»   »  ಬೆತ್ತಲೆ ದೃಶ್ಯವೊಂದರಲ್ಲಿ ಮಲ್ಲಿಕಾ ಶೆರಾವತ್!

ಬೆತ್ತಲೆ ದೃಶ್ಯವೊಂದರಲ್ಲಿ ಮಲ್ಲಿಕಾ ಶೆರಾವತ್!

Subscribe to Filmibeat Kannada
Mallika without clothes in Hissss!
"ಹಿಸ್ಸ್" ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರಲಿರುವ ಚಿತ್ರವೊಂದರಲ್ಲಿ ಬಾಲಿವುಡ್ ಸೆಕ್ಸ್ ಬಾಂಬ್ ಮಲ್ಲಿಕಾ ಶೆರಾವತ್ ಬೇಕಾಬಿಟ್ಟಿಯಾಗಿ ಬೆತ್ತಲೆ ದೃಶ್ಯಗಳಲ್ಲಿ ಪಾಲ್ಗೊಂಡಿದ್ದಾರಂತೆ. ಬೆತ್ತಲೆ ದೃಶ್ಯಗಳಲ್ಲಿ ನಟಿಸಲು ಒಪ್ಪಿದ್ದರಿಂದಲೇ ಈಕೆಗೆ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಎನ್ನುವ ಸುದ್ದಿಯಿದೆ. ಗೋವಿಂದ್ ಮೆನನ್ ಹಾಗೂ ವಿಕ್ರಮ್ ಸಿಂಗ್ ನಿರ್ಮಾಣದ ಈ ಚಿತ್ರವ್ನನು ಜೆನಿಫರ್ ಲಿಂಚ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಪ್ರಮುಖ ತಾರಾಗಣದಲ್ಲಿ ಮಲ್ಲಿಕಾ ಶೆರಾವತ್ ಅಲ್ಲದೆ ಇರ್ಫಾನ್ ಖಾನ್, ಜೆಫ್ ಡಚೆಟ್, ದಿವ್ಯಾ ದತ್ತಾ, ರಾಮನ್ ಟ್ರಿಖಾ ಮುಂತಾದವರಿದ್ದಾರೆ. ಚಿತ್ರಕ್ಕೆ ಅನು ಮಲಿಕ್ ಸಂಗೀತ ನೀಡಿದ್ದಾರೆ.

ನಾಗಕನ್ಯೆಯ ಸೇಡು ತೀರಿಸುವ ಕಥೆಯನ್ನು ಹೊಂದಿರುವ ಹಾರರ್ ಚಿತ್ರ ಇದಾಗಿದ್ದು ಮಲ್ಲಿಕಾ ಇದರಲ್ಲಿ ನಾಗಕನ್ಯೆಯಾಗಿ ನಟಿಸಿದ್ದಾರೆ. ವೈಜ್ಞಾನಿಕ ಉದ್ದೇಶಕ್ಕಾಗಿ ಭಾರತದ ಅರಣ್ಯಕ್ಕೆ ಬರುವ ಅಮೆರಿಕದ ವಿಜ್ಞಾನಿಯೊಬ್ಬ ಗಂಡು ನಾಗರ ಹಾವನ್ನು ಸೆರೆಹಿಡಿದು ಲ್ಯಾಬ್‌ಗೆ ತರುತ್ತಾನೆ. ಅಲ್ಲಿಂದ ಕಥೆಯ ಭಯಾನಕತೆ ಬಿಚ್ಚಿಕೊಳ್ಳುತ್ತದೆ. ತನ್ನ ಪ್ರೇಮಿಯನ್ನು ಹುಡುಕಾಡುತ್ತಾ ನಗರಕ್ಕೆ ಬರುವ ನಾಗಕನ್ಯೆ ತನ್ನ ಸೇಡನ್ನು ತೀರಿಸುವುದಕ್ಕೆ ಹೊರಡುವುದು ಚಿತ್ರ ಕಥೆಯ ಸಾರಾಂಶ.

ಒಟ್ಟಿನಲ್ಲಿ ಮಲ್ಲಿಕಾ ಶೆರಾವತ್‌ ಮಾದಕ ಭಂಗಿಯ ಸುತ್ತಮುತ್ತ್ತ ಹೆಣೆಯುತ್ತಿರುವ ಚಿತ್ರ ಇದಾಗಿದೆ. ಚಿತ್ರದ ಶೂಟಿಂಗ್ ಈಗಾಗಲೆ ಸಂಪೂರ್ಣಗೊಂಡಿದೆ. ಹಾಗೂ ಚಿತ್ರದ ಮೈ ನವಿರೇಳಿಸುವ ಟ್ರೈಲರ್ ಗಳು ಕೂಡಾ ಹೊರಬಂದಿದೆ. ಅಂದಹಾಗೆ ನಮ್ಮ ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ಕೂಡ ತನ್ನ ಅಭಿನಯದ 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದಲ್ಲಿ ಮುಂಬೈ ನಿಂದ ಮಲ್ಲಿಕಾ ಶೆರಾವತ್ ಗೆ ಲಕ್ಷ ಲಕ್ಷ ದುಡ್ಡು ಕೊಟ್ಟು ಕರಿಸಿ ಕುಣಿಸಿ ಪಡ್ಡೆ ಹೈಕಳ ಕಣ್ಣು ತಂಪು ಮಾಡಿಸಿದ್ದರು.

(ದಟ್ಸ್ ಕನ್ನಡಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada