twitter
    For Quick Alerts
    ALLOW NOTIFICATIONS  
    For Daily Alerts

    ತುಂಬು ಗರ್ಭಿಣಿ ಐಶ್ವರ್ಯ ರೈ ಸುಸೂತ್ರ ಹೆರಿಗೆಗೆ ವಿಘ್ನ

    By Rajendra
    |

    Aishwarya Rai
    ತುಂಬು ಗರ್ಭಿಣಿ ಬಾಲಿವುಡ್ ತಾರೆ ಐಶ್ವರ್ಯ ರೈ ಸುಸೂತ್ರ ಹೆರಿಗೆಗೆ ದಿಢೀರ್ ಎಂದು ವಿಘ್ನವೊಂದು ಎದುರಾಗಿದೆ. ಅದೇನಪ್ಪಾ ಅಂದ್ರೆ ಐಶ್ವರ್ಯ ರೈ ದಾಖಲಾಗಿರುವ ಮುಂಬೈನ ಸುಸಜ್ಜಿತ ಸೆವೆನ್ ಹಿಲ್ಸ್ ಆಸ್ಪತ್ರೆಯ ನರ್ಸ್‌ಗಳು ಇದ್ದಕ್ಕಿದ್ದಂತೆ ಸಾಂಕೇತಿಕ ಮುಷ್ಕರ ನಡೆಸಿದರು.

    ಆದರೆ ಐಶ್ವರ್ಯ ರೈ ಹೆರಿಗೂ ಅವರ ಮುಷ್ಕರಕ್ಕೂ ಸಂಬಂಧವಿಲ್ಲದಿದ್ದರೂ. ಇದೇ ಸೂಕ್ತ ಸಮಯ ಎಂದುಕೊಂಡು ನರ್ಸ್‌ಗಳು ತಮ್ಮ ಬಹುದಿನಗಳ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ. ಆದರೆ ಆಸ್ಪತ್ರೆ ಮ್ಯಾನೇಜ್‌ಮೆಂಟ್ ಇವರ ಮುಷ್ಕರಕ್ಕೆ ಕವಡೆಕಾಸಿನ ಕಿಮ್ಮತ್ತು ಕೊಟ್ಟಿಲ್ಲ.

    ಇಷ್ಟಕ್ಕೂ ಅವರ ಬೇಡಿಕೆ ಏನೆಂದರೆ ಸಂಬಳ ಹೆಚ್ಚಿಸಬೇಕು ಎಂಬುದು. ಬಹಳ ದಿನಗಳಿಂದ ನಾವು ಕಾದದ್ದೇ ಬಂತು. ಕಡೆಗೂ ಆಸ್ಪತ್ರೆ ಮ್ಯಾನೇಜ್‌ಮೆಂಟ್ ನಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ. ವಿಧಿಯಿಲ್ಲದೆ ನಾವು ಮುಷ್ಕರಕ್ಕೆ ಮುಂದಾದೆವು ಎಂದಿದ್ದಾರೆ.

    ಐಶ್ವರ್ಯ ರೈಗೆ ಸುಸೂತ್ರ ಹೆರಿಗೆ ಮಾಡಿಸಿ ಮನೆಗೆ ಕಳುಹಿಸುವ ಭರವಸೆಯನ್ನು ಬಚ್ಚನ್ ಕುಟುಂಬಕ್ಕೆ ಆಸ್ಪತ್ರೆ ಮ್ಯಾನೇಜ್‌ಮೆಂಟ್ ನೀಡಿತ್ತು. ಆದರೆ ಇದ್ದಕ್ಕಿದ್ದಂತೆ ನರ್ಸ್‌ಗಳು ಕೈಯೆತ್ತಿದ್ದ ಮೇಲೆ ಮ್ಯಾನೇಜ್‌ಮೆಂಟ್‌ ಎಚ್ಚೆತ್ತುಕೊಂಡು ರಾತ್ರೋರಾತ್ರಿ ಸಮಸ್ಯೆಯನ್ನು ಪರಿಹರಿಸಿದೆ.

    ಬಳಿಕ ಮುಷ್ಕರವನ್ನು ನರ್ಸ್‌ಗಳು ವಾಪಸ್ಸು ತೆಗೆದುಕೊಂಡಿದ್ದಾಗಿ ತಿಳಿದುಬಂದಿದೆ. ಈ ಬಗ್ಗೆ ಆಸ್ಪತ್ರೆ ಮ್ಯಾನೇಜ್‌ಮೆಂಟ್ ಮಾತ್ರ ತುಟಿಪಿಟಕ್ ಎನ್ನುತ್ತಿಲ್ಲ.
    ಶೇ.15ರಷ್ಟು ಸಂಬಳ ಏರಿಕೆ ಮಾಡುವುದಾಗಿ ಹೇಳಿದ್ದರಂತೆ. ನರ್ಸ್‌ಗಳ ಮೂಗಿಗೆ ಕೊಂಚ ತುಪ್ಪ ಸವರಿ ಅವರ ಮುಷ್ಕರಕ್ಕೆ ಅಂತ್ಯ ಹಾಡಿದ್ದಾರೆ. (ಏಜೆನ್ಸೀಸ್)

    English summary
    With Bollywood star Aishwarya Rai Bachchan's delivery date becoming national news and celebrated across media channels, the nurses in the hospital where Aishwarya is due to be admitted is determined to make most of the hype and make noise for their demands. The nurses of the Seven Hills Hospital carried out a flash strike on Nov 9 for around three hours thereby arm-twisting the hospital administration to agree to their demands.
    Saturday, November 12, 2011, 6:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X