For Quick Alerts
  ALLOW NOTIFICATIONS  
  For Daily Alerts

  ಸೈಫ್‌ ಆಲಿ ಖಾನ್‌ಗೆ ಏಳು ವರ್ಷ ಜೈಲು ಶಿಕ್ಷೆ ಸಂಭವ

  By Rajendra
  |

  ಬಾಲಿವುಡ್‌ನಲ್ಲಿ ಬ್ಯಾಡ್ ಬಾಯ್ಸ್ ಎನ್ನಿಸಿಕೊಂಡಿರುವ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಬಳಗಕ್ಕೆ ಇದೀಗ ಹೊಸ ಸೇರ್ಪಡೆ ಸೈಫ್ ಆಲಿ ಖಾನ್. ಕಳೆದ ರಾತ್ರಿ (ಫೆ.21)ವ್ಯಕ್ತಿಯೊಬ್ಬರ ಮೇಲೆ ಕೈ ಮಾಡಿ ಈಗ ವಿವಾದಕ್ಕೆ ಸಿಲುಕಿದ್ದಾರೆ ಸೈಫ್ ಆಲಿ ಖಾನ್.

  ಪೊಲೀಸರು ಐಪಿಸಿ ಸೆಕ್ಷನ್ 325 ರಡಿ ಕೇಸು ದಾಖಲಿಸಿಕೊಂಡಿದ್ದು ಸೈಫ್ ಆಲಿ ಖಾನ್ ಬಂಧಿಸುವ ಸಾಧ್ಯತೆಗಳಿವೆ. ಒಂದು ವೇಳೆ ಸೈಫ್ ವಿರುದ್ಧದ ಆರೋಪ ಸಾಬೀತಾದರೆ ಏಳು ವರ್ಷ ಕಠಿಣ ಖಾರಾಗಾರ ಶಿಕ್ಷೆ ಜಾರಿಯಾಗುವ ಸಾಧ್ಯತೆಗಳಿವೆ.

  ಮುಂಬೈನ ಜುಹು ನಿವಾಸಿಯಾದ ಇಕ್ಬಾಲ್ ಶರ್ಮ ತನಗೆ ಸೈಫ್ ಹಿಗ್ಗಾಮುಗ್ಗಾ ಹೊಡೆದಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಕರೀನಾ ಕಪೂರ್ ಸೇರಿದಂತೆ ಇನ್ನಿತರೆ ಗೆಳೆಯರ ಜೊತೆ ಸೈಫ್ ರಾತ್ರಿ ಭೋಜಕ್ಕಾಗಿ ತಾಜ್ ಹೋಟೆಲ್‌ಗೆ ಹೋಗಿದ್ದರು.

  ಸೈಫ್ ಮತ್ತವರ ಗೆಳೆಯರು ಜೋರಾಗಿ ಗಲಾಟೆ ಮಾಡುತ್ತಿದ್ದ ಬಗ್ಗೆ ಅವರ ಪಕ್ಕದ ಟೇಬಲ್‌ನಲ್ಲಿದ್ದ ಇಕ್ಬಾಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸೈಫ್, ತಮಗೆ ನಿಶಬ್ದವಾದ ವಾತಾವರಣ ಬೇಕಾದರೆ ಲೈಬ್ರರಿಗೆ ಹೋಗಿ ಎಂದಿದ್ದಾರೆ. ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕಡೆಗೆ ಇಕ್ಬಾಲ್ ಮೇಲೆ ಸೈಫ್ ಕೈ ಮಾಡಿದ್ದಾರೆ ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)

  English summary
  A case under section 325 of the IPC has been registered against Saif Ali Khan. The incident took place last night at Wasabi restaurant at Taj Hotel when he, along with Kareena and a few friends, were having dinner.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X