»   » ವಾಸಿಂ ಜೊತೆ ಸುಷ್ಮಿತಾ ಕಣ್ಣಾ ಮುಚ್ಚೆ ಕಾಡೆ ಗೂಡೆ!

ವಾಸಿಂ ಜೊತೆ ಸುಷ್ಮಿತಾ ಕಣ್ಣಾ ಮುಚ್ಚೆ ಕಾಡೆ ಗೂಡೆ!

Posted By:
Subscribe to Filmibeat Kannada

ಮಾಜಿ ವಿಶ್ವಸುಂದರಿ ಹಾಗೂ ಬಾಲಿವುಡ್ ತಾರೆ ಸುಷ್ಮಿತಾ ಸೇನ್ ತನ್ನ ಚಿತ್ರಗಳಿಗಿಂತಲೂ ಹೆಚ್ಚಾಗಿ ಪ್ರೇಮ ಪ್ರಸಂಗಗಳಿಂದ ಸುದ್ದಿ ಮಾಡುತ್ತಿದ್ದಾರೆ. ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಜೊತೆ ಆಕೆಯ ಹೆಸರು ಅಂಟಿಕೊಂಡಿದೆ. ವಾಸಿಂ ಜೊತೆ ಸುಷ್ಮಿತಾ ಕಣ್ಣಾ ಮುಚ್ಚೆ ಕಾಡೆ ಗೂಡೆ, ಲಗೋರಿ ಎಲ್ಲಾ ಆಟಗಳನ್ನು ಆಡಿದ್ದಾಗಿ ಸುದ್ದಿಯಾಗಿದೆ.

ಮಾಧ್ಯಮಗಳಲ್ಲಿ ಬಂದಿರುವಂತೆ ವಾಸಿಂ ಜೊತೆ ನನಗೆ ಯಾವುದೇ ಸಂಬಂಧವಿಲ್ಲ. ಇದೆಲ್ಲಾ ಸುಳ್ಳೇ ಸುಳ್ಳು ಎಂದು ಹೇಳಿದ್ದಾರೆ. ವಾಸಿಂನನ್ನು ನಾನು ಮದುವೆಯಾಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ವಾಸಿಂನನ್ನು ಮದುವೆಯಾಗುವ ಬಯಕೆಯು ಇಲ್ಲ ಎಂದಿದ್ದಾರೆ. ಆದರೆ ವಾಸಿಂ ಮಾತ್ರ ಅದ್ಭುತ ಮನುಷ್ಯ ಎಂದು ಪ್ರತಿಕ್ರಿಯಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ವಾಸಿಂ ಅಕ್ರಂ ಹಾಗೂ ಸುಷ್ಮಿತಾ ಸೇನ್ ಇಬ್ಬರೂ ಯಾವುದೋ ರಿಯಾಲಿಟಿ ಶೋ ಒಂದರಲ್ಲಿ ಒಬ್ಬರಿಗೊಬ್ಬರು ಆತ್ಮೀಯರಾದರಂತೆ. ಕಳೆದ ಅಕ್ಟೋಬರ್ ನಲ್ಲಿ ವಾಸಿಂರ ಪತ್ನಿ ಹುಮಾ ನಿಧನದ ಬಳಿಕ ಇವರಿಬ್ಬರು ಸಂಬಂಧ ಮತ್ತಷ್ಟು ಗಾಢವಾಯಿತು ಎಂಬುದು ಸುದ್ದಿ. ಆದರೆ ಸುಷ್ಮಿತಾ ಮಾತ್ರ ಇದನ್ನು ಸುತಾರಾಂ ಒಪ್ಪುತ್ತಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada