»   » ಪಂಚತಾರಾ ಹೋಟೆಲ್ ನಲ್ಲಿ ಧೋನಿ, ಅಸಿನ್

ಪಂಚತಾರಾ ಹೋಟೆಲ್ ನಲ್ಲಿ ಧೋನಿ, ಅಸಿನ್

Posted By:
Subscribe to Filmibeat Kannada

ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಬಾಲ್ಯದ ಗೆಳತಿ ಸಾಕ್ಷಿ ಸಿಂಗ್ ರಾವತ್ ರನ್ನು ಇತ್ತೀಚೆಗೆ ವರಿಸಿದ್ದರು. ಮದುವೆಗೂ ಮುನ್ನ ಧೋನಿಗೆ ದಕ್ಷಿಣದ ಖ್ಯಾತ ತಾರೆ ಅಸಿನ್ ಜೊತೆ ತೀರಾ ಹತ್ತಿರದ ಸಂಬಂಧವಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಅಷ್ಟೆ ಅಲ್ಲದೆ ಅಸಿನ್ ಮನೆಗೆ ಹೊತ್ತಲ್ಲದ ಹೊತ್ತಿನಲ್ಲಿ ಧೋನಿ ಭೇಟಿ ನೀಡಿದ್ದು ಸುದ್ದಿಯಾಗಿತ್ತು.

ಧೋನಿ ದಿಢೀರ್ ಅಂತ ಮದುವೆಯಾಗುವ ಮೂಲಕ ಎಲ್ಲ ವದಂತಿಗಳಿಗೆ ಬ್ರೇಕ್ ಹಾಕಿದ್ದರು. ಇದೀಗ ಶ್ರೀಲಂಕಾದ ಪಂಚತಾರಾ ಹೋಟೆಲ್ ನಲ್ಲಿ ಅಸಿನ್ ಜೊತೆ ಧೋನಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಭೇಟಿ ಕಾಕತಾಳೀಯವೋ ಅಥವಾ ಉದ್ದೇಶಪೂರ್ವಕವೋ ಎಂಬುದು ತಿಳಿದುಬಂದಿಲ್ಲ.

ಹಿಂದಿಯ 'ರೆಡಿ' ಚಿತ್ರದ ಚಿತ್ರೀಕರಣ ಶ್ರೀಲಂಕಾದಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಅಸಿನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಧೋನಿ ಸಹ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಆಶ್ಚರ್ಯವೆಂಬಂತೆ ಇಬ್ಬರೂ ಕೊಲಂಬೋದ ಒಂದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು.

ಧೋನಿ ಮತ್ತು ಅಸಿನ್ ಜಾಹೀರಾತೊಂದರಲ್ಲಿ ನಟಿಸುವ ಮೂಲಕ ಒಬ್ಬರಿಗೊಬ್ಬರು ಪರಿಚಯವಾಗಿದ್ದರು. ಬಳಿಕ ಧೋನಿ ಮತ್ತು ಅಸಿನ್ ಸಾಕಷ್ಟು ಗಾಳಿಸುದ್ದಿಗೆ ಬಲಿಯಾಗಿದ್ದರು. ಧೋನಿ ಗೃಹಸ್ಥಾಶ್ರಮ ಪ್ರವೇಶಿಸುತ್ತಿದ್ದಂತೆ ಇವರಿಬ್ಬರನ ನಡುವಿನ ಎಲ್ಲ ಗಾಳಿಸುದ್ದಿಗಳು ನಿಂತು ಹೋಗಿದ್ದವು.

"ನಾನು ಮತ್ತು ಧೋನಿ ಒಂದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದೆವು.ನಿನ್ನೆಯಷ್ಟೇ ನಾನು ಮುಂಬೈಗೆ ಮರಳಿದೆ. ನಾವಿಬ್ಬರೂ ಉತ್ತಮ ಗೆಳೆಯರು. ಧೋನಿ ಮದುವೆಗೆ ಹೋಗಲು ಸಾಧ್ಯವಾಗಲಿಲ್ಲ. ಹೋಟೆಲ್ ನಲ್ಲಿ ಅವರು ಸಿಕ್ಕಿದ್ದು ಒಳ್ಳೆಯದೇ ಆಯ್ತು. ದಾಂಪತ್ಯಕ್ಕೆ ಅಡಿಯಿಟ್ಟ ಅವರಿಗೆ ಶುಭ ಕೋರಿದ್ದಾಗಿ" ಅಸಿನ್ ತಿಳಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada