»   » ಚಿತ್ರ ನೋಡಿ ಬಿಕ್ಕಿಬಿಕ್ಕಿ ಅತ್ತರಂತೆ ಅಮೀರ್ ಖಾನ್

ಚಿತ್ರ ನೋಡಿ ಬಿಕ್ಕಿಬಿಕ್ಕಿ ಅತ್ತರಂತೆ ಅಮೀರ್ ಖಾನ್

Posted By:
Subscribe to Filmibeat Kannada

ತಮ್ಮ ಅಭಿನಯದ 'ಮಾರ್ಗರಿಟಾ' ಚಿತ್ರ ನೋಡಿ ಬಾಲಿವುಡ್ ನಟ ಅಮೀರ್ ಖಾನ್ ಅವರ ಕಣ್ಣಾಲಿಗಳು ತುಂಬಿ ಬಂದವು ಎಂದು ಆ ಚಿತ್ರದ ಹೀರೋಯಿನ್ ಕಲ್ಕಿ ಕೊಚ್ಲಿನ್ ಹೇಳಿದ್ದಾರೆ. ಅಮೀರ್ ಅವರ ಪತ್ನಿ ಕಿರಣ್ ರಾವ್ ಒತ್ತಾಯದ ಮೇರೆಗೆ ಅವರು ಸಿನಿಮಾ ನೋಡಲು ಬಂದಿದ್ದರು.

ಮಾರ್ಗರಿಟಾ ಚಿತ್ರವನ್ನು ನೋಡಿದ ಬಳಿಕ ಅವರು ಭಾವೋದ್ವೇಗಕ್ಕೆ ಒಳಗಾದರು. ಮೊದಲು ಈ ಚಿತ್ರವನ್ನು ನೋಡಲು ಅವರಿಗೆ ಅಷ್ಟೇನು ಆಸಕ್ತಿ ಇರಲಿಲ್ಲ. ಅದು ಹೇಗೋ ಏನೋ ಅವರ ಪತ್ನಿಯ ಒತ್ತಾಯ ಮೇರೆಗೆ ಬಂದಿದ್ದರು. ಆದರೆ ಸಿನಿಮಾ ನೋಡಿದ ಮೇಲೆ ಅವರ ಕೈಯಲ್ಲಿ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ.

Aamir Khan cried after watching the movie margarita

ಈ ಚಿತ್ರ ಅಮೀರ್ ಅವರಿಗೆ ಬಹಳಷ್ಟು ಹಿಡಿಸಿತು. ಚಿತ್ರ ಪ್ರದರ್ಶನ ಪೂರ್ಣವಾದ ಕೂಡಲೆ ಮುಕ್ತ ಪ್ರಶಂಸೆಯಿಂದ ನಮ್ಮೆನ್ನೆಲ್ಲಾ ಕೊಂಡಾಡಿದರು ಎಂದು ಕಲ್ಕಿ ಸಂತಸ ವ್ಯಕ್ತಪಡಿಸಿದರು. ಹಲವಾರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಎಲ್ಲರ ಮೆಚ್ಚುಗೆ ಪಾತ್ರವಾದ ಈ ಚಿತ್ರ ಇದೀಗ ಭಾರತೀಯ ಚಿತ್ರಪ್ರೇಮಿಗಳ ಮುಂದೆ ಬರುತ್ತಿದೆ.

ಇದೊಂದು ಭಿನ್ನ ಕಥಾಹಂದರದ ಚಿತ್ರವಾಗಿದ್ದು, 'ಮಿದುಳಿನ ಪಾರ್ಶ್ವವಾಯು' (cerebral palsy) ವ್ಯಾಧಿಯಿಂದ ಬಳಲುತ್ತಿರುವ ಪಾತ್ರದಲ್ಲಿ ಕಲ್ಕಿ ಕಾಣಿಸಿದ್ದಾರೆ. ಶೋನಾಲಿ ಬೋಸ್ ಚಿತ್ರವನ್ನು ನಿರ್ಮಿಸುವ ಜೊತೆಗೆ ಆಕ್ಷನ್ ಕಟ್ ಹೇಳಿದ್ದಾರೆ. ಪಾತ್ರವರ್ಗದಲ್ಲಿ ಕಲ್ಕಿ ಕೊಚ್ಲಿನ್, ರೇವತಿ, ಸಯಾನಿ ಗುಪ್ತಾ ಮುಂತಾದವರಿದ್ದಾರೆ. ಇದೇ ಏಪ್ರಿಲ್ 17ರಂದು ಚಿತ್ರ ತೆರೆಕಾಣುತ್ತಿದೆ.

ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿರುವ ಈ ಚಿತ್ರದ ಅಡಿಬರಹ 'With A Straw' ಎಂಬುದು. ಕಲ್ಕಿ ಕೊಚ್ಲಿನ್ ಅವರಿಗೆ ತಾಯಿಯಾಗಿ ರೇವತಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವೀಲ್ ಚೇರ್ ಬಳಸುತ್ತಾ, ದೆಹಲಿ ವಿವಿ ವಿದ್ಯಾರ್ಥಿನಿಯಾಗಿ, ನ್ಯೂಯಾರ್ಕ್ ವಿವಿಗೆ ತೆರಳಿ ಅಲ್ಲಿ ಪ್ರೇಮದ ಬೀಳುವ ಪಾತ್ರದಲ್ಲಿ ಕಲ್ಕಿ ಕಾಣಿಸಿದ್ದಾರೆ. (ಏಜೆನ್ಸೀಸ್)

English summary
Bollywood actor Aamir Khan cried after watching the movie 'Margarita with A Straw. The film directed by Shonali Bose, starring Kalki Koechlin.[3][4] Kalki plays a girl with cerebral palsy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada