For Quick Alerts
  ALLOW NOTIFICATIONS  
  For Daily Alerts

  ಮಾಜಿ ಪತ್ನಿಯ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಆಮೀರ್ ಖಾನ್ ದಂಪತಿ

  |

  ವಿಭಿನ್ನ ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದಿರುವ ಬಾಲಿವುಡ್ ನಟ ಆಮೀರ್ ಖಾನ್ ಸದ್ಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಕಾರಣ ಸಿನಿಮಾ ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಿ, ಆಮೀರ್ ಕುಟುಂಬದ ಜೊತೆ ಮನೆಯಲ್ಲಿಯೆ ಕಾಲಕಳೆಯುತ್ತಿದ್ದಾರೆ.

  ಸುಶಾಂತ್ ಅಭಿನಯದ ಕೊನೆಯ ಚಿತ್ರ ಒಟಿಟಿಯಲ್ಲಿ ಬಿಡುಗಡೆ | 'Dil bechara' to be released on Hotstar

  ಈ ನಡುವೆ ಆಮೀರ್ ಖಾನ್ ಪತ್ನಿ ರೀನಾ ದತ್ತಾ ಅವರ ಹುಟ್ಟುಹಬ್ಬದ ವಿಡಿಯೋ ವೈರಲ್ ಆಗಿದೆ. ಅಂದ್ಹಾಗೆ ಇದು ಕಳೆದ ವರ್ಷದ ವಿಡಿಯೋ. ವಿಶೇಷ ಅಂದರೆ ರೀನಾ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಆಮೀರ್ ಖಾನ್ ಮತ್ತು ಹಾಲಿ ಪತ್ನಿ ಕಿರಣ್ ರಾವ್ ಭಾಗಿಯಾಗಿದ್ದಾರೆ.

  ಆಮೀರ್ ಖಾನ್ ಜೊತೆ 'ಮಹಾಭಾರತ' ಸಿನಿಮಾ: ವಿಜಯೇಂದ್ರ ಪ್ರಸಾದ್ ಹೇಳಿದ್ದೇನು?ಆಮೀರ್ ಖಾನ್ ಜೊತೆ 'ಮಹಾಭಾರತ' ಸಿನಿಮಾ: ವಿಜಯೇಂದ್ರ ಪ್ರಸಾದ್ ಹೇಳಿದ್ದೇನು?

  ಆಮೀರ್ ಖಾನ್ ಮೊದಲ ಪತ್ನಿ ರೀನಾ ದತ್ತಾ ಅವರಿಂದ ವಿಚ್ಛೇದನ ಪಡೆದು ದೂರ ದೂರ ಆದರೂ, ಇಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ. ಆಗಾಗ ಮೊದಲ ಪತ್ನಿಯ ಜೊತೆ ಕಾಣಿಸಿಕೊಳ್ಳುತ್ತಿರುವ ಆಮೀರ್, ಮಾಜಿ ಪತ್ನಿಯ 50ನೇ ವರ್ಷದ ಜನ್ಮದಿನ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಸಖತ್ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋ ಈ ವೈರಲ್ ಆಗಿದೆ. ವಿಡಿಯೋದಲ್ಲಿ ಆಮೀರ್ ಖಾನ್ ಪುತ್ರಿ ಐರಾ ಖಾನ್ ಸಂತಸ ಹೇಳತೀರದಾಗಿದೆ. ಕುಟುಂಬದವರು, ಸ್ನೇಹಿತರು ಭಾಗಿಯಾಗಿದ್ದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಆಮೀರ್ ಖಾನ್, ಕಿರಣ್ ರಾವ್ ದಂಪತಿಯ ಹಾಜರಿ ವಿಶೇಷವಾಗಿತ್ತು.

  ಅಂದ್ಹಾಗೆ ಆಮೀರ್ ಖಾನ್ 1986ರಲ್ಲಿ ರೀನಾ ದತ್ತಾ ಜೊತೆ ಮದುವೆಯಾಗುತ್ತಾರೆ. 2002ರಲ್ಲಿ ವಿಚ್ಛೇದನ ಪಡೆದು ರೀನಾ ಅವರಿಂದ ದೂರ ಆಗುತ್ತಾರೆ. ಇವರ ದಾಂಪತ್ಯಕ್ಕೆ ಜುನೈದ್ ಮತ್ತು ಐರಾ ಎನ್ನುವ ಇಬ್ಬರು ಮಕ್ಕಳಿದ್ದಾರೆ.

  2005ರಲ್ಲಿ ಆಮೀರ್ ಖಾನ್, ಕಿರಣ್ ರಾವ್ ಅವರ ಜೊತೆ ಮದುವೆಯಾಗುತ್ತಾರೆ. ಆಮೀರ್ ಮತ್ತು ಕಿರಣ್ ರಾವ್ ದಂಪತಿಗೆ ಒಬ್ಬ ಪುತ್ರ ಇದ್ದಾರೆ. ಆಮೀರ್ ಖಾನ್ ಮೊದಲ ಪತ್ನಿಯ ಜೊತೆಯೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಅದರಲ್ಲೂ ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ ಆಮೀರ್. ಆಗಾಗ ಮಕ್ಕಳ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ.

  English summary
  Bollywood Actor Amir Khan and wife Kiran Rao attend to his Ex wife Reena Dutta birthday celebration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X