Don't Miss!
- Sports
ಕಾಮನ್ವೆಲ್ತ್ನಲ್ಲಿ ಮೊದಲ ಪದಕ ಗೆದ್ದ ಭಾರತೀಯ ಯಾರು? ಒಟ್ಟಾರೆ ಭಾರತ ಎಷ್ಟು ಪದಕ ಗೆದ್ದಿದೆ?
- News
ಚನ್ನಪಟ್ಟಣ; ಕಾಡಾನೆ ದಾಳಿಗೆ ಮಹಿಳೆ ಬಲಿ, ಪರಿಹಾರಕ್ಕೆ ಜನರ ಪಟ್ಟು
- Automobiles
ಇದೇ ತಿಂಗಳು 11ರಂದು ಅನಾವರಣಗೊಳ್ಳಲಿದೆ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Technology
ಒನ್ಪ್ಲಸ್ ಏಸ್ ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ! ಫೀಚರ್ಸ್ ಹೇಗಿದೆ?
- Lifestyle
Mangal Gochar 2022: ಆ. 10ಕ್ಕೆ ವೃಷಭ ರಾಶಿಯಲ್ಲಿ ಮಂಗಳ ಸಂಚಾರ: ದ್ವಾದಶ ಮೇಲೆ ಬೀರಲಿರುವ ಪ್ರಭಾವವೇನು?
- Finance
ಕೇರಳ ರಾಜ್ಯ ಲಾಟರಿ: 'ಸ್ತ್ರೀಶಕ್ತಿ SS-325' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
- Travel
ಇತಿಹಾಸ ಮತ್ತು ಪ್ರಕೃತಿಯ ಮಿಶ್ರಣ ನಂದಿ ಬೆಟ್ಟಗಳು
ಎರಡು ತಿಂಗಳ ಹಿಂದೆಯೇ ಹೊರಬಿದ್ದಿತ್ತು ಆಲಿಯಾ ಭಟ್ ಪ್ರೆಗ್ನೆನ್ಸಿ ಸುದ್ದಿ! ಹೇಗೆ?
ನಟಿ ಆಲಿಯಾ ಭಟ್ ತಾಯಿಯಾಗುತ್ತಿದ್ದಾರೆ. ಎರಡು ತಿಂಗಳ ಹಿಂದಷ್ಟೆ ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ವಿವಾಹವಾಗಿದ್ದರು. ಇದೀಗ ಇಬ್ಬರು ಪೋಷಕರಾಗುತ್ತಿದ್ದಾರೆ.
ವಿವಾಹಕ್ಕೆ ಮುನ್ನವೇ ಆಲಿಯಾ ಭಟ್ ಗರ್ಭಿಣಿ ಆಗಿದ್ದರು ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಕೆಲವರಿಗಷ್ಟೆ ಗೊತ್ತಿದ್ದು, ಸುದ್ದಿಯನ್ನು ಬಹಳ ಗೌಪ್ಯವಾಗಿಡಲಾಗಿತ್ತು. ಆದರೆ ಒಬ್ಬ ಸಾಮಾಜಿಕ ಜಾಲತಾಣ ಬಳಕೆದಾರ ಈ ಬಗ್ಗೆ ಆಲಿಯಾ-ರಣ್ಬೀರ್ ವಿವಾಹಕ್ಕೆ ಮುಂಚೆಯೇ ಖಾತೆಯಲ್ಲಿ ಹಂಚಿಕೊಂಡಿದ್ದ. ಅದಕ್ಕೆ ಕಾರಣವನ್ನೂ ಆತ ನೀಡಿದ್ದ.
ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂನಂತೆ ರೆಡಿಟ್ ಎಂಬ ಸಾಮಾಜಿಕ ಜಾಲತಾಣವೂ ಇದ್ದು ಅಲ್ಲಿ 'ನ್ಯೂ ಬಿ ಫಾರ್ ಫನ್' ಹೆಸರಿನ ರೆಡಿಟ್ ಬಳಕೆದಾರರೊಬ್ಬರು ಮಿಸ್ ಭಟ್ (ಆಗಿನ್ನೂ ಆಲಿಯಾ ಮದುವೆ ಆಗಿರಲಿಲ್ಲ) ಗರ್ಭಿಣಿ ಆಗಿದ್ದಾರೆ. ಈ ಸುದ್ದಿಯ ಮೂಲ ಆಕೆಯ ಮೇಕಪ್ ಮ್ಯಾನ್ ಅಸಿಸ್ಟೆಂಟ್ ಕಮ್ ಗೆಳೆತಿ ಎಂದು ಬರೆದುಕೊಂಡಿದ್ದರು.

ಪೋಸ್ಟ್‌ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು
ಈ ಪೋಸ್ಟ್ ಅನ್ನು ಬಹಳ ಮಂದಿ ಓದಿದ್ದರು. ಹಲವರು ವಿರೋಧವನ್ನೂ ವ್ಯಕ್ತಪಡಿಸಿದ್ದರು. ಇದು ಅತಿಯಾದ ಗಾಸಿಪ್ ಎಂದರು. ಅಲ್ಲದೆ ಆಲಿಯಾ ಬಗ್ಗೆ ಖಾಸಗಿ ಮಾಹಿತಿಯನ್ನು ಹೊರಹಾಕಿರುವ ಆ ಮೆಕಪ್ ಕಲಾವಿದರ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ರೆಡಿಟ್ ಸಂಸ್ಥೆ ಆ ಪೋಸ್ಟ್ ಹಂಚಿಕೊಂಡಿದ್ದ 'ನ್ಯೂ ಬಿ ಫಾರ್ ಫನ್' ಖಾತೆಯನ್ನು ಡಿಲೀಟ್ ಮಾಡಿತು.

ಪೋಸ್ಟ್ ವೈರಲ್ ಆಗಿದೆ
ಆದರೆ ಇದೀಗ ಆಲಿಯಾ ಭಟ್ ತಾವು ತಾಯಿಯಾಗುತ್ತಿರುವ ವಿಷಯ ಬಹಿರಂಗಪಡಿಸಿದ್ದು, ಇದೀಗ ರೆಡಿಟ್ ಸಹ ಖಾತೆಯನ್ನು ಪುನಃ ಸಕ್ರಿಯಗೊಳಿಸಿದೆ. ಆಗ ಹಂಚಿಕೊಂಡಿದ್ದ ಪೋಸ್ಟ್ ಅನ್ನು ಫೀಡ್‌ನಲ್ಲಿ ತೋರಿಸುತ್ತಿದೆ. ಈಗ ಆ ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿವೆ. ಯಾವ ಬಾಲಿವುಡ್ ಬಿಗ್ ಹೌಸ್ ಮಾಧ್ಯಮಗಳಿಗೂ ಸಿಗದ ಸುದ್ದಿಯನ್ನು ಆಗಲೇ ಬಹಿರಂಗಪಡಿಸಿದ್ದಕ್ಕೆ ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ.

ಸುಂದರ ಚಿತ್ರ ಹಂಚಿಕೊಂಡಿದ್ದ ಆಲಿಯಾ ಭಟ್
ಬಾಲಿವುಡ್ ಮನೊರಂಜನಾ ಮಾಧ್ಯಮಗಳ ಪ್ರಕಾರ ಆಲಿಯಾ ಭಟ್ ಮದುವೆಗೆ ಮುನ್ನವೇ ಗರ್ಭಿಣಿ ಆಗಿದ್ದರು. ಆದರೆ ಈಗ ತಾವು ಗರ್ಭಿಣಿ ಆಗಿರುವ ವಿಷಯ ಬಹಿರಂಗಗೊಳಿಸಿದ್ದಾರೆ. ತಾವು ಸ್ಕ್ಯಾನಿಂಗ್ ಗೆ ಒಳಗಾಗಿರುವ ಚಿತ್ರವನ್ನು ಆಲಿಯಾ ಭಟ್ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರಣ್ಬೀರ್ ಕಪೂರ್ ಸಹ ಇದ್ದು, ಸ್ಕ್ಯಾನಿಂಗ್ ಮಷೀನ್‌ನಲ್ಲಿ ಮಗುವಿನ ಚಿತ್ರವನ್ನು ನೋಡುತ್ತಿರುವ ಸುಂದರ ಚಿತ್ರ ಇದಾಗಿತ್ತು.

2020ರಲ್ಲಿಯೇ ವಿವಾಹ ನಿಗದಿಯಾಗಿತ್ತು
ಆಲಿಯಾ ಭಟ್ ಹಾಗೂ ರಣ್ಬೀರ್ ಕಪೂರ್ ಬಹು ಸಮಯದಿಂದ ಪ್ರೀತಿಯಲ್ಲಿದ್ದರು. ಇಬ್ಬರೂ ವಿವಾಹವಾಗುವುದು ನಿಶ್ಚಿತ ಎನ್ನಲಾಗಿತ್ತು. 2020ರಲ್ಲಿಯೇ ಈ ಜೋಡಿಯ ವಿವಾಹವಾಗಬೇಕಿತ್ತು. ಆದರೆ ರಣ್ಬೀರ್ ಕಪೂರ್ ತಂದೆ ರಿಷಿ ಕಪೂರ್ ಹಠಾತ್ ಸಾವಿನ ಕಾರಣ ಇಬ್ಬರ ವಿವಾಹ ಮುಂದೂಡಲಾಯಿತು. ಕೊನೆಗೆ 2022 ರ ಏಪ್ರಿಲ್ 14 ರಂದು ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ವಿವಾಹ ರಣ್ಬೀರ್ ನಿವಾಸದಲ್ಲಿಯೇ ಅದ್ಧೂರಿಯಾಗಿ ಆಚರಿಸಲಾಯಿತು. ಬಾಲಿವುಡ್‌ನ ಬಹುತೇಕ ಸೆಲೆಬ್ರಿಟಿಗಳು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.