twitter
    For Quick Alerts
    ALLOW NOTIFICATIONS  
    For Daily Alerts

    ಲಾಹೋರಿನಲ್ಲಿ ಬಾಲಿವುಡ್ ಹಾಡು, ಕುಣಿತಕ್ಕೆ ಬ್ರೇಕ್

    By Mahesh
    |

    ಪಾಕಿಸ್ತಾನದ ರಂಗಮಂದಿರಗಳಲ್ಲಿ ಭಾರತೀಯ ಚಿತ್ರಗಳನ್ನು ಆಧರಿಸಿದ ಎಲ್ಲ ಹಾಡು ಹಾಗೂ ನೃತ್ಯ ಕಾರ್ಯಕ್ರಮಗಳನ್ನು ನಿಷೇಧಿಸಲು ಲಾಹೋರ್‌ನ ಪ್ರದರ್ಶನ ಕಲೆಗಳ ಮಂಡಳಿ(LAC) ತೀರ್ಮಾನಿಸಿದೆ. ಬಾಲಿವುಡ್ ಗೀತೆಗಳು, ಡಾನ್ಸ್ ನಲ್ಲಿ ಅಶ್ಲೀಲತೆಯ ಅಂಶಗಳನ್ನು ಹೆಚ್ಚಾಗಿರುತ್ತದೆ. ಇದು ನಮ್ಮ ಸಂಸ್ಕೃತಿಗೆ ಪೂರಕವಾಗಿಲ್ಲ. ಪಾಕ್‌ನ ರಂಗಮಂದಿರಗಳಲ್ಲಿ ಕೇವಲ ಶಾಸ್ತ್ರೀಯ ನೃತ್ಯಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು LAC ಸಮರ್ಥಿಸಿಕೊಂಡಿದೆ.

    ಲಾಹೋರ್ ಕಲಾ ಮಂಡಳಿ(ಎಲ್‌ಎಸಿ)ನ ಈ ನಿರ್ಧಾರದಿಂದ ನಿರ್ಮಾಪಕರು ಹಾಗೂ ಕಲಾವಿದರಲ್ಲಿ ಅಸಮಾಧಾನ ಉಂಟಾಗಿದೆ. ಮಂಡಳಿಯು ತನ್ನ ಕ್ರಮದಿಂದಾಗಿ ಉದ್ಯಮಕ್ಕೆ ಹಾನಿಯುಂಟು ಮಾಡಲು ಯತ್ನಿಸಿದೆ ಎಂದು ದೂರಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಸಮರ್ಥಿಸಿಕೊಂಡಿರುವ ಮಂಡಳಿಯ ವಕ್ತಾರ, ಉತ್ತಮ ಗುಣಮಟ್ಟದ ರಂಗಭೂಮಿಯನ್ನು ಪ್ರೋತ್ಸಾಹಿಸುವುದು ಈ ನಿರ್ಧಾರದ ಹಿಂದಿನ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

    ನಾಟಕ, ಸಿನಿಮಾ ನಂಟು: ಪಾಕಿಸ್ತಾನದಲ್ಲಿ ವರ್ಷಕ್ಕೆ ಎಷ್ಟು ಚಿತ್ರಗಳನ್ನು ನಿರ್ಮಿಸಲಾಗುತ್ತಿದೆ? ನಿರ್ಮಿಸಲಾದ ಚಿತ್ರಗಳಿಂದ ಎಷ್ಟು ಹಾಡುಗಳನ್ನು ನಾವು ನಮ್ಮ ನಾಟಕಗಳಲ್ಲಿ ಬಳಸುತ್ತಿದ್ದೇವೆ? ಎಂದು ವಾಣಿಜ್ಯ ರಂಗಭೂಮಿ ನಿರ್ಮಾಪಕರ ಸಂಘದ ಮುಖ್ಯಸ್ಥ ಜುಲ್ಫಿಕರ್ ಅಹ್ಮದ್ ಚೌಧರಿ ಪ್ರಶ್ನಿಸಿದ್ದಾರೆ.

    ಕೆಲವು ಕಲಾವಿದರು ಹಾಗೂ ನಿರ್ಮಾಪಕರು ತಮ್ಮ ನಾಟಕಗಳಲ್ಲಿ ನೃತ್ಯ ಪ್ರದರ್ಶನಗಳನ್ನು ಅಳವಡಿಸಿಕೊಳ್ಳುವ ವೇಳೆ ಯಾವುದೇ ನಿರ್ದಿಷ್ಟ ನೈತಿಕ ಮಾನದಂಡ ಅನುಸರಿಸುವುದಿಲ್ಲ. ಅವರ ಮೇಲೂ ನಿಷೇಧ ಹೇರಬೇಕು ಎಂದು ಜುಲ್ಫಿಕರ್ ಅಭಿಪ್ರಾಯಪಟ್ಟಿದ್ದಾರೆ.

    ವಾಣಿಜ್ಯ ರಂಗಭೂಮಿಯಲ್ಲಿ ಅಶ್ಲೀಲತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮಂಡಳಿಯು ಕಟ್ಟುನಿಟ್ಟಿನ ಸೆನ್ಸಾರ್ ನಿಯಮಗಳನ್ನು ಪಾಲಿಸಬೇಕೇ ಹೊರತು ನಿಷೇಧ ಹೇರುವುದಲ್ಲ. ಅವುಗಳಲ್ಲಿ ಯಾವುದೇ ಆಕ್ಷೇಪಾರ್ಹ ಅಂಶಗಳಿದ್ದಲ್ಲಿ ಅಂತಹವುಗಳನ್ನು ತೆಗೆದುಹಾಕಬಹುದು. ಇದಕ್ಕಾಗಿ ಭಾರತೀಯ ಗೀತೆಗಳನ್ನು ಬಳಸಿರುವ ಎಲ್ಲ ನೃತ್ಯಗಳನ್ನು ನಿಷೇಧಿಸುವ ಅಗತ್ಯವಿಲ್ಲ ಎಂದಿದ್ದಾರೆ.

    English summary
    Lahore Arts Council has imposed ban on Bollywood songs and dances in commercial theaters LCA says Bollywood songs promote vulgarity and it against culture of Islam. But this has ignited debate in Pakistan;s cultural center they say it will affect business
    Thursday, February 17, 2011, 14:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X