»   » ಆಸ್ಕರ್ ಗೆದ್ದ ರೆಹಮಾನ್ ಸಲ್ಮಾನ್ ಮನ ಗೆಲ್ಲಲಿಲ್ಲ

ಆಸ್ಕರ್ ಗೆದ್ದ ರೆಹಮಾನ್ ಸಲ್ಮಾನ್ ಮನ ಗೆಲ್ಲಲಿಲ್ಲ

Posted By:
Subscribe to Filmibeat Kannada

ಭಾರತೀಯರಿಗೆ ಮರೀಚಿಕೆಯಂತಾಗಿರುವ ಆಸ್ಕರ್ ಪ್ರಶಸ್ತಿಯನ್ನು 'ಜೈ ಹೋ' ಹಾಡಿನ ಮೂಲಕ ಗೆದ್ದಿದ್ದ ಎ ಆರ್ ರೆಹಮಾನ್ ಅವರ ಸಂಗೀತ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮನ ಗೆಲ್ಲುತ್ತಿಲ್ಲವೇ?

ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ಖಾನ್ ನೀಡಿದ ಹೇಳಿಕೆ ಇದಕ್ಕೆ ಪೂರಕ ಎನಿಸುವಂತಿತ್ತು. ರೆಹಮಾನ್ ತನ್ನ 'ರೌನಾಕ್' ಎನ್ನುವ ಆಲ್ಬಂ ಬಿಡುಗಡೆ ಕಾರ್ಯಕ್ರಮ ಇಟ್ಟು ಕೊಂಡಿದ್ದರು.

ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಕಪಿಲ್ ಸಿಬಲ್ ಮತ್ತು ಸಲ್ಮಾನ್ ಖಾನ್ ಅವರನ್ನು ಆಮಂತ್ರಿಸಲಾಗಿತ್ತು. ಸಲ್ಮಾನ್ ಖಾನ್ ನಿಗದಿತ ಸಮಯಕ್ಕಿಂತ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದರು.

ವೇದಿಕೆಗೆ ಆಗಮಿಸಿ ಭಾಷಣ ಮಾಡಲು ಆರಂಭಿಸಿದ ಸಲ್ಮಾನ್, ಕೇಂದ್ರ ಸಚಿವ ಕಪಿಲ್  ಸಿಬಲ್ ಅವರನ್ನು ಹಾಡಿ ಹೊಗಳಲಾರಂಭಿಸಿದರು. ಕಪಿಲ್ ಸರ್ ಒಬ್ಬ ಅತ್ಯುತ್ತಮ ಸಾಹಿತಿ, ನಾನು ಅವರ ಅಭಿಮಾನಿ ಎಂದು ವೇದಿಕೆಯಲ್ಲಿ ಹೊಗಳುತ್ತಿದ್ದರು.

ಕಾರ್ಯಕ್ರಮದಲ್ಲಿ ನಡೆದಿದ್ದೇನು?

ಹಾಗೆಯೇ, ಕಪಿಲ್ ಸಿಬಲ್ ಹಿಂದಿಯಲ್ಲಿನ ಸಾಹಿತ್ಯ ಸದಭಿರುಚಿಯದ್ದು. ಆದರೆ ಎ ಆರ್ ರೆಹಮಾನ್ ಒಬ್ಬ 'ಸಾಧಾರಣ ಸಂಗೀತ ನಿರ್ದೇಶಕ' ಎಂದು ತುಂಬಿದ ಕಾರ್ಯಕ್ರಮದಲ್ಲಿ ಹೇಳಿದರು. ಸಲ್ಮಾನ್ ಹೇಳಿಕೆಯಿಂದ ಇಡೀ ಕಾರ್ಯಕ್ರಮದಲ್ಲಿ ಒಂದು ಕ್ಷಣ ಮೌನ ಆವರಿಸಿತು.

