For Quick Alerts
  ALLOW NOTIFICATIONS  
  For Daily Alerts

  ರಜನಿ ಪಾತ್ರವನ್ನ ಅಮೀರ್ ಮಾಡಬೇಕಿತ್ತು: ರಿಜೆಕ್ಟ್ ಮಾಡಲು ರಜನಿನೇ ಕಾರಣ.!

  By Bharath Kumar
  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸುತ್ತಿರುವ ಬಹುಕೋಟಿ ವೆಚ್ಚದ, ಬಹುನಿರೀಕ್ಷೆಯ ಸಿನಿಮಾ '2.0' (ರೋಬೋ-2) ಬಿಡುಗಡೆಗೆ ಸಿದ್ದವಾಗುತ್ತಿದೆ. ಭಾರತ ಚಿತ್ರರಂಗದ ಎಲ್ಲ ದಾಖಲೆಗಳನ್ನ ಈ ಸಿನಿಮಾ ಬ್ರೇಕ್ ಮಾಡಲಿದೆ ಎನ್ನುವುದು ಎಲ್ಲ ಸಿನಿಪಂಡಿತರ ಅಭಿಪ್ರಾಯ.

  ಹೀಗಿರುವಾಗ, ಬಾಲಿವುಡ್ ನಟ ಅಮೀರ್ ಖಾನ್ ಕುತೂಹಲಕಾರಿ ಸಂಗತಿಯೊಂದನ್ನ ಬಿಚ್ಚಿಟ್ಟಿದ್ದಾರೆ. ಹೌದು, '2.0' ಚಿತ್ರದಲ್ಲಿ ರಜನಿಕಾಂತ್ ನಿರ್ವಹಿಸುತ್ತಿರುವ ಪಾತ್ರದಲ್ಲಿ ಅಮೀರ್ ಖಾನ್ ನಟಿಸಬೇಕಿತ್ತಂತೆ. ಈ ಪಾತ್ರಕ್ಕಾಗಿ ನಿರ್ದೇಶಕ ಶಂಕರ್ ಅಮೀರ್ ಗೆ ಆಫರ್ ಮಾಡಿದ್ದರಂತೆ. ಆದ್ರೆ, ಅಮೀರ್ ಖಾನ್ ನಯವಾಗಿ ತಿರಸ್ಕರಿಸಿದ್ದರಂತೆ.

  ವಿಡಿಯೋ: 'ಹಾಲಿವುಡ್'ನ ಮೀರಿಸುವಂತೆ ಸಿದ್ದವಾಗಿದೆ '2.0' ಚಿತ್ರ

  ಅಂದ್ಹಾಗೆ, ರೋಬೋ 2 ಚಿತ್ರವನ್ನ ಅಮೀರ್ ಖಾನ್ ರಿಜೆಕ್ಟ್ ಮಾಡಲು ರಜನಿಕಾಂತ್ ಅವರೇ ಕಾರಣವಂತೆ. ಈ ವಿಷ್ಯವನ್ನ ಸ್ವತಃ ಅಮೀರ್ ಖಾನ್ ಖಾಸಗಿ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

  ''ನಿರ್ದೇಶಕ ಶಂಕರ್ ಮತ್ತು ರಜನಿಕಾಂತ್ ಇಬ್ಬರಿಗೂ ನಾನು ದೊಡ್ಡ ಅಭಿಮಾನಿ. ಶಂಕರ್ ಅವರ ಆ ಸ್ಕ್ರಿಪ್ಟ್ ಅದ್ಭುತವೆನಿಸತ್ತು. ಆ ಪಾತ್ರದಲ್ಲಿ ನನ್ನನ್ನು ನಾನು ಊಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನನ್ನ ಕಣ್ಣ ಮುಂದೆ ರಜನಿಕಾಂತ್ ಸರ್ ಅವರೇ ಬರ್ತಿದ್ದಾರೆ. ಈ ಪಾತ್ರವನ್ನ ಅವರೇ ಮಾಡಬೇಕು. ಅವರು ಬಿಟ್ಟರೇ ಬೇರೆ ಯಾರಿಂದಲೂ ಸಾಧ್ಯವಿಲ್ಲವೆನಿಸಿತು. ಅದಕ್ಕೆ ನಾನು ಮಾಡಲ್ಲ, ದಯವಿಟ್ಟು ರಜನಿಕಾಂತ್ ಅವರ ಮಾಡಬೇಕು ಎಂದು ಶಂಕರ್ ಅವರಿಗೆ ಹೇಳಿದ್ದೆ ಎಂದು ಅಮೀರ್ ತಿಳಿಸಿದ್ದಾರೆ.

  'ಮಹಾಭಾರತ' ಸಿನಿಮಾ ಮಾಡೋದು ಈ ನಟನ ಕನಸಂತೆ.!

  ಅಷ್ಟೇ ಅಲ್ಲದೇ ಈ ಚಿತ್ರವನ್ನ ಮಾಡುವಂತೆ ಸ್ವತಃ ರಜನಿಕಾಂತ್ ಅವರೇ ಅಮೀರ್ ಖಾನ್ ಗೆ ಫೋನ್ ಮಾಡಿ ಹೇಳಿದ್ದರಂತೆ. ಆದ್ರೆ, ಅಮೀರ್ ಖಾನ್ ಇಲ್ಲ ಸರ್ ನೀವೇ ಮಾಡಬೇಕು ಎಂದು ತಿಳಿಸಿದರಂತೆ.

  ರಜನಿಕಾಂತ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ 2.0 ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಖಳನಾಯಕನಾಗಿ ನಟಿಸಿದ್ದಾರೆ. 2018ರ ಜನವರಿಗೆ ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಗಳಿವೆ.

  English summary
  Aamir Khan reveals he was offered Rajinikanth’s role in 2.0. but he was rejects. ಅಮೀರ್ ಖಾನ್ ಗೆ ರೋಬೋ ಚಿತ್ರದಲ್ಲಿ ಅಭಿನಯಿಸಲು ಆಫರ್ ಬಂದಿತ್ತು. ಆದ್ರೆ, ಅಮೀರ್ ಖಾನ್ ರಿಜೆಕ್ಟ್ ಮಾಡಿದ್ರು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X