»   » ರಜನಿರಾಜಕೀಯಕ್ಕೆ ಧುಮುಕಲು ಬಿಜೆಪಿ ಒತ್ತಾಯ!

ರಜನಿರಾಜಕೀಯಕ್ಕೆ ಧುಮುಕಲು ಬಿಜೆಪಿ ಒತ್ತಾಯ!

Posted By:
Subscribe to Filmibeat Kannada

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಸ್ಪರ್ಧಿಸುವಂತೆ ಬಿಜೆಪಿ ಒತ್ತಾಯಿಸಿದೆ.ಈಗಾಗಲೇ ತೆಲುಗು ಚಿತ್ರರಂಗದ ಪ್ರಮುಖ ನಟ ಚಿರಂಜೀವಿ ರಾಜಕೀಯ ಪ್ರವೇಶ ಮಾಡಿ ಆಂಧ್ರದಲ್ಲಿ ಸಂಚಲನ ಉಂಟು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಜನಿಕಾಂತ್ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ.

''ರಜನಿಕಾಂತ್ ರಾಜಕೀಯ ಪಕ್ಷ ಆರಂಭಿಸಲು ಇದು ಸೂಕ್ತಸಮಯ. ಈಗಾಗಲೆ ತಮಿಳರ ಅಪಾರ ಅಭಿಮಾನ ಗಳಿಸಿರುವ ರಜನಿ ಆಂಧ್ರಪ್ರದೇಶದಲ್ಲಿ ಚಿರಂಜೀವಿ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದಂತೆ ತಮಿಳುನಾಡಿನಲ್ಲಿ ರಜನಿಆರಂಭಿಸಿದರೆ ಖಂಡಿತ ಅವರು ರಾಜಕೀಯವಾಗಿ ಜಯಗಳಿಸುತ್ತಾರೆ. ಇದನ್ನು ನಾವು ಸ್ವಾಗತಿಸುತ್ತೇವೆ '' ಎನ್ನುತ್ತಾರೆ ಬಿಜೆಪಿ ಸಂಸದ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಎಸ್.ತಿರುಣವುಕ್ಕರಸರ್.

ಕೊಯಮತ್ತೂರಿನಲ್ಲಿ ರಜನಿಕಾಂತ್ ಅಭಿಮಾನಿಗಳ ಒಂದು ಬಳಗ ದೇಸೀಯ ದ್ರಾವಿಡಿಯನ್ ಮಕ್ಕಳ ಮುನ್ನೇತ್ರ ಕಳಗಂ(ಡಿಡಿಎಂಕೆ) ಎಂಬ ಹೊಸ ಪಕ್ಷವನ್ನು ಉದ್ಘಾಟಿಸಿತು. ಈ ಸಂದರ್ಭದಲ್ಲಿ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ''ರಾಜಕೀಯ ಪಕ್ಷವನ್ನ್ನು ಪ್ರಕಟಿಸುವಲ್ಲಿ ರಜನಿಕಾಂತ್ ತಡಮಾಡುತ್ತಿದ್ದಾರೆ''ಎಂದರು. ಒಂದು ವೇಳೆ ರಜನಿ ಹೊಸ ಪಕ್ಷವನ್ನು ಕಟ್ಟಿದರೆ ಬಿಜೆಪಿ ಅದರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆಯೆ ಎಂಬ ಪ್ರಶ್ನೆಗೆ, ''ಅವರು ಹೊಸ ಪಕ್ಷ ಕಟ್ಟಿದರು ಸರಿ ಅಥವಾ ಬಿಜೆಪಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡರೂ ಸರಿ ನಾವು ಎರಡೂ ಬೆಳವಣಿಗೆಗಳನ್ನು ಸ್ವಾಗತಿಸುತ್ತೇವೆ ಎಂದರು.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada