»   » ಸಲ್ಲು ಪ್ರೆಸ್ ಮೀಟ್ ನಲ್ಲಿ ಐದು ಮಂದಿಗೆ ಗಾಯ

ಸಲ್ಲು ಪ್ರೆಸ್ ಮೀಟ್ ನಲ್ಲಿ ಐದು ಮಂದಿಗೆ ಗಾಯ

Posted By:
Subscribe to Filmibeat Kannada

ಜನವರಿ 22ರಂದು ಬಿಡುಗಡೆಗೊಳ್ಳಲಿರುವ 'ವೀರ್'ದ ಪ್ರಚಾರ ಕಾರ್ಯಕ್ಕಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಶನಿವಾರ ಹೈದರಾಬಾದ್ ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಭಾಗವಹಿಸಿದ್ದರು.

ಸಲ್ಮಾನ್ ಖಾನ್ ರನ್ನು ನೋಡಲು ಬಂದ ಅಭಿಮಾನಿಗಳ ನಡುವೆ ನೂಕು ನುಗ್ಗಲು ಸಂಭವಿಸಿತು. ನೂಕು ನುಗ್ಗಲಿನಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ. ಸೂಕ್ತ ಭದ್ರತೆಯನ್ನ್ನು ಒದಗಿಸದೆ ಇರುವುದೇ ಘಟನೆಗೆ ಕಾರಣ ಎನ್ನಲಾಗಿದೆ.

ಈ ಹಿಂದೆ ಜೈಪುರ್ ನಲ್ಲಿ 'ವೀರ್' ಚಿತ್ರೀಕರಣದ ವೇಳೆ ಅಂಬರ್ ಕೋಟೆಯ ಒಂದು ಭಾಗ ಕುಸಿದು ಬಿದ್ದು 15 ಮಂದಿ ಗಾಯಗೊಂಡಿದ್ದರು. ಐತಿಹಾಸಿಕ ಸ್ಥಳದಲ್ಲಿ ಚಿತ್ರೀಕರಣಕ್ಕ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಖಾನ್ ವಿರುದ್ಧ ದೂರು ದಾಖಲಿಸಲಾಗಿತ್ತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada