For Quick Alerts
  ALLOW NOTIFICATIONS  
  For Daily Alerts

  ಹಚ್ಚೆ ಹಾಕುವ ವೃತ್ತಿಗಿಳಿದ ಅಮೀರ್ ಖಾನ್ ಪುತ್ರಿ: ಮಗಳ ಕೆಲಸಕ್ಕೆ ಅಪ್ಪ ಏನಂತಾರೆ?

  |

  ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ಹೊಸ ವೃತ್ತಿಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

  ಹೌದು, ಸಹಾಯಕ ನಿರ್ದೇಶಕಿ ಆಗಿ ಕಿರುಚಿತ್ರಗಳ ನಿರ್ದೇಶಕಿ ಆಗಿ ಗುರುತಿಸಿಕೊಂಡಿದ್ದ ಇರಾ ಖಾನ್ ಹಠಾತ್ತನೆ ಹೊಸ ವೃತ್ತಿಯನ್ನು ಆರಿಸಿಕೊಂಡಿದ್ದಾರೆ.

  ಹೌದು, ಇರಾ ಖಾನ್ ಟ್ಯಾಟೂ ಹಾಕಲು ಪ್ರಾರಂಭಿಸಿದ್ದಾರೆ. ಇರಾ ಖಾನ್ ಹಾಕಿರುವ ಕೆಲವು ಟ್ಯಾಟೂಗಳ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇರಾರ ಹೊಸ ವೃತ್ತಿಯ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

  ಟ್ಯಾಟೂ ಹಾಕುವುದು ಪರ್ಯಾಯ ವೃತ್ತಿ

  ಟ್ಯಾಟೂ ಹಾಕುವುದು ಪರ್ಯಾಯ ವೃತ್ತಿ

  ಇರಾ ಖಾನ್ ತನ್ನ ಟ್ರೈನರ್ ನೂಪುರ್ ಶಿಖಾರಿ ಕೈ ಮೇಲೆ ಟ್ಯಾಟೂ ಬಿಡಿಸಿದ್ದಾರೆ. ಆ ಚಿತ್ರವನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ ಇರಾ ಖಾನ್. ಹಡಗಿನ ಲಂಗರಿನ ಟ್ಯಾಟೂ ಬಿಡಿಸಿದ್ದಾರೆ ಇರಾ ಖಾನ್. ಟ್ಯಾಟೂ ಹಾಕುವುದು ನನ್ನ ಪರ್ಯಾಯ ವೃತ್ತಿ ಎಂದಿದ್ದಾರೆ ಇರಾ.

  ಟ್ಯಾಟೂ ಹಾಕುವುದು ಇರಾ ಖಾನ್ ಗೆ ಹವ್ಯಾಸ

  ಟ್ಯಾಟೂ ಹಾಕುವುದು ಇರಾ ಖಾನ್ ಗೆ ಹವ್ಯಾಸ

  ಟ್ಯಾಟೂ ಹಾಕುವುದು ಇರಾ ರ ಹವ್ಯಾಸವಂತೆ. ಮೊದಲಿಗೆ ಪೇಪರ್‌ ಮೇಲೆ ಚಿತ್ರ ಬಿಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ನಂತರ ನೂಪುರ್ ಕೈ ಮೇಲೆ ಟ್ಯಾಟೂ ಬಿಡಿಸಿದ್ದಾರೆ. ಟ್ಯಾಟೂ ಹಾಕಬೇಕು ಎಂಬುದು ಅವರ ಇಷ್ಟದ ಕಾರ್ಯಗಳಲ್ಲಿ ಒಂದಾಗಿತ್ತಂತೆ (ಬಕೆಟ್ ಲಿಸ್ಟ್).

  ಯುವರಾಜ್ ಸಿಂಗ್ ಪತ್ನಿ ಜೊತೆಗೆ ಸಿನಿಮಾ

  ಯುವರಾಜ್ ಸಿಂಗ್ ಪತ್ನಿ ಜೊತೆಗೆ ಸಿನಿಮಾ

  ಇನ್ನು ಮುಂದೆ ಇರಾ ಟ್ಯಾಟೂ ಹಾಕುವ ಕೆಲಸ ಮಾಡುತ್ತಾರೆ ಎಂದೇನಿಲ್ಲ. ಇದು ಅವರಿಗೆ ಪರ್ಯಾಯ ವೃತ್ತಿಯಂತೆ. ಅಂದರೆ ಮುಖ್ಯ ವೃತ್ತಿ ಈಗಲೂ ಸಿನಿಮಾ ನಿರ್ದೇಶನವೇ ಎಂದಿದ್ದಾರೆ ಇರಾ. ಯುರುಪಿಡೀಸ್ ಬರೆದಿರುವ ಪ್ರಖ್ಯಾತ ನಾಟಕ ಮೆಡೀಯನ್ನು ಸಿನಿಮಾ ಮಾಡುತ್ತಿದ್ದಾರೆ ಇರಾ ಖಾನ್. ಈ ಸಿನಿಮಾಕ್ಕೆ ಯುವರಾಜ್ ಸಿಂಗ್ ಪತ್ನಿ ಹೇಜಲ್ ಕೀಚ್ ನಾಯಕಿ.

  ಅತ್ತಿಗೆಯನ್ನು ಧ್ರುವ ಎಷ್ಟು ಪ್ರೀತಿಸುತ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ | Filmibeat Kannada
  'ನಿಮ್ಮ ಈ ಕೆಲಸಕ್ಕೆ ಅಪ್ಪ ಏನಾಂತಾರೆ?'

  'ನಿಮ್ಮ ಈ ಕೆಲಸಕ್ಕೆ ಅಪ್ಪ ಏನಾಂತಾರೆ?'

  'ನಿಮ್ಮ ಈ ಕೆಲಸಕ್ಕೆ ನಿಮ್ಮ ತಂದೆ ಏನಂತಾರೆ?' ಎಂದು ಸಾಮಾಜಿಕ ಜಾಲತಾಣದಲ್ಲಿ ಇರಾ ರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಇರಾ ಕೊಟ್ಟಿಲ್ಲವಾದರೂ, ಹಿಂದೊಮ್ಮೆ ಅಮೀರ್ ಖಾನ್ ಸಂದರ್ಶನದಲ್ಲಿ ಹೇಳಿದ್ದಂತೆ. 'ಇರಾ ಹಲವು ಆಸಕ್ತಿಗಳನ್ನು ಹೊಂದಿದ್ದಾಳೆ, ಆಕೆ ಯಾವ ಕೆಲಸ ಮಾಡಿದರೂ ಚೆನ್ನಾಗಿ ಮಾಡುತ್ತಾಳೆ. ಆಕೆಯ ಇಷ್ಟದ ವೃತ್ತಿ ಆಕೆ ಮಾಡಬಹುದು ನನ್ನ ಅಭ್ಯಂತರವಿಲ್ಲ' ಎಂದಿದ್ದರು.

  English summary
  Aamir Khan's daughter Ira Khan made her first tattoo. She said making tattoo is her alternative career.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X