ಡ್ಯಾನಿ ಬಾಯ್ಲ್ ನಿರ್ದೇಶನದಲ್ಲಿ ಐಶ್ವರ್ಯ ರೈ?

ಐಶ್ ಮತ್ತು ಶಾರುಖ್ ಜೋಡಿ ಮತ್ತೆ ಬೆಳ್ಳಿತೆರೆ ಮೇಲೆ ಮೋಡಿ ಮಾಡಲಿರುವುದನ್ನು ಪ್ರೇಕ್ಷಕರು ಕಾತುರದಿಂದ ಎದುರು ನೊಡುವಂತಾಗಿದೆ. 'ಛಲ್ತೆ ಛಲ್ತೆ' ಚಿತ್ರದಲ್ಲೂ ಇವರಿಬ್ಬರೂ ಜತೆಯಾಗಿ ನಟಿಸಬೇಕಿತ್ತು. ಹಲವಾರು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಮಣಿರತ್ನಂ ನಿರ್ದೇಶಿಸುತ್ತಿರುವ 'ರಾವಣ್' ಚಿತ್ರದಲ್ಲಿ ನಟಿಸುವಂತೆ ಶಾರುಖ್ ಗೆ ಆಹ್ವಾನಿಸಲಾಗಿತ್ತು. ಅದ್ಯಾಕೋ ಏನೋ ಶಾರುಖ್ ಹಿಂದೇಟು ಹಾಕಿದರು.
ತಮಿಳಿನ ಮತ್ತೊಬ್ಬ ಖ್ಯಾತ ನಿರ್ದೇಶಕ ಶಂಕರ್ ಅವರ 'ರೋಬೋ' ಚಿತ್ರಕ್ಕೂ ಶಾರುಖ್ ರನ್ನು ಆಹ್ವಾನಿಸಲಾಗಿತ್ತು. ಆ ಚಿತ್ರವನ್ನೂ ಶಾರುಖ್ ನೋ ಎಂದು ಬಿಟ್ಟ. ಈ ಎರಡು ಚಿತ್ರಗಳಲ್ಲಿ ಐಶ್ವರ್ಯ ರೈ ನಾಯಕಿ ಎಂಬುದು ವಿಶೇಷ. ಕಟ್ಟಕಡಗೆ ಡ್ಯಾನಿ ಬಾಯ್ಲ್ ನಿರ್ದೇಶನದಲ್ಲಿ ಇವರಿಬ್ಬರೂ ನಟಿಸಲು ಅಂಗೀಕರಿಸುತ್ತಿದ್ದಾರೆ ಎಂಬುದೇ ಸಂತೋಷದ ವಿಚಾರ!
(ದಟ್ಸ್ ಕನ್ನಡ ಚಿತ್ರವಾರ್ತೆ)
More from Filmibeat
ಬಾಲಿವುಡ್ bollywood aishwarya rai ಐಶ್ವರ್ಯ ರೈ slumdog millionaire ಸ್ಲಂಡಾಗ್ ಮಿಲಿಯನೇರ್ shahrukh khan ಶಾರುಖ್ ಖಾನ್ ಮಣಿರತ್ನಂ maniratnam ಡ್ಯಾನಿಬಾಯ್ಲ್ danny bolye movie ravan


Click it and Unblock the Notifications