ಎ ಅರ್ ರೆಹಮಾನ್ ಬೇಸರ

ಸಲ್ಮಾನ್ ಖಾನ್ ಹೇಳಿಕೆಯಿಂದ ಅವಕ್ಕಾದ ರೆಹಮಾನ್ ಮತ್ತು ಕಪಿಲ್ ಸಿಬಲ್ ಒಬ್ಬರನ್ನೊಬ್ಬರ ಮುಖ ನೋಡಿಕೊಂಡರು. ಕಾರ್ಯಕ್ರಮದಲ್ಲಿ ನಗು ನಗುತ್ತಾ ಇದ್ದ ರೆಹಮಾನ್ ಮುಖದಲ್ಲಿ ಬೇಸರ ವ್ಯಕ್ತವಾಗುತ್ತಿತ್ತು.

ಹೇಳಿಕೆಗೆ ಸ್ಪಷ್ಟೀಕರಣ ನೀಡಿದ ಸಲ್ಮಾನ್

ತಾನು ನೀಡಿದ ಹೇಳಿಕೆಗೆ ಬೇಸರ ವ್ಯಕ್ತವಾಗುತ್ತಿರುವುದನ್ನು ಕಂಡ ಸಲ್ಮಾನ್ ನಂತರ ಸ್ಪಷ್ಟೀಕರಣ ನೀಡಲು ಮುಂದಾದರೂ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಸಲ್ಮಾನ್ ನೀಡಿದ ಹೇಳಿಕೆಯ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಿದ್ದರು.

ಕಾಪಿ ರೈಟ್ ಸಮಸ್ಯೆಯೇ?

ಸಲ್ಮಾನ್ ಮತ್ತು ರೆಹಮಾನ್ ನಡುವೆ ಸಣ್ಣ ಮನಸ್ತಾಪ ವರ್ಷಗಳ ಹಿಂದೆ ಇತ್ತು ಎನ್ನಲಾಗುತ್ತಿದೆ. ಸಲ್ಮಾನ್ ಖಾನ್ ಅಭಿನಯದ ಜೈ ಹೋ ಚಿತ್ರ ಸೆಟ್ಟೇರುವ ಸಮಯದಲ್ಲಿ ಇಬ್ಬರ ನಡುವೆ ಸಣ್ಣ ಬಿರುಕು ಕಾಣಿಸಿ ಕೊಂಡಿತ್ತು ಎನ್ನುತ್ತವೆ ಬಾಲಿವುಡ್ ಜಗತ್ತು.

ಜೈ ಹೋ ಚಿತ್ರದ ಟೈಟಲ್

ತನಗೆ ಆಸ್ಕರ್ ಪ್ರಶಸ್ತಿ ತಂದು ಕೊಟ್ಟಿದ್ದ 'ಜೈ ಹೋ' ಹೆಸರನ್ನು ರೆಹಮಾನ್ ಕಾಪಿ ರೈಟ್ ಮಾಡಿಸಿ ಕೊಂಡಿದ್ದರು. ಆದರೆ ಸಲ್ಮಾನ್ ಅದೇ ಹೆಸರಿನಲ್ಲಿ ಚಿತ್ರ ತಯಾರಿಸಲು ಮುಂದಾದಾಗ ರೆಹಮಾನ್ ಅನುಮತಿ ಪಡೆದಿರಲಿಲ್ಲ. ಈ ಸಂಬಂಧ ರೆಹಮಾನ್ ತನ್ನ ವಕೀಲರ ಮೂಲಕ ಸಲ್ಮಾನ್ ಖಾನಿಗೆ ನೋಟೀಸ್ ನೀಡಿದ್ದರು ಎನ್ನಲಾಗುತ್ತಿದೆ.

English summary
A R Rahman music is in bad taste, Salman Khan. A R Rahman launched his album Raunaq along with Union Minister Kapil Sibal and Salman Khan recently. In that programme Salman said, Kapil sir is a great lyricist but AR Rahman was an average musician.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada