»   » 51 ವರ್ಷದ ನಟನಿಗೆ ಚಿಕ್ಕ ವಯಸ್ಸಿನ ಹುಡುಗಿ ಜೊತೆ ಲವ್!

51 ವರ್ಷದ ನಟನಿಗೆ ಚಿಕ್ಕ ವಯಸ್ಸಿನ ಹುಡುಗಿ ಜೊತೆ ಲವ್!

Posted By:
Subscribe to Filmibeat Kannada

ಪ್ರೀತಿಗೆ ಕಣ್ಣಿಲ್ಲ ಅಂತಾರೆ ಬುದ್ಧಿವಂತರು. ಆದ್ರೆ, ಈ ಪ್ರೀತಿಗೆ ವಯಸ್ಸಿನ ಅಂತರವೂ ಇಲ್ಲ ಎನ್ನುವುದು ತಿಳಿಯಬೇಕಾದ ವಿಚಾರನೇ. ಇಷ್ಟೆಲ್ಲಾ ಪೀಠಿಕೆ ಯಾಕೆ ಗೊತ್ತಾ? ಬಾಲಿವುಡ್ ಸೆಲೆಬ್ರಿಟಿಗಳ ಲವ್ ಸ್ಟೋರಿ ಇದಕ್ಕಿಂತ ಭಿನ್ನವಾಗಿದೆ. ಅದ್ಯಾಕೋ ಗೊತ್ತಿಲ್ಲ, ಅನೇಕ ಸ್ಟಾರ್ ನಟರು ಮತ್ತು ನಿರ್ದೇಶಕರು ತಮ್ಮ ಮಕ್ಕಳ ವಯಸ್ಸಿನ ಹುಡುಗಿಯರ ಜೊತೆ ಲವ್, ಅಫೇರ್ ಇಟ್ಕೊಂಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ 44 ವರ್ಷದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, 23 ವರ್ಷದ ಶುಭ್ರಾಶೆಟ್ಟಿ ಎಂಬ ಯುವತಿಯ ಜೊತೆ ಡೇಟಿಂಗ್ ಮಾಡುತ್ತಿರುವ ಸುದ್ದಿಗಳು ಹರಿದಾಡಿದ್ವು. ಈಗ ಬಾಲಿವುಡ್ ನ ಮತ್ತೊಬ್ಬ ನಟ ಕಮ್ ಮಾಡೆಲ್ ಮಿಲಿಂದ್ ಸೋಮನ್ ಅವರು ಕೂಡ ತಮಗಿಂತ ಅತಿ ಚಿಕ್ಕವಯಸ್ಸಿನ ಯುವತಿಯೊಂದಿಗೆ ಲವ್ವಿ-ಡವ್ವಿ ಶುರು ಮಾಡಿಕೊಂಡಿದ್ದಾರೆ.

51 years Milind Soman Loves Ankita Konwar

ಆ ಯುವತಿ ಹೆಸರು ಅಂಕಿತ Konwar. ವೃತ್ತಿಯಲ್ಲಿ ಗಗನ ಸಖಿ. ಮಿಲಿಂದ್ ಅವರಿಗಿಂತ ಅರ್ಧದಷ್ಟು ಚಿಕ್ಕ ವಯಸ್ಸಿನ ಹುಡುಗಿ. ಮಿಲಿಂದ್ ಸೋಮನ್ ಮತ್ತು ಅಂಕಿತಾ ಇಬ್ಬರು ಜೊತೆಯಲ್ಲಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಲವ್ ಇರುವ ವಿಚಾರವನ್ನ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಇನ್ನು ಇಬ್ಬರು ಮದುವೆ ಆಗುವ ಸಾಧ್ಯತೆ ಎಂದು ಕೂಡ ಮೂಲಗಳು ತಿಳಿಸಿವೆ.

2006ರಲ್ಲಿ ಫ್ರೆಂಚ್ ಸಹನಟಿ Mylene Jampanoi ರನ್ನು ಮಿಲಿಂದ್ ಮದುವೆಯಾಗಿದ್ದರು. 2009ರಲ್ಲಿ Mylene Jampanoi ರಿಂದ ವಿಚ್ಛೇದನ ಪಡೆದಿದ್ದರು. ಇದಾದ ನಂತ್ರ 21 ವರ್ಷ ಚಿಕ್ಕವಳಿರುವ ಶಹಾನಾ ಗೋಸ್ವಾಮಿ ಜೊತೆ ಮಿಲಿಂದ್ ಹೆಸರು ಕೇಳಿ ಬಂದಿತ್ತು. ನಾಲ್ಕು ವರ್ಷ ಗೋಸ್ವಾಮಿ ಜೊತೆ ಸುತ್ತಾಡಿದ್ದ ಮಿಲಿಂದ್ ನಂತರ ಸಂಬಂಧ ಕಡಿದುಕೊಂಡಿದ್ದರು. 

English summary
44 year old Anurag Kashyap finding his love in the 23-year-old Shubhra Shetty. This time round, it’s the 51-year-old actor-model Milind Soman who has found love in Ankita Konwar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada