»   » ಅನುಪಮ ಸುಂದರಿ ಮಧುಬಾಲ ಮತ್ತೆ ಆಗಮನ

ಅನುಪಮ ಸುಂದರಿ ಮಧುಬಾಲ ಮತ್ತೆ ಆಗಮನ

Posted By: Staff
Subscribe to Filmibeat Kannada
Madhubala
ಭಾರತೀಯ ಚಿತ್ರರಂಗದ ಮನೋಜ್ಞ ಅಭಿನೇತ್ರಿ ಮಧುಬಾಲ.ಚಿತ್ರಪ್ರೇಮಿಗಳ ಹೃದಯಲ್ಲಿ ಇಂದಿಗೂ ಭದ್ರಸ್ಥಾನ ಪಡೆದ ನಟಿ.ಹಿಂದಿ ಚಿತ್ರರಂಗದ ಬೆಳ್ಳಿ ಮೋಡದ ಅಂಚಿನಿಂದ ಮೂಡಿಬಂದ ಅನುಪಮ ಸುಂದರಿ ಎಂದರೆ ಬಹುಶಃ ಮಧುಬಾಲ ಮಾತ್ರ ! ಇಷ್ಟೆಲ್ಲಾ ಹೇಳಲು ಕಾರಣ ಈ ಅಪ್ರತಿಮ ಸುಂದರಿ ಮತ್ತೆ ಬೆಳ್ಳಿತೆರೆಯನ್ನು ಅಲಂಕರಿಸಲಿದ್ದಾರೆ.

ಆಶ್ಚರ್ಯವಾಗುತ್ತಿದೆಯೇ? ಏಕ್ತಾ ಕಪೂರ್ ನಿರ್ಮಿಸುತ್ತಿರುವ 'ವನ್ಸ್ ಅಪಾನ್ ಎ ಟೈಮ್' ಎಂಬ ಹಿಂದಿ ಚಿತ್ರ ಮಧುಬಾಲ ಜೀವನಗಾಥೆಯನ್ನು ಬಿತ್ತರಿಸಲಿದೆ. ಈ ಚಿತ್ರವನ್ನು ಮಿಲನ್ ಲೂಥ್ರಿಯಾ ನಿರ್ದೇಶಿಸುತ್ತಿದ್ದಾರೆ. ಬಣ್ಣದ ಪ್ರಪಂಚದಲ್ಲಿ ಮಧುಬಾಲ ಏರಿದ ಎತ್ತರ, ಆಕೆಯ ಜೀವನದಲ್ಲಿ ಬಂದಂತಹ ಹಲವಾರು ಪುರುಷರ ಕುರಿತ ಪ್ರಸ್ತಾವನೆಯೊಂದಿಗೆ ಚಿತ್ರಕತೆ ಸಾಗಲಿದೆಯಂತೆ. ಹಾಗಿದ್ದರೆ ಹಾಜಿ ಮಸ್ತಾನ್ ಗೂ ಸ್ಥಾನ ಇರಬೇಕಲ್ಲ?

ಅಪ್ರತಿಮ ಸುಂದರಿ ಮಧುಬಾಲರನ್ನು ಮಾಫಿಯಾ ಡಾನ್ ಹಾಜಿ ಮಸ್ತಾನ್ ಮೋಹಿಸಿದ್ದ ಎಂದು ಇಂದಿಗೂ ಹಿಂದಿ ಚಿತ್ರರಂಗದಲ್ಲಿ ಹೇಳಿಕೊಳ್ಳುತ್ತಾರೆ. ಈ ಸೂಕ್ಷ್ಮ ವಿಚಾರಗಳ ಬಗ್ಗೆ ಮಧುಬಾಲ ಚಿತ್ರ ಬೆಳಕು ಚೆಲ್ಲಲಿದೆ. ಮಧುಬಾಲ ಪಾತ್ರದಲ್ಲಿ ಕಂಗನಾ ರನೌತ್ ಅಭಿನಯಿಸಲಿದ್ದಾರೆ. ಹಾಜಿ ಮಸ್ತಾನ್ ಪಾತ್ರದಲ್ಲಿ ಅಜಯ್ ದೇವಗಣ್ ಇರುತ್ತಾರೆ. ದಿವ್ಯವಾದ ಸೌಂದರ್ಯ, ಮೋಹಕ ಮುಖಾರವಿಂದವು ಆಕೆಯನ್ನು ತನ್ನ ಸಮಕಾಲೀನ ನಟಿಯರಿಗಿಂತ ಭಿನ್ನವಾಗಿಸಿತ್ತು. "ವೀನಸ್ ಆಫ್ ಇಂಡಿಯನ್ ಸ್ಕ್ರೀನ್" ಎಂಬ ಬಣ್ಣನೆಯಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ.

(ಏಜೆನ್ಸೀಸ್)

ಇದನ್ನೂ ಓದಿ
ಹಿಂದಿ ಸೈನೈಡ್ ನಲ್ಲಿ ನಟಿಸಲು ಅಮಿತಾಬ್ ನಕಾರ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಕಂಕಣಬಲ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada