twitter
    For Quick Alerts
    ALLOW NOTIFICATIONS  
    For Daily Alerts

    '700 ಕೋಟಿಯ ಟೆಂಪಲ್ ರನ್ ಗೇಮ್': ದೊಡ್ಡ ಮಟ್ಟದಲ್ಲಿ ಟ್ರೋಲ್ ಆದ ಆದಿಪುರುಷ್ ಟೀಸರ್!

    |
    700 crores Temple Run: Audience trolled Adipurush teaser for its cartoon type scenes

    ಬಾಹುಬಲಿ ಮೂಲಕ ಯಶಸ್ಸಿನ ಉತ್ತುಂಗಕ್ಕೇರಿ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡ ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್ ಬಾಹುಬಲಿ ಬಳಿಕ ಅಭಿನಯಿಸಿದ ಚಿತ್ರಗಳ ಮೂಲಕ ಜಯ ಸಾಧಿಸುವುದರಲ್ಲಿ ಯಶಸ್ವಿಯಾಗಿಲ್ಲ. ಹೌದು, ಬಾಹುಬಲಿ ಚಿತ್ರ ಸರಣಿ ಬಳಿಕ ಬಿಡುಗಡೆಯಾದ ಸಾಹೊ ಚಿತ್ರವನ್ನು ಜನ ಮೆಚ್ಚಿಕೊಳ್ಳಲಿಲ್ಲ, ಇತ್ತೀಚೆಗಷ್ಟೆ ಬಂದ ರಾಧೆ ಶ್ಯಾಮ್ ಕೂಡ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ. ಹೀಗೆ ತಮ್ಮ ನೆಚ್ಚಿನ ನಟನ ಎರಡು ಬಹು ನಿರೀಕ್ಷಿತ ಚಿತ್ರಗಳು ಮಕಾಡೆ ಮಲಗಿದ್ದನ್ನು ಕಂಡ ಪ್ರಭಾಸ್ ಅಭಿಮಾನಿಗಳು 'ಆಲ್ ಹೋಪ್ ಆನ್ ಆದಿಪುರುಷ್' ಎಂದಿದ್ದರು.

    ಅತ್ತ ಇಲ್ಲಿಯವರೆಗೂ ಕೇವಲ ಒಂದು ಮರಾಠಿ ಹಾಗೂ ಒಂದು ಹಿಂದಿ ಸಿನಿಮಾವನ್ನು ಮಾತ್ರ ನಿರ್ದೇಶನ ಮಾಡಿರುವ ಓಂ ರಾವತ್ ಈ ಆದಿಪುರುಷ್‌ಗೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಪ್ರಭಾಸ್ ಓಂ ರಾವತ್ ಜತೆ ಕೈಜೋಡಿಸಿದಾಗಲೇ ಕೆಲವರು ಟ್ರೋಲ್ ಮಾಡಿದ್ದರು. ಓಂ ರಾವತ್ ತಾನ್ಹಾಜಿ ನಿರ್ದೇಶಿಸಿ ಹಿಟ್ ಕೊಟ್ಟಿದ್ದಾರೆ ಆದರೆ ಅವರಿಗೆ ಅಷ್ಟೇನೂ ಅನುಭವವಿಲ್ಲ ಎಂಬ ಅಭಿಪ್ರಾಯಗಳನ್ನು ಕೆಲ ನೆಟ್ಟಿಗರು ವ್ಯಕ್ತಪಡಿಸಿದ್ದರು.

    ಆದರೂ ಸಹ ಪ್ರಭಾಸ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಈ ಜೋಡಿ ಒಂದೊಳ್ಳೆ ಚಿತ್ರ ಮಾಡಲಿದೆ ಎಂಬ ನಿರೀಕ್ಷೆಯಲ್ಲಿತ್ತು. ಹೀಗಾಗಿಯೇ ಆದಿಪುರುಷ್ ಕುರಿತಾದ ಪ್ರತಿ ಸುದ್ದಿಗೂ ಸಹ ಪ್ರಭಾಸ್ ಅಭಿಮಾನಿಗಳು ಎದುರು ನೋಡುತ್ತಾ ಕಾಯುತ್ತಿದ್ದರು. ಅದರಲ್ಲಿಯೂ ಚಿತ್ರದ ಟೀಸರ್ ಬಿಡುಗಡೆ ದಿನಾಂಕ ಘೋಷಣೆಯಾದಾಗಂತೂ ಕ್ರೇಜ್ ಸಿಕ್ಕಾಪಟ್ಟೆ ಹೆಚ್ಚಾಗಿತ್ತು. ಆದರೆ ಟೀಸರ್ ಬಿಡುಗಡೆಗೂ ಮುನ್ನ ಇದ್ದ ಟಾಕ್ ಬಿಡುಗಡೆಯಾದ ನಂತರ ಬದಲಾಗಿ ಹೋಗಿದೆ. ಅದೆಷ್ಟೋ ಪ್ರಭಾಸ್ ಅಭಿಮಾನಿಗಳೇ ಚಿತ್ರದ ಟೀಸರ್ ಇಷ್ಟವಾಗಲಿಲ್ಲ, ಬೇಸರ ಉಂಟುಮಾಡಿದೆ ಎಂದಿದ್ದಾರೆ. ಇನ್ನು ಸಾಮಾನ್ಯ ಸಿನಿ ಪ್ರೇಕ್ಷಕರು ಟೀಸರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಟ್ರೋಲ್ ಮಾಡಿ ಚಿತ್ರತಂಡದ ಕಾಲೆಳೆದಿದ್ದಾರೆ.

    ಆದಿಪುರುಷ್ ಟಿವಿ ಹಕ್ಕು ಪೋಗೊ ಪಾಲು!

    ಆದಿಪುರುಷ್ ಟಿವಿ ಹಕ್ಕು ಪೋಗೊ ಪಾಲು!

    ಆದಿಪುರುಷ್ ಚಿತ್ರದ ಟೀಸರ್ ಕಾರ್ಟೂನ್ ರೀತಿ ಇದೆ ಎಂಬ ಟ್ರೋಲ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕಂಡುಬರ್ತಿದೆ. ಟೀಸರ್‌ನ ದೃಶ್ಯಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಿರುವ ಹಲವು ನೆಟ್ಟಿಗರು ಇದು ಕಾರ್ಟೂನ್ ಚಿತ್ರದ ರೀತಿ ಇದೆ ಎಂದು ಚಿತ್ರತಂಡದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ನೆಟ್ಟಿಗನೋರ್ವ ಆದಿಪುರುಷ್ ಚಿತ್ರದ ಸ್ಯಾಟಲೈಟ್ ಹಕ್ಕು ಪೋಗೋ ಚಾನೆಲ್ ಪಾಲಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಇದೊಂದು ಕಾರ್ಟೂನ್ ಚಿತ್ರ ಎಂದು ಕಾಲೆಳೆದಿದ್ದಾರೆ.

    ಇದಕ್ಕಿಂತ ಜಪಾನ್ ರಾಮಾಯಣ ಎಷ್ಟೋ ವಾಸಿ

    ಇದಕ್ಕಿಂತ ಜಪಾನ್ ರಾಮಾಯಣ ಎಷ್ಟೋ ವಾಸಿ

    ಮತ್ತೋರ್ವ ಆದಿಪುರುಷ್ ಚಿತ್ರದ ವಿರುದ್ಧ ಕಿಡಿಕಾರಿದ್ದು ಆದಿಪುರುಷ್ ನೋಡುವ ಬದಲು ಎಲ್ಲಾರೂ ಜಪಾನಿಸ್ ನಿರ್ಮಾಣದ ಆನಿಮ್ ರಾಮಾಯಣ ವೀಕ್ಷಿಸಬೇಕೆಂದು ಕೋರಿಕೊಳ್ಳುತ್ತೇನೆ, ಓಂ ರಾವತ್ ಆದಿಪುರುಷ್ ಚಿತ್ರಕ್ಕಿಂತ ಜಪಾನಿನವರೇ ರಾಮಾಯಣವನ್ನು ಚೆನ್ನಾಗಿ ತೆರೆ ಮೇಲೆ ತಂದಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಇವರು ಪೊನ್ನಿಯಿನ್ ಸೆಲ್ವನ್ ಟ್ರೋಲ್ ಮಾಡ್ತಿದ್ರು

    ಇವರು ಪೊನ್ನಿಯಿನ್ ಸೆಲ್ವನ್ ಟ್ರೋಲ್ ಮಾಡ್ತಿದ್ರು

    ಇನ್ನು ಶುಕ್ರವಾರವಷ್ಟೇ ತಮಿಳಿನ ಪೊನ್ನಿಯಿನ್ ಸೆಲ್ವನ್ ಬಿಡುಗಡೆಯಾಗಿತ್ತು, ಈ ಚಿತ್ರವನ್ನು ಬಾಹುಬಲಿ ಜೊತೆ ಹೋಲಿಕೆ ಮಾಡಿದ್ದಕ್ಕೆ ತೆಲುಗು ಸಿನಿ ಪ್ರೇಕ್ಷಕರು ಪೊನ್ನಿಯಿನ್ ಸೆಲ್ವನ್ ಚಿತ್ರವನ್ನು ಟ್ರೋಲ್ ಮಾಡಿದ್ದರು ಹಾಗೂ ಇದೇ ಕಾರಣದಿಂದಾಗಿ ಎರಡೂ ಚಿತ್ರರಂಗಗಳ ವೀಕ್ಷಕರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ ವಾರ್ ನಡೆದಿತ್ತು. ಇನ್ನು ಈ ವಿಷಯಕ್ಕೆ ಆದಿಪುರುಷ್ ಅನ್ನು ಎಳೆತಂದ ನೆಟ್ಟಿಗನೋರ್ವ ಇಂಥ ಚಿತ್ರರಂಗದವರು ಪೊನ್ನಿಯಿನ್ ಸೆಲ್ವನ್ ಚಿತ್ರವನ್ನು ಟ್ರೋಲ್ ಮಾಡಿದ್ರು ಎಂದು ನಕ್ಕು ತೆಲುಗು ಪ್ರೇಕ್ಷಕರ ಕಾಲೆಳೆದಿದ್ದಾನೆ.

    700 ಕೋಟಿಯ ಟೆಂಪಲ್ ರನ್

    700 ಕೋಟಿಯ ಟೆಂಪಲ್ ರನ್

    ಇನ್ನು ಈ ಚಿತ್ರದ ದೃಶ್ಯಗಳನ್ನು ಟೆಂಪಲ್ ರನ್ ಗೇಮ್‌ಗೆ ಹೋಲಿಸಿರುವ ನೆಟ್ಟಿಗನೋರ್ವ ಆದಿಪುರುಷ್ 700 ಕೋಟಿ ವೆಚ್ಚದ ಟೆಂಪಲ್ ರನ್ ಎಂದು ಟ್ರೋಲ್ ಮಾಡಿದ್ದಾರೆ. ಹೀಗೆ ಆದಿಪುರುಷ್ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗುತ್ತಿದ್ದು, ಟೀಸರ್ ಪರ ಬ್ಯಾಟ್ ಬೀಸುತ್ತಿರುವವರೂ ಸಹ ಇದ್ದಾರೆ.

    English summary
    700 crores Temple Run: Audience trolled Adipurush teaser for it's cartoon type scenes
    Monday, October 3, 2022, 10:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X