಬ್ಬರು ಒಟ್ಟಿಗೆ ನಟಿಸುತ್ತಿರುವ ಚಿತ್ರ ಡಿಸೆಂಬರ್ ನಲ್ಲಿ ತೆರೆಕಾಣಲಿದ್ದು, ಈ ಚಿತ್ರಕ್ಕೆ ವಿದ್ಯಾಬಾಲನ್ ಅಭಿನಯನ 'ತುಮ್ಹಾರಿ ಸುಲು(Tumhari Sulu)' ಎದುರಾಗಿ ಬಿಡುಗಡೆ ಆಗಲಿದೆ ಎಂದು ಮೂಲಗಳಿಂದ ತಿಳಿದಿದೆ.

English summary
Megastar Amitabh Bachchan and veteran actor Rishi Kapoor-starrer '102 Not Out', directed by Umesh Shukla, will release on December 1 and will be clashing with Vidya Balan starrer 'Tumhari Sulu'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada