For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಪಡುಕೋಣೆ ಬಗ್ಗೆ ನಿಮಗೆ ಗೊತ್ತಿರದ 9 ಸಂಗತಿಗಳು

  By ಸೋನು ಗೌಡ
  |

  ಸದ್ಯಕ್ಕೆ ಬಾಲಿವುಡ್ ನಲ್ಲಿ ಸಖತ್ ಶೈನ್ ಆಗುತ್ತಿರುವ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಅವರು 30 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ (ಜನವರಿ 5) ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

  ತಮ್ಮ ಇತ್ತೀಚಿನ ಸಿನಿಮಾ 'ಬಾಜೀರಾವ್ ಮಸ್ತಾನಿ' ಬಾಕ್ಸಾಫೀಸ್ ನಲ್ಲಿ ಹಿಟ್ ಆದ ಮೇಲೆ ನಟಿ ದೀಪಿಕಾ ಅವರು ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದಾರೆ.

  ವಿಶ್ವದ ಮಾಜಿ ನಂ.1 ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರ ಪುತ್ರಿಯಾಗಿರುವ ನಟಿ ದೀಪಿಕಾ ಪಡುಕೋಣೆ ಅವರು 2006 ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ಕನ್ನಡ ಸಿನಿಮಾ 'ಐಶ್ವರ್ಯ' ಮೂಲಕ ಸಿನಿಮಾ ಕ್ಷೇತ್ರಕ್ಕೆ ಧುಮುಕಿದರು.[ಮದುವೆಯ ಸಂಭ್ರಮದಲ್ಲಿ ಬಾಲಿವುಡ್ ನ ಪ್ರಣಯ ಹಕ್ಕಿಗಳು]

  ತದನಂತರ ಕಿಂಗ್ ಖಾನ್ ಶಾರುಖ್ ಅವರ ಜೊತೆ 'ಓಂ ಶಾಂತಿ ಓಂ' ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶ ನೀಡಿದವರು ಹಿಂತಿರುಗಿ ನೋಡಲಿಲ್ಲ. ಜೊತೆಗೆ ಈ ಚಿತ್ರದಲ್ಲಿ ಮಾಡಿದ ನಟನೆಗೆ ಫಿಲ್ಮ್ ಫೇರ್ ಪ್ರಶಸ್ತಿ ಗಿಟ್ಟಿಸಿಕೊಂಡರು.

  2012 ರಲ್ಲಿ 'ಕಾಕ್ ಟೇಲ್', 'ನಂತರ 'ಹೇ ಜವಾನಿ ಹೇ ದಿವಾನಿ', 'ಚೆನ್ನೈ ಎಕ್ಸ್ ಪ್ರೆಸ್', 'ಹ್ಯಾಪಿ ನ್ಯೂ ಇಯರ್', 'ರಾಮ್ ಲೀಲಾ' ಮುಂತಾದ ಸಿನಿಮಾಗಳು ಈ ನಟಿಗೆ ಸಾಕಷ್ಟು ಹೆಸರು ತಂದುಕೊಟ್ಟವು.[ಬಾಕ್ಸಾಫೀಸ್ ನಲ್ಲಿ ಬಾಜೀರಾವ್ ಮುಂದೆ ಮಂಡಿಯೂರಿದ ಕಿಂಗ್ ಖಾನ್]

  ಅಂದಹಾಗೆ ನಿನ್ನೆ (ಜನವರಿ 5) ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಂಡ ಡಿಪ್ಪಿಗೆ ಬಾಲಿವುಡ್ ನ ತಾರೆಯರು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಇನ್ನು ನಟಿ ದೀಪಿಕಾ ಅವರ ಬಗ್ಗೆ ನಿಮಗೆ ಗೊತ್ತಿರದ 9 ಸಂಗತಿಗಳನ್ನು ನಾವು ನಿಮಗೆ ತಿಳಿಸುತ್ತೇವೆ ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ...

  ಅಸಲಿ ದೀಪಿಕಾ ನಟಿಯೇ ಅಲ್ಲ!

  ಅಸಲಿ ದೀಪಿಕಾ ನಟಿಯೇ ಅಲ್ಲ!

  ಇಂದು ಬಾಲಿವುಡ್ ಕ್ಷೇತ್ರದಲ್ಲಿ ಬಹುಬೇಡಿಕೆಯ ಮತ್ತು ಖ್ಯಾತಿ ಗಳಿಸಿರುವ ನಟಿ ದೀಪಿಕಾ ಪಡುಕೋಣೆ ಅವರು ಚಿತ್ರರಂಗಕ್ಕೆ ಬರುವ ಮೊದಲು ಬೆಸ್ಟ್ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದರು. ನಟಿಯಾಗಬೇಕೆಂದು ಕನಸನ್ನು ಕಾಣದ ಡಿಪ್ಪಿಯನ್ನು ಚಿತ್ರರಂಗ ಆಕಸ್ಮಿಕವಾಗಿ ಬರಮಾಡಿಕೊಂಡಿತು.[ಮಸ್ತಾನಿ ಕಲೆಕ್ಷನ್: ಅಬ್ಬಬ್ಬಾ ಇದೇನೋ ಹಣಾನೋ, ಹುಣಸೇ ಬೀಜಾನೋ]

  ಚೆನ್ನೈ ಎಕ್ಸ್ ಪ್ರೆಸ್ ಗೆ ನಟಿಯಾಗಬೇಕಿದ್ದವರು ಇವರಲ್ಲ

  ಚೆನ್ನೈ ಎಕ್ಸ್ ಪ್ರೆಸ್ ಗೆ ನಟಿಯಾಗಬೇಕಿದ್ದವರು ಇವರಲ್ಲ

  ನಿರ್ದೇಶಕ ರೋಹಿತ್ ಶೆಟ್ಟಿ ಮತ್ತು ಕಿಂಗ್ ಖಾನ್ ಶಾರುಖ್ ಖಾನ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ಹಿಟ್ ಸಿನಿಮಾ 'ಚೆನ್ನೈ ಎಕ್ಸ್ ಪ್ರೆಸ್' ಗೆ ಮೊದಲು ನಾಯಕಿ ನಟಿಯಾಗಿ ಆಯ್ಕೆಯಾಗಿದ್ದು, ಇವರಲ್ಲ. ಬದ್ಲಾಗಿ ಬೇರೆ ಯಾರೋ ಆಯ್ಕೆ ಆಗಿದ್ದರು. ಆದರೆ ತದನಂತರ ಕೊನೆ ಕ್ಷಣದ ಬದಲಾವಣೆಯಲ್ಲಿ ಡಿಪ್ಪಿ ಶಾರುಖ್ ಗೆ ಜೋಡಿಯಾಗಿ ಆಯ್ಕೆ ಆದರು.

   ದೀಪಿಕಾ ಅವರು ಹುಟ್ಟಿದ ಸ್ಥಳ ಡೆನ್ಮಾರ್ಕ್

  ದೀಪಿಕಾ ಅವರು ಹುಟ್ಟಿದ ಸ್ಥಳ ಡೆನ್ಮಾರ್ಕ್

  ಡಿಪ್ಪಿ ಬೆಳೆದಿದ್ದು ಬೆಂಗಳೂರು ಆದರೂ ಹುಟ್ಟಿದ್ದು ಮಾತ್ರ ಡೆನ್ಮಾರ್ಕ್ ನ ಕೊಪೆನ್ ಹೇಗನ್ ನಲ್ಲಿ. ತದನಂತರ ಡಿಪ್ಪಿಗೆ ಸುಮಾರು 11 ವರ್ಷ ಆದ ಮೇಲೆ ಬೆಂಗಳೂರಿನಲ್ಲಿ ನೆಲೆಸಿದರು. ತಂದೆ ಪ್ರಕಾಶ್ ಅವರ ಊರು ಕುಂದಾಪುರ ಸಮೀಪ ಪಡುಕೋಣೆ ಆಗಿರುವುದರಿಂದ ಡಿಪ್ಪಿಯ ಹೆಸರಿಗೂ ಪಡುಕೋಣೆ ಎಂಬ ಸರ್ ನೇಮ್ ಬಂತು.

   'ಚಾಂದಿನಿ ಚೌಕ್ ಟು ಚೈನಾ'ದಲ್ಲಿ ರಿಯಲ್ ಸ್ಟಂಟ್ಸ್

  'ಚಾಂದಿನಿ ಚೌಕ್ ಟು ಚೈನಾ'ದಲ್ಲಿ ರಿಯಲ್ ಸ್ಟಂಟ್ಸ್

  ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರೊಂದಿಗೆ ಕಾಣಿಸಿಕೊಂಡಿದ್ದ 'ಚಾಂದಿನಿ ಚೌಕ್ ಟು ಚೈನಾ' ಸಿನಿಮಾಕ್ಕೆ ಬೇಕಾಗಿ ನಟಿ ದೀಪಿಕಾ ಅವರು ಜಪಾನೀಸ್ ಮಾರ್ಷಲ್ ಆರ್ಟ್ಸ್ ಅನ್ನು ಜುಜುಸ್ತು ಎಂಬವರಿಂದ ಕಲಿತಿದ್ದರು. ಜೊತೆಗೆ ಸಿನಿಮಾದಲ್ಲಿ ಅವರು ಯಾವುದೇ ಡ್ಯೂಪ್ ಉಪಯೋಗಿಸದೆ ರಿಯಲ್ ಸ್ಟಂಟ್ ಮಾಡಿದ್ದಾರೆ.

