»   »  ಬಡ ವಿದ್ಯಾರ್ಥಿಗಳಿಗಾಗಿ ಕರೀನಾ ಕಪೂರ್ ಶಾಲೆ

ಬಡ ವಿದ್ಯಾರ್ಥಿಗಳಿಗಾಗಿ ಕರೀನಾ ಕಪೂರ್ ಶಾಲೆ

Posted By:
Subscribe to Filmibeat Kannada

ಚಿತ್ರೋದ್ಯಮದಲ್ಲಿ ಶಾಲೆ ಎಂಬ ಪದ ಆಗಾಗ ಕೇಳಿಸುತ್ತಿರುತ್ತದೆ. ಉದಾಹರಣೆಗೆ ರಾಮ್ ಗೋಪಾಲ್ ವರ್ಮಾ ಸ್ಕೂಲ್, ಪುಟ್ಟಣ್ಣ ಕಣಗಾಲ್ ಸ್ಕೂಲ್...ಎಂದು ಅವರವರ ಬಳಿ ವಿದ್ಯೆ ಕಲಿತು ಬಂದ ನಿರ್ದೇಶಕ, ನಟ ನಟಿಯರ ಬಗ್ಗೆ ಹೇಳ ಬೇಕಾದರೆ 'ಶಾಲೆ' ಎಂಬ ಪದ ಉದುರುತ್ತದೆ. ಆದರೆ ಕರೀನಾ ಕಪೂರ್ ಸ್ಕೂಲ್ ಬಗ್ಗೆ ಕೇಳಿದ್ದೀರಾ?

ಹೌದು ಬಾಲಿವುಡ್ ನಟಿ ಕರೀನಾ ಕಪೂರ್ ಪಾಠ ಶಾಲೆಯೊಂದನ್ನು ಆರಂಭಿಸಲಿದ್ದಾರೆ. ನಟನೆಯನ್ನು ಕಲಿಸಲು ಅಲ್ಲ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ. ಈ ಶಿಕ್ಷಣ ಸಂಸ್ಥೆಗಾಗಿ ಅವರು ಬಹಳಷ್ಟು ಬೆವರು ಸುರಿಸುತ್ತಿದ್ದಾರೆ. ಶಾಲೆಯನ್ನು ಆರಂಭಿಸಲು ಮುಂಬೈನಲ್ಲಿ ಸೂಕ್ತ ಸ್ಥಳಕ್ಕಾಗಿ ಕರೀನಾರ ಹುಡುಕಾಟ ಪ್ರಾರಂಭವಾಗಿದೆ. ಇದಕ್ಕಾಗಿ ಸುಮಾರು ರು.15 ಕೋಟಿಯಷ್ಟು ಹಣವನ್ನು ಹೊಂದಿಸಿಕೊಂಡಿದ್ದಾರೆ! ರಾಜ್ ಕಪೂರ್ ಹೆಸರಿನಲ್ಲಿ ಈ ಶಿಕ್ಷಣ ಸಂಸ್ಥೆ ಸ್ಥಾಪಿಸಬೇಕು ಎಂಬುದು ಅವರ ಹೆಬ್ಬಯಕೆ. ಕಡಿಮೆ ಆದಾಯವುಳ್ಳ,ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗಾಗಿ ಶಾಲೆಯೊಂದನ್ನು ಪ್ರಾರಂಭಿಸಬೇಕು ಎಂದು ರಾಜ್ ಕಪೂರ್ ಕನಸು ಕಟ್ಟಿದ್ದರಂತೆ.ತಾತನ ಕನಸನ್ನು ಮೊಮ್ಮಗಳು ಕರೀನಾ ಈಗ ನನಸು ಮಾಡಲು ಹೊರಟಿದ್ದಾರೆ.

ಶಾಲಾ ನಿರ್ಮಾಣಕ್ಕಾಗಿ ಕರೀನಾರ ಸಹೋದರಿ ಕರಿಷ್ಮಾಕಪೂರ್ ಸಹ ಕೈಜೋಡಿಸಿದ್ದಾರೆ. ಶಿಕ್ಷಣ ಸಂಸ್ಥೆ ಬಗ್ಗೆ ಕರೀನಾ ಮಾತನಾಡುತ್ತಾ, ''ನಮ್ಮ ತಾತನ ಕನಸು ಈ ಶಾಲೆ. ನಾನು ಯೋಗ ಶಿಕ್ಷಣ ಕೇಂದ್ರವನ್ನು ಪ್ರಾರಂಭಿಸಬೇಕು ಎಂದುಕೊಂಡಿದ್ದೆ. ಆದರೆ ಶಾಲೆಯನ್ನು ನಿರ್ಮಾಣ ಮಾಡಬೇಕಾದ ಕಾರಣ ಸದ್ಯಕ್ಕೆ ಯೋಗ ಕೇಂದ್ರವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದೇನೆ. ಪ್ರಸ್ತುತ ನನ್ನ ಗಮನವೆಲ್ಲಾ ಸೂಕ್ತ ನಿವೇಶನವೊಂದನ್ನು ಹುಡುಕಿ ಶಾಲಾ ಕಟ್ಟಡ ನಿರ್ಮಿಸುವುದರ ಕಡೆಗೇ ಇದೆ . ಸಾಧ್ಯವಾದಷ್ಟು ಬೇಗ ಆ ಶಾಲೆಯನ್ನು ನಿರ್ಮಿಸಿ ಉಚಿತವಾಗಿ ಶಿಕ್ಷಣ ನೀಡಬೇಕು ಎಂದು ಸಂಕಲ್ಪಿಸಿದ್ದೇನೆ'' ಎನ್ನುತ್ತಾರೆ.

(ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada