ದೀಪಿಕಾ ಕೋಣೆಯಲ್ಲಿ ನೇತಾಡುತ್ತಿವೆ ಸ್ಕರ್ಟ್-ಗಳು
ಸಾಫ್ಟ್ ಟಾಯ್ಸ್, ಚಾಕೊಲೇಟ್, ಗ್ರೀಟಿಂಗ್ ಕಾರ್ಡ್ ಇವೇ ಮುಂತಾದವನ್ನು ಫ್ಯಾನ್-ಗಳು ಕಳಿಸುತ್ತಿರುತ್ತಾರಂತೆ. ಸರಿ ಈಗೇನು ಚಿತ್ರಗುಪ್ತನ ಸಂಶೋಧನೆ ಎಂದು ಕೋಪ ಮಾಡಿಕೊಳ್ಳದಿರಿ, ದೀಪಿಕಾ ಅಭಿಮಾನಿಗಳೇ! ವಸಿ ವಿಷಯ ಇದೆ. ಅದಕ್ಕೇ ಈ ಪೀಠಿಕೆ. ಪೀಠಿಕೆ ಇನ್ನೂ ಮುಗಿದಿಲ್ಲ. ಏನಪಾ ಅಂದರೆ ದಮ್ ಮಾರೊ ದಮ್ ಎಂದು ಹೋದಲ್ಲೆಲ್ಲ ಪಲುಕತೊಡಗಿರುವ ದೀಪಿಕಾಗೆ ಇತ್ತೀಚೆಗೆ ಶ್ಯಾನೆ ದಮ್ ಬಂದಿದೆ. ಅಭಿಮಾನಿಗಳಂತೂ ಆಗಲೇ ದೀಪಿಕಾಳ ತುಂಡುಡುಗೆ ನೃತ್ಯಕ್ಕೆ ಮುಗಿಬಿದ್ದಿದ್ದಾರೆ. ಸಿನಿಮಾದ ಐಟಂ ಸಾಂಗ್-ನಲ್ಲಿ 'ಅಜ್ ಮೇರೆ ಲಿಯೇ... ಚೇರ್ ಖೀಚ್ ರಹಾ ಹೈ... ಕಲ್ ಮೇರಿ ಸ್ಕರ್ಟ್ ಖೀಚೇಗಾ... ಖೀಚೇಗಾ ಕಿ ನಹೀ' ಎಂದು ತನ್ನ ಸ್ಕರ್ಟ್-ನಲ್ಲಿ ಬಳಕುತ್ತಾ ಆಹ್ವಾನ ನೀಡುತ್ತಾಳೆ. ಅಭಿಮಾನಿಗಳು ಬಿಡುತ್ತಾರೆಯೇ? ಆರಾಧ್ಯದೇವತೆ ದೀಪಿಕಾಳ ಸ್ಕರ್ಟ್ ಎಳೆಯುವುದು ಹೇಗಪ್ಪಾ ಎಂದು ಶ್ಯಾನೆ ತಲೆಕೆಡಿಕೊಂಡ ಕೆಲವು ಅಭಿಮಾನಿಗಳು ಒಂದು ವಿಚಿತ್ರ ಪ್ರಯೋಗಕ್ಕೆ ಕೈಹಾಕಿದ್ದಾರೆ. ಕಟ್, ಕಟ್ ! ಓವರ್ ಟು ಅಂಚೆ ಕೋಣೆ ...
ಭೋಪಾಲದಲ್ಲಿ ಆರಕ್ಷಣ್ ಸಿನಿಮಾ ಶೂಟಿಂಗ್ ಮುಗಿಸಿ ಮನೆಗೆ ಬಂದವಳೇ ದೀಪಿಕಾ ಸಾವಕಾಶವಾಗಿ ತನ್ನ ಅಂಚೆ ಕೋಣೆಯಲ್ಲಿ ಅಡಿಯಿಟ್ಟಿದ್ದಾಳೆ. ಅಲ್ಲಿ ನೋಡಿದರೆ ಬಣ್ಣ ಬಣ್ಣದ ನಾನಾ ಗಾತ್ರದ ಒಂಬತ್ತು ಸ್ಕರ್ಟ್-ಗಳು ನೇತಾಡುತ್ತಿದ್ದವಂತೆ. ಕೆಲಸದಳನ್ನು ಕರೆದು ಇದನ್ನೆಲ್ಲ ಯಾಕ್ ಇಲ್ಲಿ ಹಾಕಿದ್ದೀಯಾ ಎಂದು ಗರ್ಜಿಸ ಬೇಕು. ಅಷ್ಟರಲ್ಲಿ ಜ್ಞಾನೋದಯವಾಗಿ ತೆಪ್ಪಗಾದಳಂತೆ. ಮುಸಿಮುಸಿ ನಗುತ್ತಾ ಯಾರಪ್ಪಾ ಇದು... ಇಂಥದ್ದನ್ನೆಲ್ಲ ಕಳಿಸಿದ್ದಾರೆ ಎಂದು ಸ್ವಲ್ಪವೂ ಬೇಸರಿಸಿಕೊಳ್ಳದೇ ಒಂದೊಂದನ್ನೇ ತುಂಬಾ ಜತನದಿಂದ ಎತ್ತಿಟ್ಕೊಂಡಳಂತೆ.
ಮೊದಲ ಬಾರಿಗೆ ಅಭಿಮಾನಿಗಳು ದೀಪಿಕಾಗೆ ಇಂತಹ ಅಂಚೆ ಬಾಗಿನ ಅರ್ಪಿಸಿದ್ದಾರೆ. ಪತ್ರಗಳು ಬರೆದಾಗ ಸಾಧ್ಯವಾದಷ್ಟೂ ಉತ್ತರಿಸುತ್ತಿದ್ದ ದೀಪಿಕಾ ಈ ಬಾರಿ ಸ್ಕರ್ಟ್-ಗಳನ್ನು ನೋಡಿ ತೊಡುವುದೋ, ಬಿಡುವುದೋ ನೀವೇ ಹೇಳಿ ಎಂದು ಗುನುಗತೊಡಗಿದ್ದಾಳಂತೆ. ಇದೆಲ್ಲ ಖಂಡಿತಾ 'ಕಲ್ ಮೇರಿ ಸ್ಕರ್ಟ್ ಖೀಚೇಗಾ ಕಿ ನಹೀ!' ಪ್ರಭಾವ ಎಂಬುದು ಅರಿವಾಗಿದೆ. ಅಭಿಮಾನಿಗಳಿಗಂತೂ ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಈ ಐಟಂ ಸಾಂಗ್ ನೋಡುವ ಭಾಗ್ಯ ಒದಗಿಬರಲಿದೆ. ಆಮೇಲೆ ಇನ್ನೂ ಏನೆಲ್ಲ ಆಟ ಶುರುವಿಟ್ಟುಕೊಳ್ಳುತ್ತಾರೋ!? ಮುಂದೇನಾಯ್ತು ಅಂತ ಖಂಡಿತ ತಿಳಿಸ್ತೀವಿ... ಅಲ್ಲಿವರೆಗೆ ಸ್ಕರ್ಟ್ ಎಳೆಯುವುದನ್ನು ಪ್ರಾಕ್ಟೀಸ್ ಮಾಡುತ್ತಿರಿ.


Click it and Unblock the Notifications












