Just In
Don't Miss!
- Lifestyle
ದಿನ ಭವಿಷ್ಯ: ನಿಮ್ಮ ರಾಶಿಗೆ ಶನಿವಾರ ದಿನ ಹೇಗಿರಲಿದೆ ನೋಡಿ
- News
ದಿಢೀರ್ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ನೀಡಿದ ಸಚಿವ ಕೆ. ಸುಧಾಕರ್
- Education
KSCCF Recruitment 2021: 45 ಲೆಕ್ಕಿಗರು, ಎಫ್ಡಿಎ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಮಾರ್ಚ್ ತಿಂಗಳಿನಲ್ಲಿ ಹ್ಯುಂಡೈ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ
- Sports
ಐಎಸ್ಎಲ್: ಸಮಬಲ ಸಾಧಿಸಿದ ಗೋವಾ ಎಫ್ಸಿ, ಮುಂಬೈ ಎಫ್ಸಿ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 05ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಭಾಸ್ ಹೆಸರು ಹೇಳಿ ಮೋಸ: ಪೊಲೀಸ್ ಠಾಣೆಯಲ್ಲಿ ದೂರು
ನಟ ಪ್ರಭಾಸ್ ಹೆಸರಿಗೆ ದೊಡ್ಡ ಬ್ರ್ಯಾಂಡ್ ಮೌಲ್ಯವಿದೆ. ಅತಿ ಹೆಚ್ಚು ಸಂಭಾವನೆ ಪಡೆವ, ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರು ನಟ ಪ್ರಭಾಸ್.
ಪ್ರಭಾಸ್ ಅವರ ತಾರಾ ಮೌಲ್ಯವನ್ನೇ ಬಂಡವಾಳ ಮಾಡಿಕೊಂಡಿರುವ ಮುಂಬೈ ನ ತಂಡವೊಂದು ಪ್ರಭಾಸ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಲವಾರು ಮಂದಿಗೆ ವಂಚಿಸಿದೆ.
ಪ್ರೊಡಕ್ಷನ್ ಸಂಸ್ಥೆಯೊಂದರ ಹೆಸರು ಹೇಳಿ, ತಾವು ಪ್ರಭಾಸ್ ನಟನೆಯ ಸಿನಿಮಾ ಮಾಡುತ್ತಿದ್ದು, ಸಿನಿಮಾದ ಚಿತ್ರೀಕರಣವು ವಿದೇಶದಲ್ಲಿ ನಡೆಯಲಿದೆ. ವಿದೇಶದಲ್ಲಿ ಚಿತ್ರೀಕರಣಕ್ಕೆ ಹಲವಾರು ಸಹ ಕಲಾವಿದರು ಬೇಕಿದ್ದು, ನೀವು ಹಣ ನೀಡಿ ನೊಂದಣಿ ಮಾಡಿಸಿದರೆ ನಿಮಗೆ ಅವಕಾಶ ದೊರಕುತ್ತದೆ ಎಂದು ಹಲವರನ್ನು ನಂಬಿಸಿದೆ.

10,000 ನೊಂದಣಿ ಶುಲ್ಕ ವಸೂಲಿ
ಹಲವಾರು ಯುವ ನಟ-ನಟಿಯರಿಗೆ ಹೀಗೆ ವಂಚಿಸಿರುವ ಈ ಗುಂಪು ಪ್ರತಿಯೊಬ್ಬರ ಬಳಿಯೂ 10,000 ರು. ನೊಂದಾವಣಿ ಶುಲ್ಕವನ್ನು ಪಡೆದುಕೊಂಡಿದೆ. ಪ್ರೊಡಕ್ಷನ್ ಸಂಸ್ಥೆಯಿಂದ ಸಂದೇಶ ಬರುತ್ತದೆ ಅದರ ನಂತರ ವಿದೇಶಕ್ಕೆ ಕರೆದುಕೊಂಡು ಹೋಗಲಾಗುತ್ತದೆ ಎಂದು ನಂಬಿಸಿದೆ ಈ ತಂಡ.

ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು
ಮಹಿಳೆಯೊಬ್ಬರು ಮೊದಲಿಗೆ ಈ ವಂಚನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಆ ನಂತರ ಹಲವರು ತಾವೂ ಸಹ ವಂಚನೆಗೆ ಒಳಗಾಗಿರುವುದಾಗಿ ದೂರು ನೀಡಿದ್ದಾರೆ. ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ.

ವೇಶ್ಯಾವಾಟಿಕೆಗೆ ಬಳಸಿಕೊಳ್ಳಲಾಗಿತ್ತು
ಸಿನಿಮಾಕ್ಕೆ ಅವಕಾಶ ಕೊಡಿಸುವುದಾಗಿ ಯುವಕ-ಯುವತಿಯರಿಗೆ ವಂಚನೆ ಮಾಡುವ ಕೆಲವು ಗುಂಪುಗಳು ಮುಂಬೈ ನಲ್ಲಿ ಇವೆ. ಸಿನಿಮಾದಲ್ಲಿ ಅವಕಾಶಕೊಡಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಅವರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದ ಗುಂಪನ್ನು ಕೆಲವು ದಿನಗಳ ಹಿಂದಷ್ಟೆ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಹಲವು ಸಿನಿಮಾಗಳಲ್ಲಿ ನಟಿಸಲಿರುವ ಪ್ರಭಾಸ್
ನಟ ಪ್ರಭಾಸ್ ಪ್ರಸ್ತುತ ರಾಧೆ-ಶ್ಯಾಂ ಸಿನಿಮಾ ಮುಗಿಸಿದ್ದು, ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾದಲ್ಲಿ ನಟಿಸಲಿದ್ದಾರೆ. ಸಲಾರ್ ಜೊತೆಗೆ ಹಿಂದಿಯ ಬಹುಕೋಟಿ ಬಂಡವಾಳದ ಸಿನಿಮಾ 'ಆದಿಪುರುಷ್' ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಎರಡೂ ಸಿನಿಮಾಗಳ ನಂತರ ದೀಪಿಕಾ ಪಡುಕೋಣೆ ಜೊತೆ ಸಿನಿಮಾದಲ್ಲಿ ನಟಿಸಲಿದ್ದಾರೆ ಪ್ರಭಾಸ್.