»   » ಅಬ್ದುಲ್ ಕಲಾಂ ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ

ಅಬ್ದುಲ್ ಕಲಾಂ ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ

Subscribe to Filmibeat Kannada
 Kalam denies participation in mein kalam hoon
'ಮೈ ಹೂಂ ಕಲಾಂ' ಎಂಬ ಇಂಡೋ ಫ್ರೆಂಚ್ ಚಿತ್ರದಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ನಟಿಸುತ್ತಿದ್ದಾರೆ ಎಂಬ ಸುದ್ದಿ ಸುಳ್ಳಾಗಿದೆ. ಅಬ್ದುಲ್ ಕಲಾಂ ಅವರು ಯಾವುದೇ ಚಿತ್ರದಲ್ಲೂ ನಟಿಸುತ್ತಿಲ್ಲ. ಇದೆಲ್ಲಾ ಕೇವಲ ವದಂತಿ ಅಷ್ಟೇ ಎಂದು ಕಲಾಂ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.

''ಕಲಾಂ ಅವರು ಯಾವುದೇ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿಲ್ಲ. ಇದೆಲ್ಲಾ ಕೇವಲ ವದಂತಿಯಾಗಿದ್ದು ಪ್ರಚಾರ ತಂತ್ರವಷ್ಟೆ'' ಎಂದು ಕಲಾಂ ಅವರ ಕಚೇರಿ ವರದಿ ಸ್ಪಷ್ಟಪಡಿಸಿದೆ. ಚಿತ್ರದ ನಾಯಕ ನಟ ಗುಲ್ಶನ್ ಗ್ರೋವರ್ ಸಹ ತಮ್ಮ ಚಿತ್ರದಲ್ಲಿ ಕಲಾಂ ನಟಿಸುತ್ತಿಲ್ಲ ಎಂದು ರಾಗ ಬದಲಾಯಿಸಿದ್ದಾರೆ.

ಗುಲ್ಶನ್ ಗ್ರೊವರ್ ಮಾತನಾಡುತ್ತಾ, ಚಿತ್ರಕ್ಕೆ ಕಲಾಂ ಅವರ ಆದರ್ಶಗಳು, ತತ್ವಗಳೇ ಪ್ರೇರಣೆ. ಚಿತ್ರದಲ್ಲಿ ಅವರು ನಟಿಸದೇ ಇದ್ದರೂ ಅವರ ಆದರ್ಶಗಳು ನಮ್ಮೊಂದಿಗಿವೆ. ಕಲಾಂ ಬಗ್ಗೆ ನಮಗೆ ಗೌರವವಿದೆ. ಅವರೊಬ್ಬ ಪ್ರಾಮಾಣಿಕ ವ್ಯಕ್ತಿ. ಅವರ ಆಶೀರ್ವಾದ ನಮಗೆ ಇದ್ದೇ ಇರುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada