»   »  'ತೀನ್ ಪತ್ತಿ'ಯಲ್ಲಿ ಆಂಗ್ಲ ನಟ ಬೆನ್ ಕಿಂಗ್ಸ್ ಲೆ

'ತೀನ್ ಪತ್ತಿ'ಯಲ್ಲಿ ಆಂಗ್ಲ ನಟ ಬೆನ್ ಕಿಂಗ್ಸ್ ಲೆ

Posted By:
Subscribe to Filmibeat Kannada
Ben Kingsley acts in teen patty
ಮಾಹಾತ್ಮಗಾಂಧಿ ಅವರ ಪಾತ್ರವನ್ನು ಪೋಷಿಸುವ ಮೂಲಕ ಭಾರತೀಯರಿಗೆ ಹತ್ತಿರವಾದ ಆಂಗ್ಲ ನಟ ಬೆನ್ ಕಿಂಗ್ಸ್ ಲೆ. ಕಾಲು ಶತಮಾನಕ್ಕೂ ಹೆಚ್ಚು ಕಾಲದ ನಂತರ ಮತ್ತೆ ಬಾಲಿವುಡ್ ಗೆ ಹಿಂತಿರುಗುತ್ತಿದ್ದಾರೆ. ಅವರು ಪ್ರಸ್ತುತ 'ತೀನ್ ಪತ್ತಿ' ಎಂಬ ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದುಅಮಿತಾಬ್ ಬಚ್ಚನ್ ಪ್ರಧಾನ ಪಾತ್ರವನ್ನು ಪೋಷಿಸುತ್ತಿದ್ದಾರೆ.

'ತೀನ್ ಪತ್ತಿ' ಚಿತ್ರದಲ್ಲಿ ಲೆಕ್ಕದ ಮೇಷ್ಟ್ರ ಪಾತ್ರದಲ್ಲಿ ಕಿಂಗ್ಸ್ ಲೆ ದರ್ಶನ ನೀಡಲಿದ್ದಾರೆ. ಜೂಜಿನ ಹಿನ್ನೆಲೆಯಲ್ಲಿ ಕತೆ ಸಾಗಲಿದೆ. ಮನರಂಜನೆಯ ಎಲ್ಲ ಅಂಶಗಳು ಚಿತ್ರದಲ್ಲಿವೆಯಂತೆ. 'ತೀನ್ ಪತ್ತಿ' ಎಂದರೆ ಮೂರು ಇಸ್ಪೀಟ್ ಎಲೆಗಳು ಎಂದರ್ಥ. ಕೇನ್ಸ್ ಚಿತ್ರೋತ್ಸವದಲ್ಲಿ ಈ ಚಿತ್ರ ಈಗಾಗಲೇ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ.

ಹಿಂದಿ ಮಿಶ್ರಿತ ಆಂಗ್ಲ ಭಾಷೆಯ ಸಂಭಾಷಣೆಯನ್ನು ಹೊಂದಿರುವ ಈ ಚಿತ್ರದಲ್ಲಿ ಅಮಿತಾಬ್ ಗೆ ಜತೆಯಾಗಿ ಕೆನಡಾ ಮೂಲದ ರೂಪದರ್ಶಿ ಸಯಿರಾ ಮೋಹನ್ ನಟಿಸುತ್ತಿದ್ದಾರೆ.ಸ್ಲಂ ಡಾಗ್ ಮಿಲಿಯನೇರ್ ಚಿತ್ರದಷ್ಟೇ ಜನಪ್ರಿಯವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ತೀನ್ ಪತ್ತಿ ಚಿತ್ರತಂಡ ಇದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಬೆಳ್ಳಿತೆರೆಗೆ ಶ್ರುತಿ, ಮಹೇಂದರ್ ತೆರೆಮರೆಯ ಕತೆ!
ಮಕದ್ದರ್ ಕಾ ಸಿಕಂದರ್ ಖ್ಯಾತಿಯ ಮೆಹ್ರಾ ನಿಧನ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada