»   » ಅಕ್ಷಯ್ ಜತೆ ಕತ್ರಿನಾ 'ತೀನ್ ಮಾರ್ ಖಾನ್'

ಅಕ್ಷಯ್ ಜತೆ ಕತ್ರಿನಾ 'ತೀನ್ ಮಾರ್ ಖಾನ್'

Posted By:
Subscribe to Filmibeat Kannada

ಬಾಲಿವುಡ್ ನಿರ್ದೇಶಕಿ ಫರಾ ಖಾನ್ ನಿರ್ದೇಶನದಲ್ಲಿ ಸೆಟ್ಟೇರಲಿರುವ ಹೊಸ ಚಿತ್ರಕ್ಕೆ 'ತೀಸ್ ಮಾರ್ ಖಾನ್' ಎಂದು ಹೆಸರಿಡಲಾಗಿದೆ. ಆಕೆಯ ಪತಿ ಶಿರಿಷ್ ಕುಂದರ್ ಸ್ವಂತ ನಿರ್ಮಾಣ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಅಕ್ಷಯ್ ಕುಮಾರ್ ಚಿತ್ರದ ನಾಯಕ ನಟ. ಅಕ್ಷಯ್ ಸ್ವಂತ ನಿರ್ಮಾಣದ ಹರಿ ಓಂ ಪ್ರೊಡಕ್ಷನ್ ಸಹ ಈ ಚಿತ್ರಕ್ಕೆ ಬಂಡಳವಾಳ ಹೂಡುತ್ತಿರುವುದು ವಿಶೇಷ.

ತೀಸ್ ಮಾರ್ ಖಾನ್ ಚಿತ್ರಕ್ಕೆ ನಾಯಕಿಯಾಗಿ ಕತ್ರಿನಾ ಕೈಫ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಶಾರುಖ್ ಖಾನ್ ರೊಂದಿಗೆ 'ಹ್ಯಾಪಿ ನ್ಯೂ ಇಯರ್' ಚಿತ್ರದಲ್ಲಿ ನಟಿಸುವ ಸಮಯದಲ್ಲೇ ಕತ್ರಿನಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಫರಾ ಬಂದಿದ್ದರಂತೆ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ.

ಕತ್ರಿನಾ...ಸಲ್ಲುಗೆ ಗೆಳತಿಯಾಗಿರುವುದು...ಶಾರುಖ್ ಮತ್ತು ಸಲ್ಮಾನ್ ನಡುವಿನ ಭಿನ್ನಾಭಿಪ್ರಾಯಗಳ ಕಾರಣ ಫರಾ ಆ ಯೋಚನೆಯನ್ನು ಕೈಬಿಡಬೇಕಾಯಿತಂತೆ. ಫರಾ ಅವರಿಗೆ ಕತ್ರಿನಾರೊಂದಿಗೆ ಸಿನಿಮಾ ಮಾಡಬೇಕೆಂಬ ಕೋರಿಕೆ ಮಾತ್ರ ಹಾಗೆ ಉಳಿದಿತ್ತು. ಇದೀಗ ಕಾಲ ಕೂಡಿ ಬಂದಿದ್ದು ಶೀಘ್ರದಲ್ಲೇ 'ತೀನ್ ಮಾರ್ ಖಾನ್' ಚಿತ್ರೀಕರಣ ಆರಂಭವಾಗಲಿದೆ ಎನ್ನುತ್ತವೆ ಬಾಲಿವುಡ್ ಮೂಲಗಳು.

ಸಿಂಗ್ ಈಸ್ ಕಿಂಗ್ ಭಾಗ 2
ಬಾಲಿವುಡ್ ಬಾಕ್ಸಾಫೀಸಲ್ಲಿ ಕಾಸಿನ ಮಳೆ ಸುರಿಸಿದ 'ಸಿಂಗ್ ಈಸ್ ಕಿಂಗ್' ಚಿತ್ರದ ಮುಂದಿನ ಭಾಗ ಸದ್ಯದಲ್ಲೇ ಸೆಟ್ಟೇರಲಿದೆ. ಸಿಂಗ್ ಈಸ್ ಕಿಂಗ್ ಚಿತ್ರವನ್ನು ವಿಪುಲ್ ಶಾ ನಿರ್ದೇಶಿಸಿದ್ದರು. ಇದೀಗ ಅದರ ಮುಂದಿನ ಭಾಗದ ಚಿತ್ರಕತೆಯ ಸಿದ್ಧತೆಯಲ್ಲಿ ವಿಪುಲ್ ಮಗ್ನರಾಗಿದ್ದಾರೆ.

ಸಿಂಗ್ ಈಸ್ ಕಿಂಗ್ ಚಿತ್ರದ ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಭಾಗ 2ರಲ್ಲೂ ನಟಿಸಲಿದ್ದಾರೆ. ಈ ಬಗ್ಗೆ ವಿವರ ನೀಡಿರುವ ವಿಪುಲ್, ಸಿಂಗ್ ಈಸ್ ಕಿಂಗ್ ಎಂದರೇನೆ ಪ್ರೇಕ್ಷಕರಲ್ಲಿ ಅವರದೇ ಆದ ನಿರೀಕ್ಷೆಗಳಿರುತ್ತವೆ. ಅವುಗಳನ್ನು ನೆರೆವೇರಿಸುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದೇನೆ. ಚಿತ್ರ ಹಾಸ್ಯ ಪ್ರಧಾನವಾಗಿರುತ್ತದೆ. ಮುಂದಿನ ವರ್ಷ ಜೂನ್, ಜುಲೈನಲ್ಲಿ ಬಿಡುಗಡೆ ಮಾಡುವ ರೀತಿಯಲ್ಲಿ ಯೋಜನೆ ರೂಪಿಸುತ್ತಿದ್ದೇವೆ ಎನ್ನುತ್ತಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada