For Quick Alerts
  ALLOW NOTIFICATIONS  
  For Daily Alerts

  ಕರೀನಾ ಕಪೂರ್ ಮದುವೆಗೆ ರು.40 ಲಕ್ಷ ನೆಕ್ಲೇಸ್

  By Rajendra
  |

  ಬಾಲಿವುಡ್ ತಾರೆ ಕರೀನಾ ಕಪೂರ್ ಮದುವೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಚೋಟಾ ನವಾಬ್ ಸೈಫ್ ಆಲಿ ಖಾನ್ ಕೈಹಿಡಿಯಲಿರುವ ಕರೀನಾ ಇತ್ತೀಚೆಗಷ್ಟೇ ದುಬಾರಿ ಬೆಲೆಯ ನೆಕ್ಲೇಸ್‌ಗೆ ಆರ್ಡರ್ ಮಾಡಿದ್ದಾರೆ. ಪಟೌಡಿ ಕುಟುಂಬದ ಬೇಗಂ ಆಗಲಿರುವ ಕರೀನಾ ಈಗಿಂದಲೇ ಮದುವೆಗೆ ಒಡವೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.

  ಬಾಲಿವುಡ್ ಮೂಲಗಳ ಪ್ರಕಾರ, ತೀರಾ ಇತ್ತೀಚೆಗೆ ಕರೀನಾ ರು.40 ಲಕ್ಷದ ದುಬಾರಿ ನೆಕ್ಲೇಸ್‌ಗೆ ಆರ್ಡರ್ ಮಾಡಿದ್ದಾರೆ. ವಿಶೇಷವಾಗಿ ವಿನ್ಯಾಸ ಮಾಡಿಸಿರುವ ಈ ನೆಕ್ಲೇಸ್ ಸೊಂಟಕ್ಕೆ ತಾಕುವಷ್ಟು ಉದ್ದವಾಗಿದೆ ಎಂಬುದು ಬಾಲಿವುಡ್‌ನ ಗರಮಾ ಗರಂ ನ್ಯೂಸ್.

  ಸದ್ಯಕ್ಕೆ 'ಏಜೆಂಟ್ ವಿನೋದ್' ಎಂಬ ಚಿತ್ರದಲ್ಲಿ ಸೈಫ್ ಆಲಿಖಾನ್ ಅಭಿನಯಿಸುತ್ತಾರೆ. ಈ ಚಿತ್ರ ಬಿಡುಗಡೆಯಾದ ಕೂಡಲೆ ತಡಮಾಡದೆ ಕರೀನಾಳನ್ನು ವರಿಸುವುದಾಗಿ ಸೈಫ್ ಹೇಳಿಕೊಂಡಿದ್ದಾರೆ. ಒಂದು ವೇಳೆ ಏಜೆಂಟ್ ವಿನೋದ್ ಬಿಡುಗಡೆ ಮುಂದೂಲ್ಪಟ್ಟರೆ ಮಾರ್ಚ್‌ಗೆ ಶಾದಿ ಗ್ಯಾರಂಟಿ ಎನ್ನುತ್ತಾರೆ ಸೈಫ್. (ಏಜೆನ್ಸೀಸ್)

  English summary
  Saif Ali Khan's would be wife Kareena Kapoor has started hitting the headlines with her expensive wedding plans. It's not shocking that Bebo's wedding plans will definitely be something unique since she is all set to become the begum of the Pataudi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X