For Quick Alerts
  ALLOW NOTIFICATIONS  
  For Daily Alerts

  ಹಣ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೆವು: ಅಮೀರ್ ಖಾನ್

  |

  ಅಮೀರ್ ಖಾನ್ ಇಂದು ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲೊಬ್ಬರು. ಅಷ್ಟೇ ಅಲ್ಲ ಬುದ್ಧಿವಂತ ನಿರ್ಮಾಪಕ ಸಹ. ಆದರೆ ಒಂದು ಕಾಲದಲ್ಲಿ ಇದ್ದ ಹಣವನ್ನೆಲ್ಲ ಕಳೆದುಕೊಂಡು ಅವರ ಕುಟುಂಬವು ರಸ್ತೆಪಾಲಾಗಿತ್ತಂತೆ!

  ಹೌದು, ಅಮೀರ್ ಖಾನ್‌ ತಂದೆ ಮಾಡಿದ ತಪ್ಪಿಗೆ ಅವರ ಕುಟುಂಬ ಪೂರ್ತಿ ರಸ್ತೆಗೆ ಬರುವ ಸನ್ನಿವೇಶ ಎದುರಿಸಿತ್ತು. ಈ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಅಮೀರ್ ಹೇಳಿಕೊಂಡಿದ್ದಾರೆ.

  ಅಮೀರ್ ಖಾನ್ ತಂದೆ ಸಿನಿಮಾ ನಿರ್ಮಾಪಕರಾಗಿದ್ದವರು. ಜೊತೆಗೆ ಅವರ ಚಿಕ್ಕಪ್ಪನೂ ಸಿನಿಮಾ ನಿರ್ಮಾಪಕರಾಗಿದ್ದರು. ಆದರೆ ತಂದೆಯ ಕೆಲವು ಕೆಟ್ಟ ನಿರ್ಣಯಗಳಿಂದಾಗಿ ಅಮೀರ್ ಖಾನ್ ಕುಟುಂಬ ಬಹಳ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು.

  ತಂದೆಗೆ ವ್ಯವಹಾರ ಜ್ಞಾನ ಇರಲಿಲ್ಲ: ಅಮೀರ್ ಖಾನ್

  ತಂದೆಗೆ ವ್ಯವಹಾರ ಜ್ಞಾನ ಇರಲಿಲ್ಲ: ಅಮೀರ್ ಖಾನ್

  ''ನನ್ನ ತಂದೆ 'ಪ್ಯಾಷನೇಟ್' ಸಿನಿಮಾ ನಿರ್ಮಾಪಕರಾಗಿದ್ದರು ಆದರೆ ಅವರಿಗೆ ವ್ಯವಹಾರ ಜ್ಞಾನ ಇರಲಿಲ್ಲ. ಇದೇ ಕಾರಣದಿಂದ ಹಲವಾರು ಬಾರಿ ಅವರು ಸೋತರು. ಒಂದು ಸಿನಿಮಾವನ್ನು ನಿರ್ಮಿಸಲು ಐದು ವರ್ಷ ತೆಗೆದುಕೊಂಡರೆ, ಮತ್ತೊಂದನ್ನು ನಿರ್ಮಿಸಲು ಮೂರು ವರ್ಷ ತೆಗೆದುಕೊಂಡರು' ಎಂದಿದ್ದಾರೆ ಅಮೀರ್ ಖಾನ್.

  ಕುಟುಂಬ ರಸ್ತೆಗೆ ಬರುವುದರಲ್ಲಿತ್ತು: ಅಮೀರ್ ಖಾನ್

  ಕುಟುಂಬ ರಸ್ತೆಗೆ ಬರುವುದರಲ್ಲಿತ್ತು: ಅಮೀರ್ ಖಾನ್

  ''ಒಂದು ಸಮಯದಲ್ಲಂತೂ ಇರುವ ಹಣವನ್ನೆಲ್ಲ ಕಳೆದುಕೊಂಡು ದೊಡ್ಡ ಮೊತ್ತದ ಸಾಲ ಮಾಡಿಕೊಂಡುಬಿಟ್ಟಿದ್ದರು. ಆಗ ನಮ್ಮ ಇಡೀಯ ಕುಟುಂಬ ರಸ್ತೆಗೆ ಬರುವುದೊಂದೇ ಬಾಕಿ ಇತ್ತು. ಆಗ ಯಾರದ್ದೊ ಸಹಾಯ ದೊರೆತು ಬಚಾವಾದೆವು'' ಎಂದಿದ್ದಾರೆ ಅಮೀರ್ ಖಾನ್.

  ಮನೆ ನಡೆಸಲು ಉದ್ಯೋಗಕ್ಕೆ ಹೊರಟಿದ್ದರು: ಅಮೀರ್ ಖಾನ್

  ಮನೆ ನಡೆಸಲು ಉದ್ಯೋಗಕ್ಕೆ ಹೊರಟಿದ್ದರು: ಅಮೀರ್ ಖಾನ್

  ''ನನ್ನ ತಂದೆ ಒಮ್ಮ ತಮ್ಮ ಪದವಿಯ ಸರ್ಟಿಫಿಕೇಟ್‌ಗಳನ್ನು ಹುಡುಕುತ್ತಿದ್ದರಂತೆ. ತಾಯಿ ಏನಾಯ್ತೆಂದು ಕೇಳಿದಾಗ ಎಲ್ಲ ಹಣ ಕಳೆದುಕೊಂಡಿದ್ದೇನೆ, ನಾನು ಯಾವುದಾದರೂ ಉದ್ಯೋಗಕ್ಕೆ ಸೇರುತ್ತೇನೆ ಎಂದಿದ್ದರಂತೆ. ಇದನ್ನು ನನ್ನ ತಾಯಿ ನನಗೆ ಹೇಳಿದ್ದರು. ಸಿನಿಮಾ ನಿರ್ಮಾಪಕ ಆಗಿದ್ದವರು, ತಮ್ಮ 50 ನೇ ವಯಸ್ಸಿನಲ್ಲಿ ಕೆಲಸಕ್ಕೆ ಹೋಗುತ್ತೇನೆ ಎಂದರೆ ಹೇಗಾಗಿರಬೇಡ' ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಅಮೀರ್ ಖಾನ್.

  ಬ್ರಾಹ್ಮಣರನ್ನು ಅಪಮಾನಿಸಿದ್ದಕ್ಕೆ ಚೇತನ್ ವಿರುದ್ಧ FIR ದಾಖಲಿಸಿದ ಪೊಲೀಸ್ | Filmibeat Kannada
  ಹಲವು ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ

  ಹಲವು ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ

  ಅಮೀರ್ ಖಾನ್ ಈಗ ಭಾರತದ ದೊಡ್ಡ ಸ್ಟಾರ್‌ ನಟ. ಬುದ್ಧಿವಂತ ನಿರ್ಮಾಪಕ ಸಹ. 'ಲಗಾನ್', 'ತಾರೆ ಜಮೀನ್ ಪರ್', 'ತಲಾಷ್', 'ದಂಗಲ್' ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ ಅಮೀರ್ ಖಾನ್. ಪ್ರಸ್ತುತ ನಟಿಸುತ್ತಿರುವ 'ಲಾಲ್ ಸಿಂಗ್ ಛಡ್ಡಾ' ಸಿನಿಮಾವನ್ನೂ ಅವರೇ ನಿರ್ಮಾಣ ಮಾಡಿದ್ದಾರೆ.

  English summary
  Aamir Khan's family went bankrupt and almost on the roads due to his father's bad decision making.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X