»   » ಮುಂಬೈ ರೆಡ್ ಲೈಟ್ ಏರಿಯಾದಲ್ಲಿ ಐಶ್ವರ್ಯ ರೈ

ಮುಂಬೈ ರೆಡ್ ಲೈಟ್ ಏರಿಯಾದಲ್ಲಿ ಐಶ್ವರ್ಯ ರೈ

Posted By:
Subscribe to Filmibeat Kannada

ಬಾಲಿವುಡ್ ನ ಮೂವರು ಸುಂದರಿಯರು ಒಂದಾಗುತ್ತಿದ್ದಾರೆ. ಅದೂ ರೆಡ್ ಲೈಟ್ ಏರಿಯಾದಲ್ಲಿ! ಇದೇನಿದು ಎಂದು ಆಶ್ಚರ್ಯ ಪಡುವ ಅಗತ್ಯ ವಿಲ್ಲ. ನೀವು ಓದುತ್ತಿರುವುದು ಶೇಕಡಾ ನೂರರಷ್ಟು ನಿಜ. ಐಶ್ವರ್ಯ ರೈ, ಪ್ರೀತಿ ಝಿಂಟಾ ಹಾಗೂ ಕರೀನಾ ಕಪೂರ್ ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ನೂತನ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರಕತೆ ಮುಂಬೈನಲ್ಲಿ ಮೈ ಮಾರಿಕೊಳ್ಳುವ ಲಕ್ಷಾಂತರ ಹೆಣ್ಣುಮಕ್ಕಳ ವಾಸ್ತವ ಬದುಕಿನ ಸುತ್ತ ಸುತ್ತುತ್ತದೆ. ನೈಜವಾಗಿ ಮೂಡಿಬರಲು ಇಡೀ ಚಿತ್ರವನ್ನು ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಚಿತ್ರೀಕರಿಸಲು ಹೊರಟಿದ್ದಾರೆ ಬನ್ಸಾಲಿ! ಆದರೆ ಕತೆ ಮಾತ್ರ ಲಾಹೋರ್ ನ ರೆಡ್ ಲೈಟ್ ಏರಿಯಾಗೆ ಸಂಬಂಧಿಸಿದ್ದಾಗಿದೆ.

ವೇಶ್ಯೆಯರಿಗೆ ಸಂಬಂಧಿಸಿದಂತೆ ಈಗಾಗಲೆ ಹಲವಾರು ಚಿತ್ರಗಳು ಬಂದಿವೆ. ಆದರೆ ಬನ್ಸಾಲಿ ಕೈಗೆತ್ತಿಕೊಂಡಿರುವ ಚಿತ್ರ ಮಾತ್ರ ತುಂಬ ಭಿನ್ನವಾಗಿರುತ್ತದಂತೆ. ಕತೆ ಕೇಳಿದ ಕೂಡಲೆ ಈ ಮೂವರು ನಾಯಕಿಯರು ಕೂಡಲೆ ಒಪ್ಪಿಕೊಂಡರಂತೆ. ಚಿತ್ರದ ಶೀರ್ಷಿಕೆ ಹೀರಾ ಮಾಂಡಿ. ಒಟ್ಟಿನಲ್ಲಿ ಈ ಮೂವರನ್ನು ಸಂಭಾಳಿಸಿಕೊಂಡು ಚಿತ್ರವನ್ನು ತೆರೆಗೆ ತರುವುದು ಬನ್ಸಾಲಿ ದೊಡ್ಡ ಸವಾಲು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada