»   »  ಐಶ್ವರ್ಯ ರೈ ತಾರಾ ವರ್ಚಸ್ಸು ಒಂದಿನಿತು ಕುಗ್ಗಿಲ್ಲ!

ಐಶ್ವರ್ಯ ರೈ ತಾರಾ ವರ್ಚಸ್ಸು ಒಂದಿನಿತು ಕುಗ್ಗಿಲ್ಲ!

Posted By: Staff
Subscribe to Filmibeat Kannada
Aishwarya is the woman on top!
ಬಾಲಿವುಡ್ ನಟಿ ಐಶ್ವರ್ಯ ರೈ ಅವರ ತಾರಾ ವರ್ಚಸ್ಸು ನಯಾ ಪೈಸೆಯೂ ಕಡಿಮೆಯಾಗಿಲ್ಲ ಎಂದು ಸಮೀಕ್ಷೆಯೊಂದು ತಿಳಿಸಿದೆ. ಹನ್ಸಾ ರೀಸೆರ್ಚ್ ಏಜೆನ್ಸಿ ನಿರ್ವಹಿಸಿದ ಸಮೀಕ್ಷೆಯಲ್ಲಿ ಈ ಅಂಶ ದೃಢಪಟ್ಟಿದೆ.

ಈ ಸಂಸ್ಥೆ ಸಿನಿಮಾ ತಾರೆಗಳ ವರ್ಚಸ್ಸಿನ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಐಶ್ವರ್ಯ ಅವರು ಶೇ.98.8 ರಷ್ಟು ರೇಟಿಂಗ್ ಪಡೆದಿದ್ದಾರೆ. ತಮ್ಮ ಮಾವ ಅಮಿತಾಬ್ ಬಚ್ಚನ್ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜನಪ್ರಿಯತೆಯನ್ನು ಹಿಂದಿಕ್ಕಿ ಐಶ್ವರ್ಯ ಮುನ್ನುಗ್ಗಿರುವುದು ವಿಶೇಷ.ಕ್ಲಾಸ್ ಮತ್ತು ಮಾಸ್ ವಲಯದಲ್ಲೂ ಐಶ್ ತಾರಾ ವರ್ಚಸ್ಸು ಒಂಚೂರು ಕಡಿಮೆಯಾಗಿಲ್ಲ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಬಾಲಿವುಡ್ ನ ಹೊಸ ತಾರೆಗಳಾದ ಪ್ರಿಯಾಂಕ ಚೋಪ್ರ, ಕತ್ರಿನಾ ಕೈಫ್, ಕರೀನಾ ಕಪೂರ್ ಹಾಗೂ ಹಳೆ ಸಿನಿಮಾ ತಾರೆ ಮಾಧುರಿ ದೀಕ್ಷಿತ್ ಗಿಂತಲೂ ಎತ್ತರದಲ್ಲಿದ್ದಾರೆ ಐಶ್ವರ್ಯ. ಜನಪ್ರಿಯತೆ, ಮಾಧ್ಯಮಗಳ ನಿಲುವು, ಓಲೈಕೆ ಸಾಮರ್ಥ್ಯ ಇನ್ನೂ ಮುಂತಾದ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಈ ಸಮೀಕ್ಷೆ ನಡೆಸಲಾಗಿತ್ತು. ಇವೆಲ್ಲ ಅಂಶಗಳಲ್ಲೂ ಐಶ್ ಮುಂದಿರುವುದು ವಿಶೇಷ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada