ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್ ಬಯೋಪಿಕ್ ನಲ್ಲಿ ಬಾಲಿವುಡ್ ಸ್ಟಾರ್ ನಟ

ಬಾಲಿವುಡ್ ನಲ್ಲಿ ಈಗಾಗಲೇ ಸಾಕಷ್ಟು ಸಾಧಕರ ಬಯೋಪಿಕ್ ತೆರೆಮೇಲೆ ಬಂದಿದೆ. ಇದೀಗ ಮತ್ತೊಂದು ಬಯೋಪಿಕ್ ಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಹೌದು, ಭಾರತದ ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್ ಅವರ ಜೀವನಾಧಾರಿತ ಸಿನಿಮಾ ತೆರೆಮೇಲೆ ಬರಲು ಸಜ್ಜಾಗಿದೆ.

ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರ ಬಯೋಪಿಕ್ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ನಿರ್ದೇಶಕ ಆನಂದ್ ಎಲ್ ರೈ ಮತ್ತು ಮಹವೀರ್ ಜೈನ್ ನಿರ್ಮಾಣದಲ್ಲಿ ಈ ಬಯೋಪಿಕ್ ಮೂಡಿಬರುತ್ತಿದೆ. ಆದರೆ ವಿಶ್ವನಾಥನ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಈ ಮೊದಲು ವಿಶ್ವನಾಥನ್ ಆನಂದ್ ಪಾತ್ರಕ್ಕೆ ಅಭಿಷೇಕ್ ಬಚ್ಚನ್ ಹೆಸರು ಕೇಳಿಬರುತ್ತಿತ್ತು. ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೀಗ ಬಾಲಿವುಡ್ ಮತ್ತೋರ್ವ ಖ್ಯಾತ ನಟ ಆಮೀರ್ ಖಾನ್ ಹೆಸರು ಕೇಳಿಬರುತ್ತಿದೆ. ಹೌದು, ವಿಶ್ವನಾಥನ್ ಆಗಿ ತೆರೆಮೇಲೆ ಆಮೀರ್ ಖಾನ್ ಕಾಣಿಸಿಕೊಂಡರೆ ಚೆನ್ನಾಗಿರುತ್ತೆ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

Aamir Khan is suitable choice for Viswanathan Anand biopic says producer Mahaveer Jain

ಈ ಬಗ್ಗೆ ನಿರ್ಮಾಪಕ ಮಹಾವೀರ್ ಜೈನ್ ಮಾತನಾಡಿದ್ದು, ಈಗಾಗಲೇ ಚಿತ್ರದ ಕೆಲಸಗಳು ಪ್ರಾರಂಭವಾಗಿದ್ದು, 2022ರಲ್ಲಿ ಸಿನಿಮಾ ಸೆಟ್ಟೇರಲಿದೆ ಎಂದಿದ್ದಾರೆ. ಇದೊಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಸದ್ಯ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದೆ. ಆಮೀರ್ ಖಾನ್ ಈ ಪಾತ್ರಕ್ಕೆ ಸೂಕ್ತ ಆಯ್ಕೆ ಎಂದು ವೈಯಕ್ತಿಕವಾಗಿ ಭಾವಿಸುತ್ತೇನೆ ಎಂದಿದ್ದಾರೆ. ಅಂದ್ಮೇಲೆ ಆಮೀರ್ ಖಾನ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಇನ್ನೂ ಹೆಸರಿಡದ ಚಿತ್ರಕ್ಕೆ ಸಂಜಯ್ ತ್ರಿಪಾಠಿ ಸ್ಕ್ರಿಪ್ಟ ಕೆಲಸ ಮಾಡುತ್ತಿದ್ದಾರೆ. ಆನಂದ್ ಎಲ್ ರೈ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ. ಅಂದಹಾಗೆ ಆಮೀರ್ ಖಾನ್ ದಂಗಲ್ ಚಿತ್ರದಲ್ಲಿ ಮಹಾವೀರ್ ಸಿಂಗ್ ಪೋಗತ್ ಮತ್ತು ಮಂಗಲ್ ಪಾಂಡೆ ಪಾತ್ರಗಳನ್ನು ಮಾಡುವ ಮೂಲಕ ನಿಜಜೀವನದ ಪಾತ್ರವನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ಸದ್ಯ ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

Recommended Video

ಪ್ರಶಾಂತ್ ನೀಲ್ ಹೇಳಿದ ಸುಳ್ಳನ್ನು ಮಾದ್ಯಮಗಳ ಮುಂದೆ ಬಿಚ್ಚಿಟ್ಟ ರವಿ ಬಸ್ರೂರ್

More from Filmibeat

English summary
Aamir Khan is suitable choice for Viswanathan Anand biopic says producer Mahaveer Jain.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X