»   » ಹಿಂದಿ, ತೆಲುಗಿನಲ್ಲಿ ಬ್ಯುಸಿಯಾದ ಜೆನಿಲಿಯಾ

ಹಿಂದಿ, ತೆಲುಗಿನಲ್ಲಿ ಬ್ಯುಸಿಯಾದ ಜೆನಿಲಿಯಾ

Posted By: Super
Subscribe to Filmibeat Kannada
Genelia busy in Hindi, Telugu films
'ಸತ್ಯ ಇನ್ ಲವ್' ಮೂಲಕ ಕನ್ನಡಿಗರಿಗೆ ಹತ್ತಿರವಾದ ಜೆನಿಲಿಯಾ ಸದ್ಯಕ್ಕೆ ಹಿಂದಿಯಲ್ಲಿ ಹಾಟ್ ಫೇವರಿಟ್ ನಟಿಯಾಗುವ ಭರವಸೆಯನ್ನು ಮೂಡಿಸಿದ್ದಾಳೆ. ಜೆನಿಲಿಯಾ ಮೊದಲ ಹಿಂದಿ ಚಿತ್ರ 'ಮುಜೆ ತೇರಿ ಕಸಮ್' (ತೆಲುಗಿನ ನುಮ್ವೆ ಕಾವಲಿ ರೀಮೇಕ್) ತಕ್ಕಮಟ್ಟಿಗೆ ಯಶಸ್ಸು ಕಂಡರು ಅವಕಾಶಗಳು ಮಾತ್ರ ಈ ಫೇರನ್ ಲವ್ಲಿ ಬೇಬಿಗೆ ಸಿಗಲಿಲ್ಲ. ಆದರೆ ದಕ್ಷಿಣದ ಖ್ಯಾತ ನಿರ್ದೇಶಕ ಶಂಕರ್ ಆಕೆಗೆ 'ಬಾಚಿ' ಚಿತ್ರದಲ್ಲಿ ಅವಕಾಶ ನೀಡಿದರು. ಸಾಕಷ್ಟು ವಿವಾದಗಳಿಂದ ಸಿನಿಮಾ ಕೂಡ ನಿರೀಕ್ಷಿತ ಮಟ್ಟದ ಗೆಲುವನ್ನು ಬಾಕ್ಸ್‌ಫೀಸಲ್ಲಿ ದಾಖಲಿಸಲಿಲ್ಲ. ನಂತರ ತೆಲುಗಿಗೆ ಹೊರಟ ಈ ಮಂಗಳೂರ ಮೂಲದ ಚೆಲುವೆಗೆ ಸುಮಂತ್ ಜೊತೆ 'ಸತ್ಯಂ' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಸತತ ಸೋಲುಗಳಿಂದ ಸೊರಗಿದ್ದ ಸುಮಂತ್‌ಗೊಂದು ಬ್ರೇಕ್ ನೀಡಿತು ಈ ಚಿತ್ರ. ಅದೇ ಸಿನಿಮಾ ಮೂಲಕ ಜೆನ್ನಿ ತೆಲುಗರ ಹೃದಯ ಕೂಡ ಗೆದ್ದಳು.

