»   »  ಹಿಂದಿಯಲ್ಲಿ ಅಸಿನ್ ಗೆ ತಾನು ಸ್ಪರ್ಧಿಯಲ್ಲ; ತ್ರಿಶಾ

ಹಿಂದಿಯಲ್ಲಿ ಅಸಿನ್ ಗೆ ತಾನು ಸ್ಪರ್ಧಿಯಲ್ಲ; ತ್ರಿಶಾ

Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ತಾರೆ ತ್ರಿಶಾ ಬಾಲಿವುಡ್ ಗೆ ಅಡಿಯಿಡುತ್ತಿದ್ದು, ನಟ ಅಕ್ಷಯ್ ಕುಮಾರ್ ಜತೆ ಅವರು ನಟಿಸಲಿದ್ದಾರೆ. ದಕ್ಷಿಣದ ಮತ್ತೊಬ್ಬ ಖ್ಯಾತ ತಾರೆ ಅಸಿನ್ ಗೆ ತ್ರಿಶಾ ಸ್ಪರ್ಧಿಯಾಗಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ವಲಯದಲ್ಲಿ ಹಬ್ಬಿದೆ. ಆದರೆ ತಾನೂ ಅಸಿನ್ ಗೆ ಸ್ಪರ್ಧಿಯಲ್ಲ ಎಂಬುದನ್ನು ತ್ರಿಶಾ ಸ್ಪಷ್ಟಪಡಿಸಿದ್ದಾರೆ.

ಅಸಿನ್ ಮೇಲಿನ ಸ್ಪರ್ಧೆಗಾಗಲಿ ಅಥವಾ ಸುಖಾ ಸುಮ್ಮನೆ ಹಿಂದಿ ಚಿತ್ರದಲ್ಲಿ ನಟಿಸಲು ಹೊರಟಿಲ್ಲ. ನನ್ನ ಚಿತ್ತವೆಲ್ಲಾ ಆ ಚಿತ್ರದ ಪಾತ್ರದ ಬಗ್ಗೆ ಅಷ್ಟೆ. ಬೇರೆಯವರ ಬಗ್ಗೆ ಯೋಚಿಸಲು ನನಗೆ ಸಮಯವೂ ಇಲ್ಲ ಎಂದು ಹೇಳಿ ತ್ರಿಶಾ ಬಾಲಿವುಡ್ ನಲ್ಲಿ ಎಚ್ಚರಿಕೆಯ ಹೆಜ್ಜೆಯನ್ನೇ ಇಟ್ಟಿದ್ದಾರೆ.

ಅಸಿನ್ ಮೇಲಿನ ಸ್ಪರ್ಧೆಗಾಗಿಯೇ ನಾನು ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂಬುದು ಕೇವಲ ವದಂತಿ. ಅಸಿನ್ ಗೆ ನಾನು ಸ್ಪರ್ಧಿ ಎಂಬುದನ್ನು ಕೆಲವರು ಚಿತ್ರಿಸುತ್ತಿದ್ದಾರೆ. 'ಅಭಿಯುಂ ನಾನುಂ' ಚಿತ್ರದಲ್ಲಿನ ನಟನೆಯನ್ನು ಮೆಚ್ಚಿ ಅಕ್ಷಯ್ ತಮ್ಮ 'ಕಠಾ ಮೀಠಾ' ಚಿತ್ರದಲ್ಲಿ ಅವಕಾಶ ನೀಡಿದ್ದಾರೆ. ಇದು ಅಕ್ಷಯ್ ಸ್ವಂತ ನಿರ್ಮಾಣದ ಚಿತ್ರ ಎನ್ನುತ್ತಾರೆ ತ್ರಿಶಾ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada