For Quick Alerts
  ALLOW NOTIFICATIONS  
  For Daily Alerts

  'ಲಾಲ್ ಸಿಂಗ್ ಚಡ್ಡಾ' 57 ಸಾವಿರ ಅಡ್ವಾನ್ಸ್ ಬುಕಿಂಗ್: ಆಮಿರ್ ಸಿನಿಮಾ ಭವಿಷ್ಯವೇನು?

  |

  ಮಕಾಡೆ ಮಲಗಿದ್ದ ಬಾಲಿವುಡ್ ಬಾಕ್ಸಾಫೀಸ್‌ಗೆ ಸೂಪರ್‌ಸ್ಟಾರ್ ಆಮಿರ್ ಖಾನ್ ಸಿನಿಮಾ ಆಸರೆಯಾಗಬಹುದೇ? ನಾಳೆ (ಆಗಸ್ಟ್ 11) ರಿಲೀಸ್ ಆಗುತ್ತಿರುವ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮೋಡಿ ಮಾಡಬಹುದೇ? ಪ್ರಶ್ನೆಗೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

  'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಬಿಡುಗಡೆಗೆ ಐದು ದಿನಗಳಿದೆ ಅನ್ನುವಾಗಲೇ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಓಪನ್ ಮಾಡಲಾಗಿತ್ತು. ಅಲ್ಲಿಂದ ಇಲ್ಲಿವರೆಗೂ ಆಮಿರ್ ಖಾನ್ ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ ಎಷ್ಟಾಗಿದೆ? ಅನ್ನೋದೇ ಕುತೂಹಲ. ಬ್ಯಾಕ್ ಟು ಬ್ಯಾಕ್ ರಜಾ ದಿನಗಳು ಇರೋದ್ರಿಂದ 'ಲಾಲ್ ಸಿಂಗ್ ಚಡ್ಡಾ' ಅಡ್ವಾನ್ಸ್ ಬುಕಿಂಗ್‌ನಿಂದ ಎಷ್ಟು ಹಣ ಮಾಡಿದೆ ಅನ್ನೋ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.

  ಮೆಗಾಸ್ಟಾರ್ ಚಿರಂಜೀವಿ ಜೊತೆ ಕೌಟುಂಬಿಕ ಸಿನಿಮಾ ಮಾಡ್ತಾರಂತೆ ಆಮಿರ್ ಖಾನ್!ಮೆಗಾಸ್ಟಾರ್ ಚಿರಂಜೀವಿ ಜೊತೆ ಕೌಟುಂಬಿಕ ಸಿನಿಮಾ ಮಾಡ್ತಾರಂತೆ ಆಮಿರ್ ಖಾನ್!

  ಒಂದು ದಿನ ಮುನ್ನವೇ ಆಮಿರ್ ಖಾನ್ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಲೆಕ್ಕಾಚಾರವನ್ನು ಬಾಲಿವುಡ್‌ ಮಾಧ್ಯಮಗಳು ವರದಿ ಮಾಡಿವೆ. ಈ ವರದಿ ಪ್ರಕಾರ, 'ಲಾಲ್ ಸಿಂಗ್ ಚಡ್ಡಾ' ಅಂದ್ಕೊಂಡ ಸಾಧನೆಯನ್ನೇನು ಮಾಡಿಲ್ಲ. ಹಾಗಿದ್ದರೆ, ಕಳೆದ ಐದು ದಿನಗಳಲ್ಲಿ ಆಮಿರ್ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಎಷ್ಟಾಗಿದೆ? ಈ ಸಿನಿಮಾ ಭವಿಷ್ಯವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಆಮಿರ್ ಖಾನ್ ಸಿನಿಮಾ ಭವಿಷ್ಯ ಹೇಗಿದೆ?

  ಆಮಿರ್ ಖಾನ್ ಸಿನಿಮಾ ಭವಿಷ್ಯ ಹೇಗಿದೆ?

  'ಲಾಲ್‌ ಸಿಂಗ್ ಚಡ್ಡಾ' 2022ರ ಅತೀ ದೊಡ್ಡ ರಿಲೀಸ್ ಎಂದೇ ನಂಬಲಾಗಿತ್ತು. ಆಗಸ್ಟ್ 11ರಂದು ರಿಲೀಸ್ ಆಗುತ್ತಿರುವ ಸಿನಿಮಾ ಕಲೆಕ್ಷನ್ ಮೇಲೆ ಎಲ್ಲರ ಕಣ್ಣು ಇದೆ. ಹೀಗಾಗಿ 5 ದಿನಗಳ ಹಿಂದೆನೇ ಅಡ್ವಾನ್ಸ್ ಬುಕಿಂಗ್ ಶುರುವಾಗಿತ್ತು. ಇನ್ನೇನು ಒಂದು ದಿನ ಇದೆ ಅನ್ನುವಾಗಲೂ ಅಡ್ವಾನ್ಸ್ ಬುಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ ಎನ್ನಲಾಗಿದೆ. ಮೂರು ನ್ಯಾಷನಲ್ ಚೈನ್‌ಗಳಾದ ಪಿವಿಆರ್, ಐನಾಕ್ಸ್, ಸಿಪೊಲಿಸ್ ಅಂತಹ ಮಲ್ಟಿಪ್ಲೆಕ್ಸ್‌ನಲ್ಲಿ ಅದ್ಭುತ ರೆಸ್ಪಾನ್ಸ್ ಸಿಕ್ಕಿಲ್ಲ ಎಂದು ವರದಿಯಾಗಿದೆ. ಇಂದು (ಆಗಸ್ಟ್ 10) ಬೆಳಗ್ಗೆ ವರೆಗೂ ಈ ಮೂರು ಚೈನ್‌ಗಳಲ್ಲಿ ಕೇವಲ 30 ಸಾವಿರ ಟಿಕೆಟ್ ಅಡ್ವಾನ್ಸ್ ಬುಕಿಂಗ್ ಆಗಿದೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ.

  ಬಾಯ್‌ಕಾಟ್ ಲೆಕ್ಕಕ್ಕಿಲ್ಲ: ಅಡ್ವಾನ್ಸ್ ಬುಕಿಂಗ್ಸ್‌ನಲ್ಲೇ ಕೋಟಿಗಟ್ಟಲೆ ಬಾಚಿದ ಆಮಿರ್ ಖಾನ್ಬಾಯ್‌ಕಾಟ್ ಲೆಕ್ಕಕ್ಕಿಲ್ಲ: ಅಡ್ವಾನ್ಸ್ ಬುಕಿಂಗ್ಸ್‌ನಲ್ಲೇ ಕೋಟಿಗಟ್ಟಲೆ ಬಾಚಿದ ಆಮಿರ್ ಖಾನ್

  ಆಡ್ವಾನ್ಸ್ ಟಿಕೆಟ್ ಬುಕಿಂಗ್ ಎಷ್ಟು?

  ಆಡ್ವಾನ್ಸ್ ಟಿಕೆಟ್ ಬುಕಿಂಗ್ ಎಷ್ಟು?

  ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್‌ಗಳಲ್ಲಿ ಆಮಿರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಹೆಚ್ಚು ಟಿಕೆಟ್‌ಗಳು ಬುಕಿಂಗ್ ಆಗಿಲ್ಲ. ಬಾಲಿವುಡ್ ಹಂಗಾಮ ವರದಿ ಪ್ರಕಾರ, ಈ ಸಿನಿಮಾ ಟಿಕೆಟ್ ಆಗಸ್ಟ್ 10ರ ಬೆಳಗ್ಗೆ ವರೆಗೂ ಸುಮಾರು 57 ಸಾವಿರ ಟಿಕೆಟ್ ಬುಕ್ ಆಗಿರಬಹುದು ಎಂದು ವರದಿಯಾಗಿದೆ. ಈ ಮೂಲಕ ಮೊದಲ ದಿನಕ್ಕೆ ಕೇವಲ 57 ಸಾವಿರ ಟಿಕೆಟ್ ಸೇಲ್ ಆಗಿದ್ದು, ಕಾರ್ತಿಕ್ ಆರ್ಯನ್ ಅಭಿನಯದ 'ಭೂಲ್ ಭುಲಯ್ಯಾ 2' ಸಿನಿಮಾದ ಅಡ್ವಾನ್ಸ್ ಬುಕಿಂಗ್‌ಗಿಂತ ಶೇ. 50ರಷ್ಟು ಕಡಿಮೆ ಎನ್ನಲಾಗಿದೆ. 'ಭೂಲ್ ಭುಲಯ್ಯಾ 2' ಅಂದಾಜು 1.05 ಲಕ್ಷ ಟಿಕೆಟ್ ಬುಕಿಂಗ್ ಆಗಿತ್ತು.

  ಎಷ್ಟು ಟಿಕೆಟ್ ಸೇಲ್ ಆಗಬಹುದು?

  ಎಷ್ಟು ಟಿಕೆಟ್ ಸೇಲ್ ಆಗಬಹುದು?

  'ಲಾಲ್ ಸಿಂಗ್ ಚಡ್ಡಾ' ಮೊದಲ ಶೋ ಹೊತ್ತಿಗೆ ಸುಮಾರು 62 ಸಾವಿರ ಟಿಕೆಟ್ ಅಡ್ವಾನ್ಸ್ ಬುಕ್ ಆಗಬಹುದು. ಭಾರತದಾದ್ಯಂತ ಸುಮಾರು 1.10 ಲಕ್ಷ ಟಿಕೆಟ್ ಸೇಲ್ ಆಗಬಹುದು ಎಂದು ಅಂದಾಜಿಸಲಾಗಿದೆ. ಇದು ವರುಣ್ ಧವನ್ ಸಿನಿಮಾ 'ಜುಗ್ ಜುಗ್ ಜಿಯೋ'ಗಿಂತ ಶೇ.5 ರಷ್ಟು ಅಧಿಕ ಹಾಗೂ 'ಭೂಲ್ ಭುಲಯ್ಯಾ' ಸಿನಿಮಾಗಿಂತ ಶೇ.45 ರಷ್ಟು ಕಡಿಮೆ ಎಂದು ಲೆಕ್ಕಹಾಕಲಾಗಿದೆ. ಹೀಗಾಗಿ 'ಲಾಲ್ ಸಿಂಗ್ ಚಡ್ಡಾ' ಫಸ್ಟ್ ಡೇ ಕಲೆಕ್ಷನ್ ಬಗ್ಗೆ ಕುತೂಹಲ ಮೂಡಿದೆ.

  ರಕ್ಷಾ ಬಂಧನ್ Vs ಲಾಲ್ ಸಿಂಗ್ ಚಡ್ಡಾ

  ರಕ್ಷಾ ಬಂಧನ್ Vs ಲಾಲ್ ಸಿಂಗ್ ಚಡ್ಡಾ

  ಬಾಲಿವುಡ್‌ನ ಎರಡು ಬಿಗ್ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆಮಿರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಒಂದ್ಕಡೆಯಾದರೆ, ಇನ್ನೊಂದ್ಕಡೆ ಅಕ್ಷಯ್ ಕುಮಾರ್ ಸಿನಿಮಾ 'ರಕ್ಷಾ ಬಂಧನ್' ಮತ್ತೊಂದು. ಈ ಎರಡೂ ಸಿನಿಮಾಗೂ ಬಾಕ್ಸಾಫೀಸ್‌ನಲ್ಲಿ ಹೇಗೆ ಮೋಡಿ ಮಾಡುತ್ತೆ ಅನ್ನೋ ಕುತೂಹಲವಂತೂ ಇದ್ದೇ ಇದೆ.

  English summary
  Aamir Khan Starrer Laal Singh Chaddha Advance Booking Report, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X