»   »  ನಟಿ ಐಶ್ವರ್ಯ ರೈಗೆ ಹಂದಿಜ್ವರದ ಸೋಂಕು?

ನಟಿ ಐಶ್ವರ್ಯ ರೈಗೆ ಹಂದಿಜ್ವರದ ಸೋಂಕು?

Subscribe to Filmibeat Kannada

ಎಚ್1ಎನ್1 ಸೋಂಕು ಬಾಲಿವುಡ್ ನಟಿ ಐಶ್ವರ್ಯ ರೈಗೂ ತಟ್ಟಿದೆಯೇ? ಅದೇ ರೀತಿಯ ರೋಗ ಲಕ್ಷಣಗಳು ಅವರಲ್ಲಿ ಕಂಡುಬಂದಿದೆ ಎಂಬ ಮಹತ್ವದ ವಿಚಾರವನ್ನು ರೈ ಅವರ ಮಾವ ಅಮಿತಾಬ್ ತನ್ನ ಬ್ಲಾಗ್ ನಲ್ಲಿ ಬಹಿರಂಗ ಪಡಿಸಿದ್ದಾರೆ. ಐಶ್ವರ್ಯ ರೈ ಬಚ್ಚನ್ ಅನಾರೋಗ್ಯಕ್ಕೆ ತುತ್ತಾಗಿರುವುದನ್ನು ಅಮೀತಾಬ್ ತನ್ನ ಬ್ಲಾಗಿನಲ್ಲಿ ದಾಖಲಿಸಿದ್ದಾರೆ.

ಸದ್ಯಕ್ಕೆ ಊಟಿಯಲ್ಲಿ ಪತಿ ಅಭಿಷೇಕ್ ಬಚ್ಚನ್ ಜೊತೆ ಮಣಿರತ್ನಂ ನಿರ್ದೇಶನದ 'ರಾವಣ' ಚಿತ್ರದ ಚಿತ್ರೀಕರಣದಲ್ಲಿ ಐಶ್ವರ್ಯ ರೈ ಪಾಲ್ಗೊಂಡಿದ್ದಾರೆ. ಅವರಿಗೆ ಶ್ವಾಸಕೋಶದ ಸೋಂಕು ಹಾಗೂ ಜ್ವರದ ರೀತಿಯ ಲಕ್ಷಣಗಳು ಕಾಣಿಸಿಕೊಂಡಿವೆ. ಆದರೆ ಇದು ಹಂದಿಜ್ವರವೇ ಎಂಬುದು ಇನ್ನೂ ದೃಢಪಟ್ಟಿಲ್ಲ ಎಂದು ಅಮೀತಾಬ್ ಮಾಹಿತಿ ನೀಡಿದ್ದಾರೆ.

ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಹೃದಯ ತೊಂದರೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಸಿಂಗಪುರಕ್ಕೆ ತೆರಳಿದ್ದಾರೆ. ಅಮರಸಿಂಗ್ ಅವರನ್ನು ಖುದ್ದು ನೋಡಲು ಅಮಿತಾಬ್ ಸಹ ಸಿಂಗಪುರದಲ್ಲಿ ತೆರಳಿದ್ದರು. ಅಲ್ಲಿಂದಲೇ ಬ್ಲಾಗ್ ನಲ್ಲಿ ರೈ ಕುರಿತು ಮಾಹಿತಿ ನೀಡಿದ್ದಾರೆ.

ಐಶ್ವರ್ಯಾಗೆ ಶನಿವಾರ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಮಕ್ಕಳಿಂದ ದೂರವಿರುವುದು ಮತ್ತು ಅವರನ್ನು ನೋಡಿಕೊಳ್ಳಲು ಆಗದಿರುವುದು ತಮ್ಮನ್ನು ಚಿಂತೆಗೀಡು ಮಾಡಿದೆ ಎಂದು ಅಮಿತಾಬ್ ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ರಾವಣ ಚಿತ್ರ ಸೆಟ್ಟೇರಿದಾಗಿನಿಂದ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಿವೆ. ತೀರಾ ಇತ್ತೀಚೆಗಷ್ಟೇ ಚಿತ್ರೀಕರಣ ವೇಳೆ ಆನೆ ದಾಳಿ ಮಾಡಿ ಮಾವುತನನ್ನು ಬಲಿ ತೆಗೆದುಕೊಂಡಿತ್ತು. ಇದೀಗ ಎಚ್1ಎನ್1 ಭೀತಿ ಕಾಡುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada