ಮೂರು ವರ್ಷದ ಪುತ್ರನಿಗೆ ಶಾರೂಖ್ ಕಟ್ಟಿಕೊಟ್ಟ ಪುಟಾಣಿ ಮನೆ!
ಮುಂಬೈ, ಜ. 8: ಅಪ್ಪ ಅಂದ್ರೆ ಆಕಾಶ ಅನ್ನೋ ಮಾತು ಸುಳ್ಳಲ್ಲ. ಹಲವಾರು ಅಪ್ಪಂದಿರು ತಮ್ಮ ಮಕ್ಕಳಿಗಾಗಿ ವಿಶೇಷ ಉಡುಗೊರೆ, ಸವಲತ್ತುಗಳನ್ನು ಮಾಡಿಕೊಡುವುದನ್ನು ನಾವು ನೋಡಿದ್ದೇವೆ. ಅದರಲ್ಲೂ ಸೆಲೆಬ್ರಿಟಿಗಳು ತಮ್ಮ ಮಕ್ಕಳಿಗೆ ಮಾಡಿಕೊಡುವ ವಿಶೇಷ ಸವಲತ್ತುಗಳು ಎಲ್ಲರ ಗಮನ ಸೆಳೆಯುತ್ತವೆ.
ಬಾಲಿವುಡ್ ಬಾದ್ ಶಾ ಎಂದೇ ಖ್ಯಾತಿ ಗಳಿಸಿರುವ ಶಾರೂಖ್ ಖಾನ್, ತಮ್ಮ ಮೂರು ವರ್ಷದ ಕಿರಿಯ ಪುತ್ರ ಅಬ್ ರಾಮ್ ಗಾಗಿ ಟ್ರೀ ಹೌಸ್ ಒಂದನ್ನು ಕಟ್ಟಿಸಿಕೊಟ್ಟಿರುವುದು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕರ್ಷಣೆಯ ಬಿಂದುವಾಗಿದೆ.

ತಮ್ಮ ಬಂಗಲೆಯಾದ ಮನ್ನತ್ ಆವರಣದಲ್ಲೇ ಇರುವ ಮರವೊಂದರಕ್ಕೆ ಈ ಟ್ರೀ ಹೌಸ್ ಮಾಡಿಕೊಡಲಾಗಿದೆ. ಇದು ಜೂನಿಯರ್ ಶಾರೂಖ್ ಗೆ ಆಡಲು ಇರುವ ಎಕ್ಸ್ ಕ್ಲೂಸಿವ್ ಆಟದ ಮನೆ.

ಅಂದಹಾಗೆ, ಇದನ್ನು ತಯಾರು ಮಾಡಿಕೊಟ್ಟಿರುವುದು ಬಾಲಿವುಡ್ ನ ಪ್ರೊಡಕ್ಷಣ ಡಿಸೈನರ್ ಆಗಿರುವ ಸಾಬು ಸಿರಿಲ್. ಈ ಹಿಂದೆ, ಶಾರೂಖ್ ಖಾನ್ ಅವರ ಕನಸಿನ ಬಂಗಲೆಯಾದ ಮನ್ನತ್ ಗೂ ಇವರು ಕೆಲಸ ಮಾಡಿದ್ದರು. ಇದೀಗ, ಅವರ ಪುತ್ರನ ಪುಟಾಣಿ ಮನೆಗೂ ತಮ್ಮ ಕಲಾಸ್ಪರ್ಶ ನೀಡಿದ್ದಾರೆ.

ಶಾರೂಖ್ ಖಾನ್ ಅವರ ಪತ್ನಿ ಗೌರಿ ಖಾನ್ ಕೂಡಾ ಈ ಫೋಟೋಗಳನ್ನು ಇನ್ ಸ್ಟಾ ಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.


Click it and Unblock the Notifications