ಅನಂತರ ಬಂದ ಸೈ, ಮಿಸ್ಟರ್ ಮೇಧಾವಿ, ಸುಭಾಷ್ ಚಂದ್ರ ಬೋಸ್, ಹೀಗೆ ಸಾಲು ಸಾಲು ಸಿನಿಮಾಗಳು ಸೋತಾಗ ಟಾಲಿವುಡ್ ನಿರ್ಮಾಪಕರು ಕಂಗಾಲಾದರು. ಆದರೆ ಇದರ ಮಧ್ಯೆ ನಿರ್ದೇಶಕ ಭಾಸ್ಕರ್ ತಮ್ಮ ಚೊಚ್ಚಲ ಚಿತ್ರ 'ಬೊಮ್ಮರಿಲ್ಲು' (ಬೊಂಬೆ ಮನೆ) ಚಿತ್ರದಲ್ಲಿನ ಮುಗ್ಧ ಮನಸಿನ ಹಂಸಿನಿ ಪಾತ್ರಕ್ಕೆ ಪಟ್ಟು ಹಿಡಿದು ಜೆನ್ನಿಗೆ ಅವಕಾಶ ನೀಡಿದರು. ಸಿನಿಮಾ ಬಿಡುಗಡೆಯಾಗಿದ್ದೆ ತಡ ಜೆನ್ನಿ ತನ್ನ ಪಾತ್ರದ ಮೂಲಕ ಆಂಧ್ರದಲ್ಲಿ ಮನೆ ಮಾತಾದರು. ಬೊಮ್ಮರಿಲ್ಲು ತೆಲುಗಿನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದೆ ತಡ ತಮಿಳು- ಹಿಂದಿಯಿಂದ ನಿರ್ಮಾಪಕರು ಅದರ ರೀಮೇಕ್ ಹಕ್ಕುಗಳಾಗಿ ಮುಗಿ ಬಿದ್ದರು. ಇದಿಷ್ಟೇ ಅಲ್ಲಈ ಪಾತ್ರವನ್ನು ಜೆನ್ನಿ ಹೊರತು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ ಎಂಬ ನಿಲುವು ಅವರದು.

ತಮಿಳಿನಲ್ಲಿ ಸಂತೋಷ್ ಸುಬ್ರಮಣ್ಯಂ ಎಂಬ ಹೆಸರಿನಲ್ಲಿ ರೀಮೇಕ್‌ ಆದ ಈ ಸಿನಿಮಾ ಕಳೆದ ವರ್ಷದ ಅತಿಹೆಚ್ಚಿನ ಹಣ ಗಳಿಸಿದ ಸಿನಿಮಾಗಳ ಪೈಕಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಇಲ್ಲೂ ಕೂಡ ಜೆನ್ನಿ ಮೇನಿಯಾ ಕೆಲಸ ಮಾಡಿದೆ. ಈಗ ಹಿಂದಿ ಸರದಿ. ಸರಿಯಾದ ಹಿಟ್‌ ಗಾಗಿ ಎದುರು ನೋಡುತ್ತಿರುವ ನಟ ಹರ್ಮನ್ ಬವೇಜಾ ನಟಿಸುತ್ತಿರುವ 'ಇಟ್ಸ್ ಮೈ ಲೈಫ್ 'ಚಿತ್ರದಲ್ಲಿ ಕೂಡ ಜೆನ್ನಿ ಅದೇ ಹಂಸಿನಿ ಪಾತ್ರದಲ್ಲಿ ಮಿಂಚುವುದಕ್ಕೆ ಸಿದ್ಧಳಾಗಿದ್ದಾರೆ. ಅದು ಅಲ್ಲದೆ 'ಜಾನೇ ತು ಜಾನೇ ನಾ' ಚಿತ್ರದ ಯಶಸ್ಸಿನ ಗರಿ ಕೂಡ ಜೆನಿಲಿಯಾರ ಮುಡಿಗೇರಿದೆ. ಒಟ್ಟಾರೆ ಒಂದು ಹೆಜ್ಜೆ ಟಾಲಿವುಡ್‌ನಲ್ಲಿ ಮತ್ತೊಂದು ಬಾಲಿವುಡ್‌ನಲ್ಲಿ ಇಟ್ಟು ಯಶಸ್ಸಿನ ಹಾದಿಯಲ್ಲಿ ಜೆನ್ನಿ ಸಿನಿಮಾ ಜೀವನ ಸಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸ್ಯಾಂಡಲ್ ವುಡ್ ಗೆ ಎಳ್ಳುನೀರು ಬಿಟ್ಟ ಜೆನಿಲಿಯಾ
ಅಪ್ಪು ಜೋಡಿಯಾಗಲಿರುವ ಜೆನಿಲಿಯಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada