For Quick Alerts
  ALLOW NOTIFICATIONS  
  For Daily Alerts

  ಮಧುರ ಮಾತಿಗೆ ಮರುಳಾದ ಐಶ್, ರೇಟ್ ಇಳಿಕೆ

  By Mahesh
  |

  ಬಾಲಿವುಡ್‌ ಆರ್ಥಿಕ ಬಿಕ್ಕಟ್ಟಿನಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಆದರೆ, ಕಷ್ಟಕಾಲದಲ್ಲೂ ನಟಿ ಮಣಿಯರು ತಮ್ಮ ಸಂಭಾವನೆ ರೇಟ್ ಇಳಿಸಿದಿಲ್ಲ. ಆದರೆ, ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್, ದಿಢೀರ್ ಎಂದು ತಮ್ಮ ಸಿನಿಮಾ ರೇಟ್ ಇಳಿಸಿದ್ದಾರೆ. ಎಲ್ಲಾ ಪ್ರತಿಭಾವಂತ ನಿರ್ದೇಶಕ ಮಧುರ್ ಗಾಗಿ. ಬಹು ತಾರಾಗಣವುಳ್ಳ ಜೀರೋ ಬಜೇಟ್ ಚಿತ್ರ ಎಂದೇ ಜನಪ್ರಿಯತೆ ಗಳಿಸುತ್ತಿರುವ ಮುಂಬರುವ ಚಿತ್ರ ಹೀರೋಯಿನ್ ಬಜೆಟ್ 18 ಕೋಟಿ ರೂ ಎಂದರೆ ನಂಬಲು ಸ್ವಲ್ಪ ಕಷ್ಟವಾಗುತ್ತದೆ.

  ಬಾಲಿವುಡ್ ಚಿತ್ರಗಳಿಗೆ ಹೊಸ ರೀತಿ ಟಚ್ ನೀಡಿದ ಮಧುರ್ ಭಂಡಾರ್ಕರ್, ಈ ಚಿತ್ರದ ಬಜೆಟ್ ನ ಕರೀನಾ ತನ್ನ ಮೈ ತೂಕ ಇಳಿಸಿದಂತೆ ಇಳಿಸಿ ಸ್ಲಿಮ್ ಮಾಡಿದ್ದಾರೆ. ಇದಕ್ಕೆ ಐಶ್ ಬೇಬಿ ಕೂಡಾ ಓಕೆ ಎಂದಿದ್ದಾರೆ. ಇದೇ ನಿಟ್ಟಿನಲ್ಲಿ ಅರ್ಜುನ್ ರಾಮ್ ಪಾಲ್ ಸೇರಿದಂತೆ ಎಲ್ಲಾ ತಾರಾಗಣ ಕೂಡಾ ತಮ್ಮಮ್ಮ ಸಂಭಾವನೆ ಇಳಿಸಿಕೊಂಡಿದ್ದಾರೆ.

  ಆದರೆ, ಇದೇನಿದು ಏಕಾಏಕಿ ಫ್ರೆಂಡ್ಸ್ ಅಂದ್ರೆ ಕಡಿಮೆ ದುಡ್ಡಿಗೆ ಕೆಲಸ ಮಾಡೋ ಒಳ್ಳೆ ಬುದ್ಧಿ ಬಾಲಿವುಡ್ ಸ್ಟಾರ್ ಗಳಿಗೆ ಬಂದಿದೆಯೇ ಎಂಬ ಪ್ರಶ್ನೆಗೆ ಹೌದು ಹಾಗೂ ಇಲ್ಲ ಎಂದು ಉತ್ತರಿಸಬಹುದು. ಐಶ್ ಸೇರಿದಂತೆ ಎಲ್ಲರೂ ಸಂಭಾವನೆ ಇಳಿಸಿಕೊಂಡರೂ ಚಿತ್ರದ ಲಾಭಾಂಶದಲ್ಲಿ ಒಳ್ಳೆ ಷೇರ್ ಪಡೆಯಲಿದ್ದಾರೆ.

  ಕ್ರಿಕೆಟರ್ ಹಾಗೂ ಯಶಸ್ವಿ ಬಾಲಿವುಡ್ ನಟಿ ನಡುವಿನ ಪ್ರೇಮ್ ಕಹಾನಿಯುಳ್ಳ ಮಧುರ್ ಚಿತ್ರ ಬಾಕ್ಸಾಫೀಸಿನಲ್ಲಿ ಕ್ಲಿಕ್ ಆಗಿ ಭರ್ಜರಿ ಲಾಭ ಪಡೆಯುವ ನಿರೀಕ್ಷೆಯಲ್ಲಿರುವ ಚಿತ್ರ ತಂಡ, ಚಿತ್ರ ಗೆದ್ದ ಮೇಲೆ ಬರುವ ಲಾಭವನ್ನು ಹಂಚಿಕೊಳ್ಳಲು ಯೋಜಿಸಿದ್ದಾರೆ. ಮಧುರ್ ಟೀಮ್ ನ ಈ ಹೊಸ ಯೋಜನೆಯನ್ನು ಕುತೂಹಲದಿಂದ ಬಾಲಿವುಡ್ ಮಂದಿ ನೋಡುತ್ತಿದ್ದಾರೆ.

  English summary
  Talented director Madhur Bhandarkar continuing his trend setting skills in latest flick Heroine. Aishwarya Rai and cine crew have decided to cut their price. Meanwhile Movie is already gaining popularity with a tag Zero Budget Bollywood Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X