»   » ಕಿರುತೆರೆಯತ್ತ ಬಾಲಿವುಡ್ ಅತಿರಥ ಮಹಾರಥರ ಚಿತ್ತ!

ಕಿರುತೆರೆಯತ್ತ ಬಾಲಿವುಡ್ ಅತಿರಥ ಮಹಾರಥರ ಚಿತ್ತ!

Posted By:
Subscribe to Filmibeat Kannada

ಅಮಿತಾಬ್, ಶಾರುಖ್ ಅವರಿಂದ ಹಿಡಿದು ತೀರಾ ಇತ್ತೀಚಿಗೆ ಅಮೀರ್ ಖಾನ್ ವರೆಗೂ ಬಾಲಿವುಡ್ ನಟರು ಕಿರುತೆರೆಯತ್ತ ಬರುತ್ತಿರುವ ಅಚ್ಚರಿಯ ಬೆಳವಣಿಗೆ ನಡೆದೇ ಇದೆ. ಇದೀಗ ಇದಕ್ಕೆ ಹೊಸ ಸೇರ್ಪಡೆ ನಟ, ನಿರ್ದೇಶಕ ಫರಾನ್ ಅಖ್ತರ್. ಅವರೀಗ ರಿತೇಶ್ ಸಿಧ್ವಾನಿ ಜೊತೆಗೂಡಿ ಟಿವಿಯಲ್ಲೊಂದು ರಿಯಾಲಿಟಿ ಶೋ ನಡೆಸಲು ನಿರ್ಧರಿಸಿ ಪ್ರಯತ್ನ ಆರಂಭಿಸಿದ್ದಾರೆ.

"ಇತ್ತೀಚಿಗೆ ಮನರಂಜನೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಪ್ರೋಗ್ರಾಂಗಳು ಟಿವಿಯಲ್ಲಿ ತುಂಬಾ ಜನಪ್ರಿಯವಾಗುತ್ತಿವೆ. ಹಾಗಾಗಿ ನಾವೂ ಕೂಡ ಅಂತಹದ್ದೊಂದು ಪ್ರಯತ್ನಕ್ಕೆ ಸಜ್ಜಾಗಿದ್ದೇವೆ" ಎಂದಿದ್ದಾರೆ, ನಿರ್ದೇಶಕ ಫರ್ಹಾನ್ ಅಖ್ತರ್. ಈ ಮೊದಲು ಕೌನ್ ಬನೇಗಾ ಕರೋಡ್ ಪತಿ ಮೂಲಕ ಅಮಿತಾಬ್ ಬಚ್ಚನ್, ಶಾರುಖ್ ಖಾನ್ ತುಂಬಾ ಪ್ರಸಿದ್ಧಿ ಪಡೆದ ಬಾಲಿವುಡ್ ಮಹಾರಥರು.

ನಂತರ ಬಂದ ಸಲ್ಮಾನ್ ಖಾನ್ ಕೂಡ ಕಿರುತೆರೆಯಲ್ಲಿ ಸಖತ್ ಮಿಂಚಿದ್ದರು. ನಟಿಯರಾದ ಮಾಧುರಿ ದೀಕ್ಷಿತ್, ಸೊನಾಲಿ ಬೇಂದ್ರೆ, ಕಾಜೋಲ್ ಮುಂತಾದವರೂ ಕೂಡ ಜಡ್ಜ್ ಹಾಗೂ ನಿರೂಪಣೆ ಮೂಲಕ ಕಿರುತೆರೆಯಲ್ಲಿ ಮಿಂಚಿದ್ದಾರೆ. ಅಮೀರ್ ಖಾನ್ ಇದೀಗ 4 ಭಾಷೆಗಳಲ್ಲಿ 'ಸತ್ಯಮೇವ ಜಯತೇ' ಎಂಬ ಕಾರ್ಯಕ್ರಮದ ಮೂಲಕ ಮಿಂಚಲು ಹೊರಟಿದ್ದಾರೆ. ಅಮೀರ್ ಹೆಜ್ಜೆಯನ್ನು ಫರ್ಹಾನ್ ಹಿಂಬಾಲಿಸುತ್ತಿದ್ದಾರೆ. (ಏಜೆನ್ಸೀಸ್)

English summary
Farhan Akhtar is following Aamir Khan's footsteps into Television shows.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada