»   » ಘಜಿನಿ ನೋಡಿ ಎಂದ ಕಿಂಗ್ ಖಾನ್ ಶಾರೂಕ್

ಘಜಿನಿ ನೋಡಿ ಎಂದ ಕಿಂಗ್ ಖಾನ್ ಶಾರೂಕ್

Subscribe to Filmibeat Kannada
amir khan in ghajini
ಬಾಲಿವುಡ್ ನಲ್ಲಿರುವ ತ್ರಿವಳಿ ಖಾನ್ ಗಳು ಎದ್ದರೂ ಸುದ್ದಿ, ಬಿದ್ದರೂ ಸುದ್ದಿ. ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್, ಕಿಂಗ್ ಖಾನ್ ಶಾರೂಕ್ ಖಾನ್ ಹಾಗೂ ಬ್ಯಾಡ್ ಬಾಯ್ ಎಂದೇ ಖ್ಯಾತರಾಗಿರುವ ಸಲ್ಮಾನ್ ಖಾನ್ ಎಷ್ಟೇ ಖ್ಯಾತಿ ಹೊಂದಿ ಉತ್ತುಂಗದಲ್ಲಿದ್ದರೂ ಕೂಡಾ ಅಸೂಯೆ ಎನ್ನುವುದು ಮನುಷ್ಯನ ರಕ್ತದಲ್ಲಿರುವ ಹುಟ್ಟು ಗುಣ. ಆ ಮೂರು ಖಾನ್ ಗಳು ಅದಕ್ಕೆ ಹೊರತಲ್ಲ. ಇವರಿಗೆ ಯಾರನ್ನೂ ಕಂಡರೂ ಯಾರಿಗೂ ಆಗಲ್ಲ. ಇದು ಹಳೆಯ ಸುದ್ದಿ ಬಿಡಿ.

ಇದೀಗ ಬಂದಿರುವ ಸುದ್ದಿಯ ಪ್ರಕಾರ, ಅಮೀರ್ ನಟನೆಯ ಬಹುನಿರೀಕ್ಷಿತ ಘಜಿನಿ ಚಿತ್ರವನ್ನು ತಪ್ಪದೇ ನೋಡಿ ಎಂದು ಕಿಂಗ್ ಖಾನ್ ಶಾರೂಕ್ ಖಾನ್ ಸಾರ್ವಜನಿರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಘಜಿನಿ, ಚಾಂದನಿಚೌಕ್ ಟು ಚೀನಾ ಚಿತ್ರಗಳನ್ನು ನೋಡಲು ನಾನು ಉತ್ಸುಕನಾಗಿದ್ದೇನೆ. ಘಜಿನಿಗಾಗಿ ಅಮೀರ್ ಸಾಕಷ್ಟು ತಯಾರಿ ಜತೆಗೆ ಕಷ್ಟಪಟ್ಟಿದ್ದಾರೆ. ಚಿತ್ರ ಅದ್ಭುತವಾಗಿ ಮೂಡಿಬಂದಿದೆ ಎನ್ನುವ ವಿಶ್ವಾಸವಿದೆ. ಆದ್ದರಿಂದ ಎಲ್ಲರೂ ಘಜಿನಿಯನ್ನು ನೋಡಿ ಆನಂದಿಸಿ ಎಂದು ಶಾರೂಕ್ ಚಿತ್ರ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಇದೇ 25 ರಂದು ದೇಶ್ಯಾದ್ಯಂತ ಬಿಡುಗಡೆಯಾಗಲಿರುವ ತಮಿಳು ರಿಮೇಕ್ ಚಿತ್ರ ಘಜಿನಿ, ಅಮೀರ್ ಖಾನ್ ಗರಡಿಯಲ್ಲಿ ವಿನೂತನ ಶೈಲಿಯಲ್ಲಿ ತೆರೆಗೆ ಬರಲು ಸಿದ್ಧತೆ ನಡೆಸಿದೆ. ಘಜಿನಿ ಚಿತ್ರದ ಬಗ್ಗೆ ಬಾಲಿವುಡ್ ಸೇರಿದಂತೆ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ, ಭರವಸೆ ಇಟ್ಟುಕೊಂಡಿದ್ದಾರೆ. ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿಯಾಗಿರುವ ಅಮೀರ್, ತಾವೂ ನಟಿಸುವ ಚಿತ್ರ ವರ್ಷಕ್ಕೆ ಒಂದೇ ಆದರೂ ಅದು ಬಾಲಿವುಡ್ ಎಲ್ಲ ಲೆಕ್ಕಾಚಾರ, ಬಾಕ್ಸಾಫೀಸು ಎಲ್ಲವನ್ನು ತಿರುವು ಮುರುವು ಮಾಡುವ ಶಕ್ತಿ ಇರುವಂತ ಚಿತ್ರವನ್ನೇ ತೆರೆಗೆ ಬಿಡುವುದರಲ್ಲಿ ಅಮೀರ್ ಸಿದ್ಧಹಸ್ತರು. ಇದನ್ನು ಈಗಾಗಲೇ ಅವರು ಸಾಬೀತು ಮಾಡಿದ್ದಾರೆ, ಅವರು ನಟ ಅಷ್ಟೇ ಅಲ್ಲ, ನಿರ್ದೇಶಕ, ನಿರ್ಮಾಪಕರಾಗಿಯೂ ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಿದ್ದಾರೆ. ತಾರೇ ಜಮೀನ್ ಪರ್, ರಂಗ್ ದೇ ಬಸಂತಿ, ಲಗಾನ್ ಚಿತ್ರಗಳು ಅಮೀರ್ ಗರಡಿಯಲ್ಲಿ ಪಳಗಿರುವ ಚಿತ್ರಗಳಾಗಿವೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada