»   » ಸ್ತ್ರೀಲೋಲ ಪತಿಗೆ ಕರಿಷ್ಮಾ ಕಪೂರ್ ಸೋಡಾ ಚೀಟಿ

ಸ್ತ್ರೀಲೋಲ ಪತಿಗೆ ಕರಿಷ್ಮಾ ಕಪೂರ್ ಸೋಡಾ ಚೀಟಿ

Posted By:
Subscribe to Filmibeat Kannada

ಸುದೀರ್ಘ ಸಮಯದ ಬಳಿಕ ಮತ್ತೆ 'ಡೇಂಜರಸ್ ಇಷ್ಕ್' ಚಿತ್ರದ ಮೂಲಕ ಬಣ್ಣ ಹಚ್ಚಿರುವ ಬಾಲಿವುಡ್ ತಾರೆ ಕರಿಷ್ಮಾ ಕಪೂರ್ ಸಂಸಾರ ಸಾಗರದಲ್ಲಿ ಇನ್ನೊಂದು ಸುತ್ತಿನ ಸುನಾಮಿ ಅಲೆಗಳೆದ್ದಿವೆ. 'ರಾಜ ಹಿಂದೂಸ್ತಾನಿ' ಚಿತ್ರದ ಮೂಲಕ ಪಡ್ಡೆಗಳ ಹೃದಯದ ಮೇಲೆ ಚಿರಮುದ್ರೆಯೊತ್ತಿದ ಈ ಬೆಡಗಿ ತನ್ನ ಗಂಡ ಸಂಜಯ್ ಕಪೂರ್‌ಗೆ ಕಡೆಗೂ ಡೈವೋರ್ಸ್ ನೀಡಲು ಅರ್ಜಿ ಸಲ್ಲಿಸಿದ್ದಾರೆ.

ಈ ಮೂಲಕ ಹಾಲು ನೀರಿನಂತೆ ಬೆರೆತುಹೋಗಿದ್ದ ಇವರಿಬ್ಬರ ಸಂಸಾರದಲ್ಲಿ ಹಾಲಾಹಲ ಎದ್ದಿದೆ. ತನ್ನ ಇಬ್ಬರು ಮಕ್ಕಳ ಪೋಷಣೆಗಾಗಿ ಕರಿಷ್ಮಾ ಮತ್ತೆ ಬೆಳ್ಳಿತೆರೆಗೆ ಅಡಿಯಿಟ್ಟು ಹೊಸ ಜೀವನ ಶುರು ಮಾಡಿದ್ದರು. ಕಳೆದ ಕೆಲ ವರ್ಷಗಳಿಂದ ಸಂಜಯ್ ಜೊತೆ ಸಂಘರ್ಷ ನಡೆಯುತ್ತಲೇ ಇತ್ತು. ಡೈವೋರ್ಸ್ ಮೂಲಕ ಅದಕ್ಕೆ ಪೂರ್ಣ ವಿರಾಮ ಇಡಲು ಕರಿಷ್ಮಾ ಹೊರಟಿದ್ದಾರೆ.

ಸಾಕಷ್ಟು ಸಮಯದಿಂದ ತನ್ನ ಗಂಡ ಸಂಜಯ್‌ರಿಂದ ಕರಿಷ್ಮಾ ದೂರವೇ ಉಳಿದಿದ್ದರು. ಈಗ ಅಧಿಕೃತವಾಗಿ ಬೇರ್ಪಡಲು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇವರಿಬ್ಬರು ಆಗ ಸರಿಹೋಗುತ್ತಾರೆ, ಈಗ ಸರಿಹೋಗುತ್ತಾರೆ ಎಂದು ನಿರೀಕ್ಷೆಸಿದ್ದೇ ಬಂತು. ಕರಿಷ್ಮಾ ಪೋಷಕರು ಇವರಿಬ್ಬರನ್ನು ಒಂದು ಮಾಡಲು ಮಾಡಿದ ಪ್ರಯತ್ನಗಳೆಲ್ಲವೂ ಹೊಳೆಯಲ್ಲಿ ಹುಣೆಸೆಹಣ್ಣು ತೊಳೆದಂತಾಗಿದೆ.

ಕಡೆಗೆ ಇಬ್ಬರೂ ಬೇರ್ಪಡಲು ನಿರ್ಧರಿಸಿದ್ದಾರೆ. ಸಂಜಯ್ ಹೇಳಿಕೇಳಿ ಸ್ತ್ರೀಲೋಲ. ಈ ಬಗ್ಗೆ ಕರಿಷ್ಮಾ ಆತನಿಗೆ ಎಷ್ಟು ಬುದ್ಧಿ ಹೇಳಿದರು ಆತ ತನ್ನ ಚಾಳಿ ಬಿಡಲಿಲ್ಲ. ಕಡೆಗೆ ಆತನ ವರ್ತನೆ ಬಗ್ಗೆ ರೋಸಿಹೋಗಿ ಆತನಿಂದ ಬೇರ್ಪಡಲು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾಳೆ ಎನ್ನಲಾಗಿದೆ. (ಏಜೆನ್ಸೀಸ್)

English summary
Bollywood Karishma Kapoor files for divorce. The Kapoor girl made many attempts to reconcile her and Sunjay Kapoor's relationship but things did not work out.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X