For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್ 2' ಎದುರು 'ಲಾಲ್ ಸಿಂಗ್ ಛಡ್ಡಾ': ಯಶ್‌ಗೆ ಕರೆ ಮಾಡಿ ಕ್ಷಮೆ ಕೇಳಿದ ಅಮೀರ್ ಖಾನ್

  |

  'ಕೆಜಿಎಫ್ 2' ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆ ಪಕ್ಕಾ ಆಗಿದೆ. ಪ್ರಸ್ತುತ ಹಲವು ಸ್ಟಾರ್ ನಟರ ಸಿನಿಮಾಗಳು ನಾ ಮುಂದು ತಾ ಮುಂದು ಎಂದು ಬಿಡುಗಡೆಗೆ ಸಾಲುಗಟ್ಟಿವೆ. ಅವುಗಳ ಬಿಡುಗಡೆ ಸಂಭ್ರಮ ಎಲ್ಲ ಮುಗಿದ ಬಳಿಕ ಏಕಾಂಗಿಯಾಗಿ ರಾಖಿಭಾಯ್ ಚಿತ್ರಮಂದಿರಕ್ಕೆ ಆಗಮಿಸಲಿದ್ದ. ಆದರೆ ಅಮೀರ್ ಖಾನ್ 'ಲಾಲ್ ಸಿಂಗ್ ಛಡ್ಡಾ' ಸಿನಿಮಾ 'ಕೆಜಿಎಫ್‌ 2' ಎದುರು ಸ್ಪರ್ಧೆಗೆ ನಿಂತಿದೆ.

  ಅಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಛಡ್ಡಾ' ಸಿನಿಮಾ ಸಹ ಏಪ್ರಿಲ್ 14ಕ್ಕೆ ಬಿಡುಗಡೆ ಆಗಲಿದೆ. 'ಕೆಜಿಎಫ್ 2' ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಿ ಈಗಾಗಲೇ ಎರಡು ತಿಂಗಳಾಗಿತ್ತು. ಹಾಗಿದ್ದರೂ ಸಹ ಅಮೀರ್ ಖಾನ್ ತಮ್ಮ ಸಿನಿಮಾ ಬಿಡುಗಡೆಯನ್ನು ಅದೇ ದಿನಕ್ಕೆ ಘೋಷಿಸಿದ್ದಾರೆ. ಇದರ ಬಗ್ಗೆ ಚಿತ್ರೋದ್ಯಮದ ಮಂದಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಆದರೆ ಅಮೀರ್ ಖಾನ್, 'ಕೆಜಿಎಫ್ 2' ಸಿನಿಮಾದ ಮೇಲಿನ ಜಿದ್ದಿನಿಂದಲ ತಮ್ಮ ಸಿನಿಮಾವನ್ನು ಅದೇ ದಿನ ಬಿಡುಗಡೆ ಮಾಡುತ್ತಿಲ್ಲ. ಅಸಲಿಗೆ ತಮ್ಮ ಸಿನಿಮಾವನ್ನು 'ಕೆಜಿಎಫ್ 2 ' ಸಿನಿಮಾ ಬಿಡುಗಡೆ ದಿನದಂದೇ ಬಿಡುಗಡೆ ಮಾಡುತ್ತಿರುವುದಕ್ಕೆ ಯಶ್ ಸೇರಿದಂತೆ, 'ಕೆಜಿಎಫ್ 2' ಚಿತ್ರತಂಡಕ್ಕೆ ಕ್ಷಮೆ ಕೇಳಿರುವುದಾಗಿ ಅಮೀರ್ ಖಾನ್ ಹೇಳಿದ್ದಾರೆ.

  ಸಿನಿಮೋದ್ಯಮ ವಿಶ್ಲೇಷಕ ಕೋಮಲ್ ನಹಥಾ ಅವರೊಟ್ಟಿಗಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅಮೀರ್ ಖಾನ್, ''ನನ್ನ ಸಿನಿಮಾವನ್ನು 'ಕೆಜಿಎಫ್ 2' ಸಿನಿಮಾದ ಬಿಡುಗಡೆ ದಿನದಂದೇ ಬಿಡುಗಡೆ ಮಾಡುತ್ತಿರುವುದಕ್ಕೆ 'ಕೆಜಿಎಫ್ 2' ತಂಡದ ಬಳಿ ಮನಸಾರೆ ಕ್ಷಮೆ ಕೇಳುತ್ತೇನೆ'' ಎಂದಿದ್ದಾರೆ.

  ಬೈಸಾಖಿ ಹಬ್ಬದಂದೇ ಬಿಡುಗಡೆ ಮಾಡುವ ಇಚ್ಛೆ

  ಬೈಸಾಖಿ ಹಬ್ಬದಂದೇ ಬಿಡುಗಡೆ ಮಾಡುವ ಇಚ್ಛೆ

  ''ಲಾಲ್ ಸಿಂಗ್ ಛಡ್ಡಾ' ಸಿನಿಮಾದಲ್ಲಿ ಮೊದಲ ಬಾರಿಗೆ ನಾನು ಸಿಖ್ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದೇನೆ. ಹಾಗಾಗಿ ಬೈಸಾಖಿ ಹಬ್ಬದ ದಿನದಂದು ಈ ಸಿನಿಮಾ ಬಿಡುಗಡೆ ಆಗುವುದು ಸೂಕ್ತ ಎನಿಸಿತು. ಹಾಗಾಗಿ ನಾನು 'ಲಾಲ್ ಸಿಂಗ್ ಛಡ್ಡಾ' ಸಿನಿಮಾದ ಬಿಡುಗಡೆ ದಿನಾಂಕವನ್ನು ಏಪ್ರಿಲ್ 14 ಕ್ಕೆ ನಿಗದಿಪಡಿಸಿದೆ. ಬೇರೆ ಸಿನಿಮಾಗಳಿಗೆ ತೊಂದರೆ ಕೊಡುವ ಉದ್ದೇಶದಿಂದ ಅಲ್ಲ. ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ದಿನಾಂಕ ನಿಗದಿಯಾಗಿದ್ದರೆ ಅದೇ ದಿನ ನನ್ನ ಸಿನಿಮಾ ಬಿಡುಗಡೆ ಮಾಡುವುದಿಲ್ಲ ನಾನು. ಆದರೆ ಬೈಸಾಖಿ ಹಬ್ಬದ ದಿನವೇ ನನ್ನ ಸಿನಿಮಾ ಬಿಡುಗಡೆ ಆಗುವುದು ಸೂಕ್ತವೆಂಬ ಕಾರಣಕ್ಕೆ ಈ ನಿರ್ಧಾರ ಮಾಡಬೇಕಾಯಿತು'' ಎಂದಿದ್ದಾರೆ ಅಮೀರ್ ಖಾನ್.

  'ಕೆಜಿಎಫ್ 2' ಚಿತ್ರತಂಡದ ಕ್ಷಮೆ ಕೇಳಿ ಬಿಡುಗಡೆ ದಿನಾಂಕ ಘೋಷಣೆ

  'ಕೆಜಿಎಫ್ 2' ಚಿತ್ರತಂಡದ ಕ್ಷಮೆ ಕೇಳಿ ಬಿಡುಗಡೆ ದಿನಾಂಕ ಘೋಷಣೆ

  ''ನಾನು ನನ್ನ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡುವ ಮುನ್ನ 'ಕೆಜಿಎಫ್ 2' ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರ್, ಪ್ರಶಾಂತ್ ನೀಲ್ ಹಾಗೂ ನಾಯಕ ಯಶ್‌ಗೆ ಮನಸಾರೆ ಕ್ಷಮೆ ಕೇಳಿದೆ ಎಂದಿರುವ ಅಮೀರ್ ಖಾನ್. ನಾನು ಅವರಿಗೆ ಪತ್ರ ಬರೆದು ನನ್ನ ಸಿನಿಮಾವನ್ನು ಏಕೆ ಏಪ್ರಿಲ್ 14ರಂದೇ ಬಿಡುಗಡೆ ಮಾಡಲು ಮುಂದಾಗಿದ್ದೇನೆ ಎಂಬುದನ್ನು ವಿವರಿಸಿದೆ. ಅವರು ಸಹ ಬಹಳ ಪ್ರೀತಿಯಿಂದ ನನ್ನ ನಿರ್ಣಯವನ್ನು ಒಪ್ಪಿದರು. ಹಾಗೂ ಸಿನಿಮಾ ಬಿಡುಗಡೆ ಮಾಡುವಂತೆ ಹೇಳಿದರು'' ಎಂದಿದ್ದಾರೆ ಅಮೀರ್ ಖಾನ್.

  ಯಶ್ ಜೊತೆ ಮಾತುಕತೆ ನಡೆಸಿದೆ: ಅಮೀರ್ ಖಾನ್

  ಯಶ್ ಜೊತೆ ಮಾತುಕತೆ ನಡೆಸಿದೆ: ಅಮೀರ್ ಖಾನ್

  ಅಷ್ಟೇ ಅಲ್ಲದೆ, ನಟ ಯಶ್‌ ಜೊತೆ ಮಾತನಾಡಿದ್ದಾಗಿಯೂ ಹೇಳಿರುವ ಅಮೀರ್ ಖಾನ್, ''ನಾನು ಯಶ್‌ ಜೊತೆಗೆ ತೆರೆದ ಹೃದಯದಿಂದ ಸುದೀರ್ಘವಾಗಿ ಮಾತುಕತೆ ನಡೆಸಿದೆ. 'ಕೆಜಿಎಫ್' ಸಿನಿಮಾ ಸರಣಿಯ ಅಭಿಮಾನಿಯಾಗಿರುವ ಬಗ್ಗೆಯೂ ಹೇಳಿದೆ. ನನ್ನದು ಕೌಟುಂಬಿಕ ಹಾಗೂ ಪ್ರೇಮ ಕತೆ, 'ಕೆಜಿಎಫ್ 2' ಆಕ್ಷನ್ ಸಿನಿಮಾ ಆಗಿರುವ ಕಾರಣ ಒಬ್ಬರ ಸಿನಿಮಾದ ಕಲೆಕ್ಷನ್ ಅನ್ನು ಇನ್ನೊಂದು ಸಿನಿಮಾ ಒಡೆಯುವುದಿಲ್ಲ ಎಂದೂ ಯಶ್‌ಗೆ ಮನದಟ್ಟು ಮಾಡಿಸಿದೆ'' ಎಂದಿದ್ದಾರೆ ಅಮೀರ್ ಖಾನ್.

  ಯಶ್‌ ಸಿನಿಮಾಕ್ಕೆ ಪ್ರಚಾರ ನೀಡುತ್ತೇನೆ: ಅಮೀರ್ ಖಾನ್

  ಯಶ್‌ ಸಿನಿಮಾಕ್ಕೆ ಪ್ರಚಾರ ನೀಡುತ್ತೇನೆ: ಅಮೀರ್ ಖಾನ್

  ಯಶ್ ಅನ್ನು ಹೊಗಳಿರುವ ಅಮೀರ್ ಖಾನ್, ''ಯಶ್‌ ಜೊತೆ ಮಾತನಾಡಿದ್ದು ಖುಷಿ ಕೊಟ್ಟಿತು. ಯಶ್‌ನ ಮುಂದಿನ ಸಿನಿಮಾಗಳನ್ನು ನಾನು ಸ್ವಯಂಪ್ರೇರಿತವಾಗಿ ಪ್ರಚಾರ ಮಾಡುತ್ತೇನೆ. ಅಷ್ಟೇ ಅಲ್ಲದೆ ಏಪ್ರಿಲ್ 14 ರಂದು 'ಕೆಜಿಎಫ್ 2' ಸಿನಿಮಾವನ್ನು ಚಿತ್ರಮಂದಿರಕ್ಕೆ ಹೋಗಿ ವೀಕ್ಷಣೆ ಮಾಡುತ್ತೇನೆ'' ಎಂದಿದ್ದಾರೆ ಅಮೀರ್ ಖಾನ್. 'ಲಾಲ್ ಸಿಂಗ್ ಛಡ್ಡಾ' ಸಿನಿಮಾವು ಹಾಲಿವುಡ್‌ನ 'ಫಾರೆಸ್ಟ್ ಗಂಪ್' ಸಿನಿಮಾದ ರೀಮೇಕ್ ಆಗಿದೆ. ಸಿನಿಮಾದಲ್ಲಿ ಕರೀನಾ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ.

  English summary
  Aamir Khan said he apologized to KGF 2 team along with Yash for release date clash with Lal Singh Chaddha. He said He also fan of KGF franchise.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X