»   » ರಾಮು ಚಿತ್ರದಲ್ಲಿ ಚೆಲುವೆ ಸನ್ನಿ ಲಿಯೊನ್ ಐಟಂ ಡಾನ್ಸ್

ರಾಮು ಚಿತ್ರದಲ್ಲಿ ಚೆಲುವೆ ಸನ್ನಿ ಲಿಯೊನ್ ಐಟಂ ಡಾನ್ಸ್

Posted By:
Subscribe to Filmibeat Kannada

ಈಗ ಚಿತ್ರದ ಆರು ಹಾಡುಗಳಲ್ಲಿ ಒಂದು ಐಟಂ ಹಾಡು ಕಡ್ಡಾಯ ಎಂಬಂತಾಗಿದೆ. ಈ ಹೊಸ ಸೂತ್ರ ಬಾಲಿವುಡ್‌ನಲ್ಲಿ ಕ್ಲಿಕ್ ಆಗಿದೆ. ನಾಯಕಿಯರೇ ಐಟಂ ಬೆಡಗಿಗಳಾಗಿ ಸೊಂಟ ಕುಣಿಸುತ್ತಿದ್ದಾರೆ. ಈಗ ಇವರ ಸಾಲಿಗೆ ಮತ್ತೊಬ್ಬ ಚೆಲುವೆ ಸನ್ನಿ ಲಿಯೋನ್ ಎಂಟ್ರಿ ಕೊಡಲು ತುದಿಗಾಲಲ್ಲಿ ನಿಂತಿದ್ದಾರೆ.

ಮಲ್ಲಿಕಾ ಶೆರಾವತ್, ಕತ್ರಿನಾ ಕೈಫ್, ರಾಖಿ ಸಾವಂತ್, ಮಲ್ಲಿಕಾ ಅರೋರಾಖಾನ್‌ಗೆ ಸೆಡ್ಡುಹೊಡೆಯಲು ಸನ್ನಿ ಆಗಮಿಸುತ್ತಿದ್ದಾರೆ. ಆಕೆಯನ್ನು ಕುಣಿಸಲಿರುವವರು ಬೆಚ್ಚಿಬೀಳಿಸುವ ಚಿತ್ರಗಳ ಖ್ಯಾತಿಯ ರಾಮ್ ಗೋಪಾಲ್ ವರ್ಮಾ ಅರ್ಥಾತ್ ರಾಮು. ತಮ್ಮ ಹೊಸ ಚಿತ್ರ 'ಡಿಪಾರ್ಟ್‌ಮೆಂಟ್‌'ನಲ್ಲಿ ಸೊಂಟ ಕುಣಿಸುವಂತೆ ರಾಮು ಕೇಳಿಕೊಂಡಿದ್ದಾರಂತೆ.

ಆದರೆ ಸನ್ನಿ ಕಡೆಯಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಹಾಗಂತ ರೆಡ್ ಸಿಗ್ನಲ್ಲೂ ಕೊಟ್ಟಿಲ್ಲ. ಸ್ವಲ್ಪ ನಿಧಾನಿಸಿ ಎಂದು ಹಳದಿ ಬಣ್ಣದ ಸೂಚನೆ ಕೊಟ್ಟಿದ್ದಾಳೆ. ಸದ್ಯಕ್ಕೆ ಸನ್ನಿ ಲಿಯೋನ್ ಬಾಲಿವುಡ್‌ನ 'ಜಿಸ್ಮ್ 2' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. (ಏಜೆನ್ಸೀಸ್)

English summary
Indo-Canadian adult film actor Sunny Leone is reportedly being considered for an item number in Ram Gopal Verma's upcoming flick Department. However, Sunny Leone has rubbished this report on her Twitter page.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X