»   »  ಸೋನಿಯಾಗಾಂಧಿಯಾಗಿ ಕತ್ರೀನಾ ಕೈಫ್

ಸೋನಿಯಾಗಾಂಧಿಯಾಗಿ ಕತ್ರೀನಾ ಕೈಫ್

Posted By:
Subscribe to Filmibeat Kannada
 Katrina Kaif to play Sonia Gandhi
ಬಿಕಿನಿ ಬೇಬ್ ಕತ್ರೀನಾ ಕೈಫ್ ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿರುವುದಂತೂ ನಿಜ. ಸಲ್ಲು ಮಿಯಾ ಜತೆ ಪ್ರೀತಿಯನ್ನು ತಣ್ಣಗೆ ಸಹಿಸಿಕೊಂಡಿರುವ ಇಂಗ್ಲೀಷ್ ಮೇಡಂ, ಸದ್ಯ ಬಾಲಿವುಡ್ ನ ಬಹು ಬೇಡಿಕೆಯ ನಟಿ. ಅಕ್ಷಯ್ ಕುಮಾರ್ ಜೋಡಿಯಲ್ಲಿ ಸಾಲುಸಾಲು ಹಿಟ್ ಚಿತ್ರಗಳನ್ನು ನೀಡಿದ ನಂತರ, ಸದಭಿರುಚಿಯ ಚಿತ್ರಗಳತ್ತ ಮುಖಮಾಡಿದ್ದಾರೆ. ಅರ್ಥಪೂರ್ಣ ಚಿತ್ರಗಳ ನಿರ್ದೇಶಕ ಪ್ರಕಾಶ್ ಝಾ ಅವರ ಮುಂದಿನ ಚಿತ್ರ 'ರಾಜ್ ನೀತಿ'ಯಲ್ಲಿ ಕತ್ರೀನಾ ಹಿಂದೂ ಕುಟುಂಬದ ಸೊಸೆಯಾಗಿ, ರಾಜಕೀಯ ನಾಯಕಿಯಾಗಿ ಸದಾ ಸೀರೆ ಧರಿಸಿಕೊಂಡು ಕಾಣಿಸಿಕೊಳ್ಳಲಿರುವುದು ಗುಟ್ಟಾಗಿ ಉಳಿದಿಲ್ಲ.

ಭೂಪಲ್ ನಲ್ಲಿ ಚಿತ್ರೀಕರಣದ ಸಮಯದಲ್ಲಿ ಕಾಟನ್ ಸೀರೆ ಉಟ್ಟು, ಥೇಟ್ ಸೋನಿಯಾಗಾಂಧಿಯಂತೆ ಕಾಣುತ್ತಿದ್ದ ಕತ್ರೀನಾ, ರಾಜಕೀಯ ನಾಯಕಿಯ ನಡೆ ನುಡಿಯನ್ನು ಅಭ್ಯಾಸ ಮಾಡುತ್ತಿದ್ದಾರೆ. 'ಇಂದು ಬೇಹ್ನ್' ಎಂಬ ಪಾತ್ರದಲ್ಲಿ ಮೇಕಪ್ ಇಲ್ಲದೆ ಮೈಕ್ ಮುಂದೆ ನಿಂತು ಗಂಟೆಗಟ್ಟಲೆ ಭಾಷಣ ಬಿಗಿಯುವುದನ್ನು ಕರಗತ ಮಾಡಿಕೊಳ್ಳಲು ಕತ್ರೀನಾ ಖಾಸಗಿಯಾಗಿ ತರಬೇತಿ ಪಡೆಯುತ್ತಿದ್ದಾರೆ.

ಇಟಲಿ ಮೂಲದ ಸೋನಿಯಾಜಿ ಅವರಿಗೂ ಇಂಗ್ಲೆಂಡ್ ಮೂಲದ ಕತ್ರೀನಾ ಅವರ ಭಾಷೆ ಉಚ್ಚಾರದಲ್ಲಿ ಬಹಳಷ್ಟು ಸಾಮ್ಯವಿದೆ. ಸ್ವಚ್ಛ ಹಿಂದಿಯ ಗಂಧವಿರದ ಇಬ್ಬರಿಗೂ ಹಿಂದಿಯಲ್ಲಿ ಭಾಷಣ ಮಾಡುವುದು ಕಬ್ಬಿಣದ ಕಡಲೆಯೇ ಸರಿ. ಸೋನಿಯಾಜಿ ಅಭ್ಯಾಸವಾಗಿದ್ದರೂ, ಕತ್ರೀನಾ ಬಹಳಷ್ಟು ಹಿಂದಿ ಸಿನಿಮಾದಲ್ಲಿ ನಟಿಸಿದ್ದರೂ ಇವರೀರ್ವರ ಮಟ್ಟಿಗೆ ಹಿಂದಿ ಎರಡನೇ ಭಾಷೆಯೆ ಸರಿ. ಆದರೂ ಪ್ರಪ್ರಥಮ ಬಾರಿಗೆ ಹಿಂದಿಯಲ್ಲಿ ಡಬ್ಬಿಂಗ್ ಮಾಡುವುದಾಗಿ ನೀಳಕಾಲ್ಗಳ ಚೆಲುವೆ ಹೇಳಿರುವುದು ವಿಶೇಷವಾಗಿದೆ.

ಸಿನಿಮಾದ ಪೋಸ್ಟರ್ ಗಳಲ್ಲಿ ಕೈಫ್ ರನ್ನು ನೋಡಿ ಇದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೀವನ ಕಥೆ ಎಂದು ಸುದ್ದಿ ಆಗಿದ್ದಂತೂ ನಿಜ. ಆದರೆ ಅದನ್ನು ನಯವಾಗಿ ನಿರಾಕರಿಸಿರುವ ನಿರ್ದೇಶಕ ಪ್ರಕಾಶ್, ಕತ್ರೀನಾ ಅವರ ಪಾತ್ರ ಸೋನಿಯಾಜಿ ಅವರನ್ನು ಹೋಲುತ್ತದೆ. ಆದರೆ ಅದು ಕಥೆಯ ಒಂದು ಭಾಗ ಮಾತ್ರ. ಸೋನಿಯಾಜಿ ಅವರ ಜೀವನ ಕಥೆಯನ್ನು ಖಂಡಿತಾ ನಮ್ಮ ಚಿತ್ರ ಆಧರಿಸಿಲ್ಲ. ಇದು ಸಮಕಾಲೀನ ರಾಜಕೀಯ ಚಿತ್ರಣ ನೀಡಲು ತಯಾರಿಸಿದ ಕಥೆ ಎಂದು ಹೇಳಿದ್ದಾರೆ.

(ಏಜೆನ್ಸೀಸ್)

ಐಶ್ವರ್ಯ ರೈಗಿಂತಲೂ ಸುಂದರಿ ಕತ್ರಿನಾ ಕೈಫ್!
ಕಾಮಿಡಿ ಕಿಲಾಡಿ ಯಾಗಲು ಹೊರಟ ಕತ್ರಿನಾ ಕೈಫ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada