For Quick Alerts
  ALLOW NOTIFICATIONS  
  For Daily Alerts

  ಗೆಳೆಯ ಕರಣ್ ಜೋಹರ್ ಚಿತ್ರಕ್ಕೇ ಕೈಕೊಟ್ಟ ಕರೀನಾ

  |

  ಏಕ್ತಾ ಕಪೂರ್ ಮತ್ತು ಕರಣ್ ಜೋಹರ್ ತಮ್ಮ ಮುಂದಿನ ಹೊಸ ಥ್ರಿಲ್ಲರ್ ಚಿತ್ರಕ್ಕೆ ಕರೀನಾ ಕಪೂರ್ ನಾಯಕಿಯಾಗಬೇಕೆಂದು ಬಯಸಿದ್ದರು. ಕರಣ್ ಜೋಹರ್ ಬದಲು ಈ ಚಿತ್ರವನ್ನು ಹೊಸ ನಿರ್ದೇಶಕರೊಬ್ಬರು ನಿರ್ದೇಶಿಸಲಿದ್ದು ಅದಕ್ಕೆ ಇಮ್ರಾನ್ ಹಶ್ಮಿ ನಾಯಕರು. ಆದರೆ ಅದರಲ್ಲಿ ನಟಿಸಲು ಕರೀನಾ ನಿರಾಕರಿಸಿದ್ದಾರೆ.

  ಕರಣ್ ಜೋಹರ್ ಹಾಗೂ ಕರೀನಾ ಕಪೂರ್ ಆತ್ಮೀಯ ಮಿತ್ರರು. ಕರೀನಾ ಈ ಅವಕಾಶವನ್ನು ಖಂಡಿತ ಬಿಡುವುದಿಲ್ಲ ಎನ್ನಲಾಗಿತ್ತು. ಆದರೆ ಕರೀನಾ, "ನಾನು ಕರಣ್ ಜೋಹರ್ ನಿರ್ದೇಶನವಾಗಿದ್ದರೆ ಒಪ್ಪಿಕೊಳ್ಳುತ್ತಿದ್ದೆ, ನಿರ್ದೇಶಕರು ಹೊಸಬರಾಗಿದ್ದರಿಂದ ಒಲ್ಲೆ. ಜೊತೆಗೆ ತಮಗೆ ಆ ಪಾತ್ರ ಇಷ್ಟವಾಗಿಲ್ಲ" ಎಂದೂ ಕೂಡ ಹೇಳಿದ್ದಾರೆ.

  "ನಾನೀಗ ಜ್ವರ ಮತ್ತು ಗಂಟಲು ನೋವಿನಿಂದ ಬಳಲುತ್ತಿದ್ದೇನೆ. ಹೀರೋಯಿನ್ ಶೂಟಿಂಗ್ ನಲ್ಲಿ ಬಹಳಷ್ಟು ಕಿರುಚಾಡಿ ನನ್ನ ಗಂಟಲು ಕೆಟ್ಟಿದೆ. ಹಾಗಾಗಿ ನಾನೀಗ ಈ ಥ್ರಿಲ್ಲರ್ ಚಿತ್ರ ಮಾಡಲು ಸಾಧ್ಯವಿಲ್ಲ" ಎಂದು ಹೇಳಿ ಚಿತ್ರ ಒಪ್ಪಿಕೊಳ್ಳದಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ ನಾಯಕ ಇಮ್ರಾನ್ ಹಶ್ಮಿ ಜೊತೆ ನಟಿಸಲು ಕರೀನಾ ಸಿದ್ಧರಿಲ್ಲ ಎನ್ನುತ್ತಿವೆ ಸುದ್ದಿ ಮೂಲಗಳು.

  ಕಾರಣ, ಸ್ಪಲ್ಪ ದಿನಗಳ ಹಿಂದಷ್ಟೇ ಸಂದರ್ಶನವೊಂದರಲ್ಲಿ ಕರೀನಾ "ನಾನು ಖಾನ್ ಗಳ ಜೊತೆಯಲ್ಲಿ ಅಲ್ಲದೇ ಬೇರೆಯವರ ಜೊತೆ ನಟಿಸುವುದನ್ನು ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ" ಎಂದಿದ್ದರು. ಇದೀಗ ಇಮ್ರಾನ್ ಹಶ್ಮಿ ಜೊತೆ ನಟಿಸುವುದಿಲ್ಲ ಎಂದಿರುವ ಕರೀನಾ ಹೇಳಿಕೆ ಅವರ ಆ ಹೇಳಿಕೆಗೆ ಮ್ಯಾಚ್ ಆಗುತ್ತಿದೆ ಎನ್ನಲಾಗಿದೆ. ಕರೀನಾ ಮನಸ್ಸಿನಲ್ಲಿ ಅದೇನಿದೆಯೋ! (ಏಜೆನ್ಸೀಸ್)

  English summary
  Ekta and Karan Johar wanted to cast Kareena Kapoor for a thriller. Emraan Hahmi is playing the main lead in the film. But Kareena said no to the offer.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X