   ಡಿಪ್ಪಿಯ ಫಸ್ಟ್ ಡೈಲಾಗ್ 'ಓಂ ಶಾಂತಿ ಓಂ'

  ಡಿಪ್ಪಿಯ ಫಸ್ಟ್ ಡೈಲಾಗ್ 'ಓಂ ಶಾಂತಿ ಓಂ'

  ನಟಿಯಾದ ದೀಪಿಕಾ ಅವರು ಫಸ್ಟ್ ಡೈಲಾಗ್ ಹೊಡೆದಿದ್ದು, 'ಓಂ ಶಾಂತಿ ಓಂ' ಸಿನಿಮಾದ ಲ್ಲಿ 'ಕುತ್ತೆ ಕಮೀನೇ!, ಭಗವಾನ್ ಕೀ ಲಾಯೇ ಮುಜೆ ಚೋಡ್ ದೋ' ಎಂದು ಭರ್ಜರಿಯಾಗಿ ಡೈಲಾಗ್ ಹೊಡೆದಿದ್ದರು.

  'ಝರ' ಅಂದರೆ ಡಿಪ್ಪಿಗೆ ಇಷ್ಟ

  'ಝರ' ಅಂದರೆ ಡಿಪ್ಪಿಗೆ ಇಷ್ಟ

  ನಟಿ ದೀಪಿಕಾ ಅವರು ಸಾಮಾನ್ಯವಾಗಿ 'ಝರ' ಬ್ರ್ಯಾಂಡ್ ನ ಡ್ರೇಸ್ ಮೆಟೀರಿಯಲ್ಸ್ ಗಳನ್ನು ಉಪಯೋಗಿಸುತ್ತಾರೆ. ಅದ್ರಲ್ಲೂ ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಹೆಚ್ಚಾಗಿ ಇದನ್ನು ಉಪಯೋಗಿಸುತ್ತಾರೆ.

  ಗುರುದತ್ ರಿಲೇಟಿವ್ ದೀಪಿಕಾ

  ಗುರುದತ್ ರಿಲೇಟಿವ್ ದೀಪಿಕಾ

  ನಟಿ ದೀಪಿಕಾ ಪಡುಕೋಣೆ ಲೆಜೆಂಡರಿ ಸಿನಿಮಾ ನಿರ್ಮಾಪಕ ಗುರುದತ್ ಅವರ ಹತ್ತಿರದ ಸಂಬಂಧಿ. ಗುರುದತ್ ಅವರ ನಿಜವಾದ ಹೆಸರು ವಸಂತ್ ಪಡುಕೋಣೆ.

  ಆನಿಶಾ ತಂಗಿ ದೀಪಿಕಾ

  ಆನಿಶಾ ತಂಗಿ ದೀಪಿಕಾ

  ಬಾಜೀರಾವ್ ಬೆಡಗಿ 'ಮಸ್ತಾನಿ' ನಟಿ ದೀಪಿಕಾ ಅವರು ಗಾಲ್ಫ್ ಚಾಂಪಿಯನ್ ಅನಿಶಾ ಅವರ ತಂಗಿ. ನಟಿ ದೀಪಿಕಾ ಹೊರಾಂಗಣ ಆಟಗಳನ್ನು ಹೆಚ್ಚು ಇಷ್ಟ ಪಡುತ್ತಿದ್ದರು.

  ಡಿಪ್ಪಿ-ನಿಹಾರ್ ಪಾಂಡ್ಯ ಅವರ ಲವ್ವಿ-ಡವ್ವಿ

  ಡಿಪ್ಪಿ-ನಿಹಾರ್ ಪಾಂಡ್ಯ ಅವರ ಲವ್ವಿ-ಡವ್ವಿ

  ನಟಿ ದೀಪಿಕಾ ಅವರು ಸಿನಿಮಾ ಕ್ಷೇತ್ರಕ್ಕೆ ಬರುವ ಮುಂಚೆ ನಟ ನಿಹಾರ್ ಪಾಂಡ್ಯ ಅವರ ಜೊತೆ ಲವ್ವಿ-ಡವ್ವಿ ಆಡುತ್ತಿದ್ದರು. ತದನಂತರ ರಣಬೀರ್ ಕಪೂರ್ ಅವರ ಜೊತೆ ಸ್ವಲ್ಪ ದಿನ ಡೇಟಿಂಗ್ ಮಾಡಿದರು, ಇದೀಗ ಕೊನೆಗೆ ರಣವೀರ್ ಸಿಂಗ್ ಅವರನ್ನು ಮದುವೆಯಾಗಲು ತಯಾರಿ ನಡೆಸುತ್ತಿದ್ದಾರೆ.

  English summary
  Birthday Specieal: 9 Unknown facts of Bollywood Actress Deepika Padukone. Actress Deepika Padukone celebrated his 30th Birthday on January 5th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X