»   »  ಪಾತ್ರಕ್ಕಾಗಿ ತಲೆಕೂದಲನ್ನೇ ಬಲಿಕೊಟ್ಟ ಶಿಲ್ಪಾ!

ಪಾತ್ರಕ್ಕಾಗಿ ತಲೆಕೂದಲನ್ನೇ ಬಲಿಕೊಟ್ಟ ಶಿಲ್ಪಾ!

Subscribe to Filmibeat Kannada
Shilpa Shetty to go bald
ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಈ ಬಾರಿ ಸೊಂಪಾದ ತಮ್ಮ ತಲೆಗೂದಲನ್ನು ಬೋಳಿಸಿಕೊಂಡು ಸುದ್ದಿಯಾಗಿದ್ದಾರೆ. ಗಜನಿ ಚಿತ್ರ ಅಮೀರ್ ಖಾನ್ ಏನಾದರೂ ಶಿಲ್ಪಾಗೆ ಪ್ರೇರಣೆಯಾದರೆ!? ಹಾಗೇನು ಇಲ್ಲ ಆಕೆ ಪ್ರಸ್ತುತ Desire ಎಂಬ ಆಂಗ್ಲ ಚಿತ್ರದಲ್ಲಿ ನಟಿಸುತ್ತಿದ್ದು ಚಿತ್ರದ ಒಂದು ಸನ್ನಿವೇಶಕ್ಕಾಗಿ ಬೋಳು ಅವತಾರ ಎತ್ತಿದ್ದಾರೆ ಅಷ್ಟೆ. ಈ ಹಿಂದೆ ವಾಟಾರ್ ಚಿತ್ರಕ್ಕಾಗಿ ಶಬಾನಾ ಅಜ್ಮಿ ಮತ್ತು ನಂದಿತಾ ತಮ್ಮ ತಲೆಯನ್ನು ಬೋಳಿಸಿಕೊಂಡಿದ್ದರು.ಈಗ ಶಿಲ್ಪಾಶೆಟ್ಟಿ ತಮ್ಮ ನಟನೆಗೆ ಸವಾಲೊಡ್ಡುವ ಪಾತ್ರಕ್ಕಾಗಿ ಬಕ್ಕ ತಲೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಸ್ತುತ ಕೇರಳದಲ್ಲಿ ಚಿತ್ರೀಕರಣಗೊಳ್ಳುತ್ತಿರುವ Desire ಚಿತ್ರ ನಂತರ ಕೌಲಾಲಂಪುರಕ್ಕೆ ತೆರಳಲಿದೆ. Desire ಚಿತ್ರವನ್ನು ಮಲೆಯಾಳಿ ನಿರ್ದೇಶಕ ಆರ್.ಶರತ್ ನಿರ್ದೇಶಿಸುತ್ತಿದ್ದಾರೆ. ಚೀನಾದನೊಂದಿಗಿನ ಪ್ರೇಮ ಪ್ರಸಂಗದ ಕಥಾಹಂದರವನ್ನು Desire ಚಿತ್ರ ಹೊಂದಿದ್ದು ಚೀನಿ ಪಾತ್ರಕ್ಕಾಗಿ ಕ್ಸಿಯಾ ಯು ಎಂಬ ಚೀನಿ ನಟನನ್ನೇ ಕರೆತರಲಾಗಿದೆ.

Desire ಚಿತ್ರದಿಂದ ಶಿಲ್ಪಾ ಶೆಟ್ಟಿಗೆ ಬಹಳಷ್ಟು ಲಾಭವಾಗಿದೆಯಂತೆ. ಭರತ ನಾಟ್ಯ ಕಲಾವಿದೆಯಾದ ಅವರು ಈ ಚಿತ್ರದ ಮೂಲಕ ಒಡಿಸ್ಸಿ ನೃತ್ಯವನ್ನು ಕಲಿತಿದ್ದಾರಂತೆ. ಈ ಚಿತ್ರದಲ್ಲಿ ಅವರದು ಒಡಿಸ್ಸಿ ಕಲಾವಿದೆಯ ಪಾತ್ರವಂತೆ. ಸಂಪೂರ್ಣವಾಗಿ ಅಲ್ಲದಿದ್ದರೂ ಕೊಂಚ ಮಟ್ಟಿಗೆ ಒಡಿಸ್ಸಿ ಕಲಿತಿರುವುದಾಗಿ ಶಿಲ್ಪಾ ತಿಳಿಸಿದ್ದಾರೆ. ಇದೊಂದು ಮರೆಯಲಾಗದ ಅನುಭವ ಎನ್ನುತ್ತಾರೆ ಅವರು.

(ಏಜೆನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada