»   »  ಪಂಜಾಬ್ 69ನಿಂದ ಜಿಯಾ ಖಾನ್ ಔಟ್!

ಪಂಜಾಬ್ 69ನಿಂದ ಜಿಯಾ ಖಾನ್ ಔಟ್!

Subscribe to Filmibeat Kannada
Jiah Khan dropped from yet another movie
ಆಕೆ ನಟಿಸಿದ ಮೊದಲ ಚಿತ್ರ ಬಿಗ್ ಬಿ ಅಮಿತಾಬ್ ಜತೆ. ಚಿತ್ರಕ್ಕೆ ರಾಮ್ ಗೋಪಾಲ್ ವರ್ಮಾ ನಿರ್ದೇಶನ ಬೇರೆ ಇತ್ತು. ಚಿತ್ರದ ಹೆಸರು 'ನಿಶ್ಯಬ್ದ್'. ಇಷ್ಟೊತ್ತಿಗಾಗಲೇ ನಿಮಗೆ ಅರ್ಥವಾಗಿರುತ್ತದೆ ಯಾರ ಬಗ್ಗೆ ಹೇಳಲಾಗುತ್ತಿದೆ ಎಂದು! ಆಕೆ ಮತ್ತಿನ್ಯಾರು ಅಲ್ಲ ಬಾಲಿವುಡ್ ಬೆಡಗಿ ಜಿಯಾ ಖಾನ್!

65 ವರ್ಷದ ಅಮಿತಾಬ್ ರನ್ನು ಪ್ರೀತಿಸುವ 18ರ ಹರೆಯದ ಯುವತಿ ಪಾತ್ರದಲ್ಲಿ ತನ್ನ ಅಂದಚಂದಗಳನ್ನು ಪರೀಕ್ಷೆಗೆ ಒಡ್ಡಿದ್ದಳು. ಆದರೆ ಕಾಲ ಕೂಡಿಬರಲಿಲ್ಲ. ಗಜಿನಿ ಚಿತ್ರದಲ್ಲಿ ಈಕೆ ಸಹ ನಟಿಸಿದ್ದರು. ಆದರೆ ಹೆಸರು ಮಾತ್ರ ಅಸಿನ್ ರ ಪಾಲಾಯಿತು. ಇದೇ ವಿಷಯದಲ್ಲಿ ನೊಂದಿರುವ ಜಿಯಾಗೆ ಮತ್ತೊಂದು ಶಾಕ್ ಹೊಡೆದಿದೆ. ಮೂರು ವಾರಗಳ ಕಾಲ ಚಿತ್ರೀಕರಣ ನಡೆದ ಬಳಿಕ 'ಯಾಹೂ' ಚಿತ್ರದಿಂದ ಯೂಟಿವಿ ಗೇಟ್ ಪಾಸ್ ಕೊಟ್ಟಿದೆ. ಈ ಆಘಾತದಿಂದ ಚೇತರಿಸಿಕೊಳ್ಳುತ್ತಿರುವಂತೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಎಂ.ಎಫ್ ಹುಸೇನ್ ಮಗ ಒವೈಸ್ ಹುಸೇನ್ ರ 'ಪಂಜಾಬ್ 69' ಚಿತ್ರೀಕರಣ ಚಂಡಿಗಢದಲ್ಲಿ ಇತ್ತೀಚೆಗೆ ಪ್ರಾರಂಭವಾಯಿತು. ಜಿಯಾ ಖಾನ್ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಏನಾಯಿತೋ ಏನೋ ಆಕೆಯನ್ನು ಕೈಬಿಟ್ಟು ಈಗ 'ಜನ್ನತ್' ಚಿತ್ರದ ಸೋನಾಲ್ ಚೌಹಾಣ್ ಕೈಹಿಡಿಯಲು ಹುಸೇನ್ ಆಸಕ್ತಿ ತೋರಿಸುತ್ತಿದ್ದಾರೆ. ಇದೆಲ್ಲಾ ತಿಳಿದ ಬಳಿಕ ನನ್ನನ್ಯಾಕೆ ಚಿತ್ರಗಳಿಂದ ಅರ್ಧದಲ್ಲೇ ಕೈಬಿಡುತ್ತಿದ್ದಾರೆ ಎಂದು ಸ್ನೇಹಿತರ ಬಳಿ ಜಿಯಾ ಖಾನ್ ಅಲವತ್ತು ಕೊಳ್ಳುತ್ತಿದ್ದಾರಂತೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಬಿಪಾಶಾಗೆ ಇನ್ನೂ ಸೀರೆ ಉಡಲು ಬರುವುದಿಲ್ಲವಂತೆ!
ಕರೀನಾ ಸೀರೆ ಬೆಲೆ ಕೇವಲ ಎಂಟು ಲಕ್ಷ ರುಪಾಯಿ!
ಹೃತಿಕ್ ರೋಷನ್, ಬಾರ್ಬರಾ ರೊಮ್ಯಾನ್ಸ್?
ನಯನ ತಾರಾ ಸೊಂಟದ ವಿಷಯ ಬೇಡವೊ ಶಿಷ್ಯ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada