»   » ಗ್ರಾಮ ವಾಸ್ತವ್ಯದಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ ಕತ್ರಿನಾ

ಗ್ರಾಮ ವಾಸ್ತವ್ಯದಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ ಕತ್ರಿನಾ

Posted By:
Subscribe to Filmibeat Kannada

ಬಾಲಿವುಡ್ ನಟಿಯರು ಕೇವಲ ಗಾಸಿಪ್ ಸುದ್ದಿಗಳಿಗಷ್ಟೆ ಸೀಮಿತವಾಗಿಲ್ಲ ಎಂಬುದಕ್ಕೆ ಇಲ್ಲಿದೆ ನೋಡಿ ಒಂದು ತಾಜಾ ನಿದರ್ಶನ. ಇತ್ತೀಚೆಗೆ ಬಾಲಿವುಡ್ ನ ಬಿಂಕದ ರಾಣಿ ಕತ್ರಿನಾ ಕೈಫ್ ಶೌಚಾಲಯ ತೊಳೆದು ಶುದ್ಧಗೊಳಿಸಿ ಸಖತ್ ಸುದ್ದಿ ಮಾಡಿದ್ದಾರೆ. ಆಕೆ ತೊಳೆದು ಸ್ವಚ್ಛಗೊಳಿಸಿದ್ದು ಗ್ರಾಮವೊಂದರ ಶೌಚಾಲಯ ಎಂಬುದು ಗಮನಾರ್ಹ ಅಂಶ.

ಕೆಲವು ತಿಂಗಳ ಹಿಂದೆ ಕತ್ರಿನಾ ಧರ್ಮಾರ್ಥ ಸಂಸ್ಥೆಯೊಂದಕ್ಕೆ ದತ್ತಿ ಸಂಗ್ರಹಿಸುವ ಸಲುವಾಗಿ ಹಳ್ಳಿಯೊಂದಕ್ಕೆ ಭೇಟಿ ಕೊಟ್ಟಿದ್ದರು. ಆದರೆ ಅಲ್ಲಿನ ಶೌಚಾಲಯ ದುಸ್ಥಿತಿ ಕಂಡ ಆಕೆ ಹೌಹಾರಿದ್ದರು. ಗ್ರಾಮ ವಾಸ್ತವ್ಯ ಮಾಡಿದಷ್ಟು ದಿನಗಳು ಈ ಶೌಚಾಲಯವನ್ನೇ ಆಕೆ ಉಪಯೋಗಿಸುತ್ತಿದ್ದರಂತೆ. ಅದನ್ನು ಸ್ವತಃ ಆಕೆ ಸ್ವಚ್ಛಗೊಳಿಸಿ ಉಪಯೋಗಿಸುತ್ತ್ತಿದ್ದರು ಎಂಬುದು ವಿಶೇಷ.

ಶೌಚಾಲಯವೊಂದನ್ನು ತಮಗೆ ಕೊಟ್ಟಿ ಸಹಕರಿಸಿದ ಗ್ರಾಮಸ್ಥರಿಗೆ ಕತ್ರಿನಾ ಕೃತಜ್ಞತೆ ತಿಳಿಸಿದ್ದಾರೆ. ತಾವು ನಡೆದ ಹಾದಿಯಲ್ಲಿ ತಮ್ಮ ಅಭಿಮಾನಿಗಳು ನಡೆಯುತ್ತಾರೆ ಎಂಬುದು ಕತ್ರಿನಾರ ಕಳಕಳಿ. ಒಟ್ಟಾರೆಯಾಗಿ ಸ್ವಚ್ಛತೆಯ ವಿಚಾರದಲ್ಲಿ ಗ್ರಾಮಸ್ಥರ ಕಣ್ಣು ತೆರೆಸಿದ ಹೆಣ್ಣು ಕತ್ರಿನಾ ಎಂದು ಹೇಳಬಹುದು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada