»   »  ಕೇತನ್ ರ ಹೊಸ ಝಾನ್ಸಿ ರಾಣಿ ಐಶ್ವರ್ಯ ರೈ

ಕೇತನ್ ರ ಹೊಸ ಝಾನ್ಸಿ ರಾಣಿ ಐಶ್ವರ್ಯ ರೈ

Posted By:
Subscribe to Filmibeat Kannada
Ketan Mehtas New Rani of Jhansi
ಹಳಿ ತಪ್ಪಿದ ರೈಲಿನಂತಾಗಿದ್ದ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಹೆಸರಿನ ಬಾಲಿವುಡ್ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ. ರೈಲ್ವೆ ಸ್ಟೇಷನ್ ನಲ್ಲೇ ನಿಂತುಬಿಟ್ಟಿದ್ದ ಈ ಚಿತ್ರಕ್ಕೆ ಕಡೆಗೂ ಮೋಕ್ಷ ಸಿಕ್ಕಂತಾಗಿದೆ.

ಕೇತನ್ ಮೆಹತಾ ಈ ಚಿತ್ರಕ್ಕಾಗಿ ಕತೆ, ಚಿತ್ರಕತೆಯನ್ನು ಸಿದ್ಧಪಡಿಸಿಕೊಂಡಿದ್ದರು. ಚಿತ್ರದ ಮುಖ್ಯ ಪಾತ್ರಕ್ಕಾಗಿ ಐಶ್ವರ್ಯ ರೈ ಅವರನ್ನು ಆಯ್ಕೆ ಮಾಡಿಕೊಂಡಿದ್ದ್ದರು. ಐಶ್ ಸಹ ಚಿತ್ರದ ಪಾತ್ರಕ್ಕಾಗಿ ಸಾಕಷ್ಟು ಶ್ರಮಿಸಿದ್ದರು. ಕುದುರೆ ಸವಾರಿ, ಕತ್ತಿ ವರಸೆಯಲ್ಲಿ ತರಬೇತಿಯನ್ನೂ ಪಡೆದಿದ್ದರು. ಇನ್ನೇನು ಚಿತ್ರ ಸೆಟ್ಟೇರಬೇಕು ಎನ್ನುವ ಹೊತ್ತಿಗೆ ಸುಸ್ಮಿತಾ ಸೇನ್ ಸಹ ಇದೇ ಕಥಾಂಶವುಳ್ಳ ಸಿನಿಮಾವನ್ನು ತೆಗೆಯುತ್ತಿದ್ದಾರೆಂದು ಚಿತ್ರೋದ್ಯಮದಲ್ಲಿ ಗುಲ್ಲೆದ್ದಿತು.

ಸ್ವತಃ ತಾವೇ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಶೀರ್ಷಿಕೆ ಪಾತ್ರವನ್ನು ಪೋಷಿಸುತ್ತಿರುವುದಾಗಿ ಸುಸ್ಮಿತಾ ಪ್ರಕಟಿಸಿಯೂ ಬಿಟ್ಟರು! ಕೇತನ್ ಮೆಹತಾ ಪರಿಸ್ಥಿತಿ ಭೂಮಿ ಬಾಯ್ಬಿಟ್ಟಂತಾಯ್ತು. ಅವರು ವಿಧಿಯಿಲ್ಲದೆ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಚಿತ್ರಕ್ಕೆ ಎಳ್ಳುನೀರು ಬಿಟ್ಟರು. ಇತ್ತೀಚೆಗೆ ಸುಸ್ಮಿತಾ ತಮ್ಮ ಆಲೋಚನೆಯನ್ನು ಬದಲಾಯಿಸಿಕೊಂಡು ಝಾನ್ಸಿ ರಾಣಿ ಸಿನಿಮಾ ತೆಗೆಯುವ ಉದ್ದೇಶ ತಮಗಿಲ್ಲವೆಂದು ಸ್ಪಷ್ಟಪಡಿಸಿದರು.

ಕೂಡಲೆ ಕೇತನ್ ದೂಳು ತಿನ್ನುತ್ತಿದ್ದ ತಮ್ಮ ಹಳೆಯ ಸ್ಕ್ರಿಪ್ಟ್ ನ ರಿಪೇರಿ ಕಾರ್ಯದಲ್ಲಿ ಮಗ್ನರಾದರು.ಐಶ್ ರೊಂದಿಗೆ ಝಾನ್ಸಿ ಪಾತ್ರ ಪೋಷಿಸುವ ಕುರಿತು ಈಗಾಗಲೇ ಮಾತುಕತೆ ನಡೆದಿದೆ. ಐಶ್ ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರದಲ್ಲೇ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಮತ್ತೆ ಹಳಿ ಹತ್ತಲಿದೆ.

(ಏಜೆನ್ಸೀಸ್)

ಹೊಸ ವಿವಾದದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ
ಲೋಕಸಭೆಗೆ ಐಶ್ವರ್ಯ ರೈ ಬೆಕ್ಕಿನ ನಡಿಗೆ!
ಟವೆಲ್ ನಲ್ಲಿ ಬಂಧಿಯಾದ ಐಶ್ವರ್ಯ ರೈ ವಿಡಿಯೊ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada