For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟ ಕಿಂಗ್ ಖಾನ್ ಶಾರುಖ್ ಸೀರಿಯಸ್

  By Rajendra
  |

  ಬಾಲಿವುಡ್ ನಟ ಕಿಂಗ್ ಖಾನ್ ಶಾರುಖ್ ಖಾನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹದಗೆಟ್ಟ ಹವಾಮಾನ ಹಾಗೂ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅತಿಯಾಗಿ ಪೂರ್ವ ತರಬೇತಿ ಮಾಡಿಕೊಳ್ಳುತ್ತಿರುವುದೇ ಅವರ ಅನಾರೋಗ್ಯಕ್ಕೆ ಕಾರಣವಾಗಿದೆ.

  ಇಷ್ಟಕ್ಕೂ ಅವರಿಗೆ ಏನಾಗಿದೆ ಎಂದರೆ, ಅತೀವ ಶೀತಬಾಧೆ ಹಾಗೂ ಫ್ಲೂ ಸಮಸ್ಯೆಯಿಂದ ಬಳಲುತ್ತಿದ್ದು ಬೆಚ್ಚಗೆ ಕಂಬಳಿ ಹೊದ್ದು ಮಲಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾರುಖ್, ಸಿಕ್ಕಾಪಟ್ಟೆ ಶೀತ ಹಾಗೂ ಜ್ವರ. ಛೇ...ನನ್ನ ಕಟ್ಟುಮಸ್ತಾದ ದೇಹಕ್ಕೆ ತೀವ್ರ ಸಮಸ್ಯೆ ತಂದಿಟ್ಟಿದೆ. ಸಿಗರೇಟ್‌ಗಳು ಬಾಯಿಗೆ ಕಹಿ ರುಚಿ ನೀಡುತ್ತಿವೆ...ಇದು ಸೀರಿಯಸ್ ವಿಚಾರ..." ಎಂದಿದ್ದಾರೆ.

  ನನ್ನ ಪರಿಸ್ಥಿತಿಯನ್ನು ಮಕ್ಕಳಿಗೆ ಅರ್ಥ ಮಾಡಿಸುವುದು ಕಷ್ಟವಾಗಿದೆ. ಸಾವನ್ನು ವಿವರಿಸುವುದು ನಿಜಕ್ಕೂ ನೋವಿನ ಸಂಗತಿ. ಮಗನೊಂದಿಗೆ ನಾನೂ ಬೆಳೆಯುತ್ತಿದ್ದೇನೆ. ಆದರೆ ನನಗೋ ಆರೋಗ್ಯ ಕೈಕೊಟ್ಟಿದೆ. ಇದು ನಿಜಕ್ಕೂ ಬೇಸರದ ಸಂಗತಿ ಎಂದು ಶಾರುಖ್ ಏನೇನೋ ಟ್ವೀಟಿಸಿ ಅವರ ಅಭಿಮಾನಿಗಳನ್ನು ಗಲಿಬಿಲಿಗೊಳಿಸಿದ್ದಾರೆ. (ಏಜೆನ್ಸೀಸ್)

  English summary
  Shahrukh Khan is down with severe cold and flu. Talking about his bad health, Shahrukh Khan wrote on the micro blogging site Twitter, "Damn cold and fever winning the battle, slowly taking over my robust pathan constitution. Cigarette tasting bad in mouth now...this is serious (sic)."

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X